ಬೀದರ – ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಮಯ್ಯ, ಡಿಕೆಶಿ ಸೇರಿ ಎದ್ದೇಳು ಮಂಜುನಾಥ ಹಾಡು ಹಾಡಿದರೂ ಕಾಂಗ್ರೆಸ್ ನ ಯಾವ ಮಂತ್ರಿಯೂ ಎದ್ದೇಳಲೇ ಇಲ್ಲ ಹೀಗಾಗಿ ಗತಿಯಿಲ್ಲದೆ ಕಾಂಗ್ರೆಸ್ ನ ಸದಸ್ಯತ್ವ ಪಡೆಯದೇ ಇರುವಂಥ ತಮ್ಮ ತಮ್ಮ ಹೆಂಡತಿ, ಮಕ್ಕಳು, ಅಳಿಯಂದಿರುಗಳನ್ನು ತಂದು ಚುನಾವಣೆಗೆ ನಿಲ್ಲಿಸುತ್ತಿದ್ದಾರೆ. ಅವರನ್ನೂ ಬೀದಿಗೆ ತಂದಿದ್ದಾರೆ. ಈ ಕಾಂಗ್ರೆಸ್ ನ ಯೋಗ್ಯತೆಗೆ ಯಾವ ಕಾರ್ಯಕರ್ತರೂ ಸಿಗಲಿಲ್ಲವಾ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಲೇವಡಿ ಮಾಡಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದರೆ ಬಡತನ ಗ್ಯಾರಂಟಿ, ಬಾಂಬ್ ಗ್ಯಾರಂಟಿ, ವಿಧಾನ ಸೌಧದಲ್ಲಿಯೇ ಪಾಕಿಸ್ತಾನ ಜಿಂದಾಬಾದ್ ಕೂಗುತ್ತಾರೆ, ನೀರಿಲ್ಲ ಅನ್ನೋದು ಗ್ಯಾರಂಟಿ ಎಂದರು.
ಜನರಿಗೆ ಮೋದಿಯವರ ಗ್ಯಾರಂಟಿ ಗಳ ಮೇಲೆ ವಿಶ್ವಾಸ ಇದೆ ಹೀಗಾಗಿ ಈ ಸಲ ಬಿಜೆಪಿ ನಾನೂರು ಗಡಿ ದಾಟುವುದು ನಿಶ್ಚಿತ. ಬೀದರನಲ್ಲಿ ಭಗವಂತ ಖೂಬಾ ಅವರು ಗೆಲ್ಲುವುದು ಕೂಡ ಖಂಡಿತ ಎಂದರು.
ಈಗಾಗಲೇ ಕೆಲವು ಟಿಕೆಟ್ ಗಳನ್ನು ಘೋಷಿಸಲಾಗಿದೆ ನಾಳೆಗೆ ಉಳಿದ ಟಿಕೆಟ್ ಘೋಷಣೆ ಮಾಡಿ ಎಲ್ಲಾ ೨೮ ಅಭ್ಯರ್ಥಿಗಳ ಹೆಸರು ಫೈನಲ್ ಮಾಡಲಾಗುತ್ತದೆ ಎಂದು ಆರ್. ಅಶೋಕ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬೀದರ ಲೋಕಸಭಾ ಚುನಾವಣಾ ಅಭ್ಯರ್ಥಿ ಭಗವಂತ ಖೂಬಾ ಇದ್ದರು.
ವರದಿ: ನಂದಕುಮಾರ ಕರಂಜೆ, ಬೀದರ