ಹಾಸನದ ಒಡನಾಡಿ ಚಿತ್ರಕಲಾ ಬಳಗ ವತಿಯಿಂದ ಚಿತ್ರ ಕಲಾವಿದರು ಚಿತ್ರಕಲಾ ಶಿಕ್ಷಕರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಸಂತಕುಮಾರ್ ಅವರ ನೂತನ ರಚನೆಯ ಏಕವ್ಯಕ್ತಿ ಪ್ರಕೃತಿ ಚಿತ್ರಕಲಾ ಪ್ರದರ್ಶನವನ್ನು ಹಾಸನಾಂಬ ಕಲಾಕ್ಷೇತ್ರದ ಹೊರ ಆವರಣದಲ್ಲಿ ದಿ. ಜೂನ್ 30 ಮತ್ತು ಜುಲೈ 1 ರಂದು ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆವರೆಗೆ ಏರ್ಪಡಿಸಲಾಗಿದೆ.
ಭಾನುವಾರ ಜೂನ್ 30ರ ಬೆ.10.40ಕ್ಕೆ ಹಾಸನ ಜಿಲ್ಲಾಧಿಕಾರಿಗಳು ಶ್ರೀಮತಿ ಸಿ.ಸತ್ಯಭಾಮರವರು ಕಾರ್ಯಕ್ರಮ ಉದ್ಘಾಟಿಸುವರು.
ವಿಶೇಷ ಆಹ್ವಾನಿತರಾಗಿ ಅಂತಾರಾಷ್ಟ್ರೀಯ ಖ್ಯಾತ ಚಿತ್ರ ಕಲಾವಿದರು ಕೆ.ಟಿ. ಶಿವಪ್ರಸಾದ್‍ರವರು ಭಾಗವಹಿಸುವರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಫರ್ದೆಯಲ್ಲಿ ಭಾಗವಹಿಸಿ ವಿಜೇತರಿಗೆ ಹಿರಿಯ ಖ್ಯಾತ ಲೇಖಕರು ಗೊರೂರು ಅನಂತರಾಜು, ಹಾಸನ ಬಹುಮಾನ ವಿತರಿಸುವರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ದೂದ್‍ಫಿರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹೆಚ್.ಪಿ.ತಾರನಾಥ್, ಲೇಖಕಿ ಸುವರ್ಣ ಕೆ.ಟಿ.ಶಿವಪ್ರಸಾದ್, ಗಾಯಕಿ ಸುನಂದ ಕೃಷ್ಣ ಭಾಗವಹಿಸುವರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಸಂತಕುಮಾರ್ ಕೋರಿದ್ದಾರೆ.