- Advertisement -
ಡಾ. ಜಗದೀಶ ಎಸ್ ಕಾಬನೆಯವರು ಅಧ್ಯಕ್ಷರಾಗಿರುವ ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆ ಕರ್ನಾಟಕ ವತಿಯಿಂದ ಮಂಗಳೂರಿನ ವೈದ್ಯ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಇವರಿಗೆ ಮುಂಗಾರು ಸಿರಿ ಪ್ರಶಸ್ತಿಯನ್ನು ಇತ್ತೀಚೆಗೆ ನೀಡಲಾಯಿತು.
ವೈದ್ಯಕೀಯ ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಕನ್ನಡ ನಾಡು ನುಡಿ, ನೆಲ, ಜಲ ,ಭಾಷೆ,ರಂಗಭೂಮಿ,ಸಂಗೀತ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ದಿನಾಂಕ 30 ರ ಜೂನ್ 24 ರಂದು ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಶಾಲು,ಹಾರ ಹಾಗೂ ಫಲಕ ಸಹಿತವಾಗಿ ಈ ಪ್ರಶಸ್ತಿಯನ್ನು ನೀಡಲಾಯಿತು.
ಚಿತ್ರರಂಗದ ಕಲಾವಿದರ ಸಹಿತ ಹಲವರು ಮತ್ತು ಅನೇಕ ಕವಿಗಳು ಈ ಕಾರ್ಯಕ್ರಮ ಹಾಗೂ ಜೊತೆಗೆ ನಡೆದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.