spot_img
spot_img

ವಿದ್ಯಾರ್ಥಿಗಳಿಗೆ ಕಾನೂನು ಹಾಗೂ ಸಂಚಾರ ನಿಯಮಗಳ ಅರಿವು ಅಗತ್ಯ – ಎನ್.ಎಸ್.ಒಡೆಯರ

Must Read

ಮೂಡಲಗಿ:-  ವಿದ್ಯಾರ್ಥಿಗಳಿಗೆ ಕಾನೂನು ಹಾಗೂ ಸಂಚಾರ ನಿಯಮಗಳ ಅರಿವು ಅಗತ್ಯವಾಗಿದ್ದು ಪ್ರಸ್ತುತ ವರ್ಷದಲ್ಲಿ ಬದಲಾದ ಕಾನೂನು ಕಾಯ್ದೆಗಳ ತಿಳಿವಳಿಕೆಯ ಜೊತೆಗೆ ಕಾನೂನು ನಿರಪರಾಧಿಗಳ ರಕ್ಷಣೆಗೆ ಹೇಗೆ
ಸಹಾಯಮಾಡುತ್ತದೆ ಎಂಬುದನ್ನು ತಿಳಿವಳಿಕೆ ಹೊಂದುವುದು ಅಗತ್ಯವಿದೆ ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ ಹೆಚ್ಚಾಗಿದ್ದು ವಾಹನ ಚಲಾವಣೆ ಲೈಸನ್ಸ್,
ಹೆಲ್ಮೆಟ್,ಇನ್ಸೂರನ್ಸ್, ಪಾಸಿಂಗ್ ಇಲ್ಲದೇ ವಾಹನ ಚಲಿಸಿ ಅಪಘಾತ ಉಂಟಾದರೆ ಕಾನೂನಿನಲ್ಲಿ ಅಪರಾಧವಾಗುತ್ತದೆ. ಕಾನೂನು ನಿಯಮಗಳಂತೆ ವಾಹನ  ಚಲಾಯಿಸಿ ತಂದೆ ತಾಯಿಗಳು ನೀಡಿದ ಜೀವವನ್ನು ರಕ್ಷಣೆ ಮಾಡಿಕೊಳ್ಳುವದರ
ಜೊತೆಗೆ ಮತ್ತೊಬ್ಬರ ಜೀವವನ್ನು ರಕ್ಷಿಸಿಸಲು ಪೋಲಿಸ್ ಇಲಾಖೆಯ ಜೊತೆಗೆ  ಕೈ ಜೋಡಿಸುವಂತೆ ಮೂಡಲಗಿ ಪೋಲಿಸ ಠಾಣೆಯ ಸಿಬ್ಬಂದಿ ಎನ್. ಎಸ್. ಒಡೆಯರ
ತಿಳಿಸಿದರು.
    ಪಟ್ಟಣದ ಆರ್‌ಡಿಎಸ್ ಕಲಾ ವಾಣಿಜ್ಯ ವಿಜ್ಞಾನ ಹಾಗೂ ಸಮಾಜಕಾರ್ಯ ಪದವಿ ಮಹಾವಿದ್ಯಾಲಯ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಎನ್.ಎಸ್.ಎಸ್.
ಕೋಶದ ವತಿಯಿಂದ ಸಮೀಪದ ದತ್ತು ಗ್ರಾಮ ಮುನ್ಯಾಳದಲ್ಲಿ ಹಮ್ಮಿಕೊಂಡ ಎನ್.ಎಸ್.ಎಸ್. ವಾರ್ಷಿಕ ಶಿಬಿರದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಮುಂದಿನ
ನಾಡಿನ ಪ್ರಜೆಗಳಾಗಿರುವದರಿಂದ ಸಮಾಜ ರಕ್ಷಣೆ ಮತ್ತು ಕಾನೂನು ಪರಿಪಾಲನೆಯಲ್ಲಿ ಮಹತ್ವದಪಾತ್ರ ನಿರ್ವಹಿಸಬೇಕಾಗಿದ್ದು ಸರಿಯಾದ ಕಾನೂನು
ತಿಳಿವಳಿಕೆ ಪಡೆದುಕೊಳ್ಳಿ. ಪೋಲಿಸ ಇಲಾಖೆ ಸಾರ್ವಜನಿಕರ ರಕ್ಷಣೆಗೆ ವಿಶೇಷ ಗಮನ ನೀಡುತ್ತಿದೆ, ಅಪರಾಧ ತಡೆಗಟ್ಟುವಲ್ಲಿ ತಮ್ಮೆಲ್ಲರ ಸಹಕಾರ ಅಗತ್ಯ
ಯಾವುದೇ ವೇಳೆಯಲ್ಲಿ ನಾವು ನಿಮ್ಮ ಸೇವೆಗೆ ಸದಾಸಿದ್ದರಿರುತ್ತೇವೆ. ವಿದ್ಯಾರ್ಥಿಗಳು ಅಪರಾಧಗಳು ಆಗದಂತೆ ಮುನ್ನೆಚ್ಚರಿಕೆ ವಹಿಸುವುದು ಅವಶ್ಯವಿದೆ ಮತ್ತು ಅಪರಾಧಗಳು ನಡೆಯುತ್ತಿದ್ದರೆ ಗೌಪ್ಯವಾಗಿ ಮಾಹಿತಿ
ನೀಡಲು ಮನವಿ ಮಾಡಿದರು.
   ಅತಿಥಿ ಉಪನ್ಯಾಸಕ ಮಲ್ಲಪ್ಪ ಪಾಟೀಲ ಮಾತನಾಡಿ ಸಮಾಜದ ರಕ್ಷಣೆಯಲ್ಲಿ  ಪೋಲಿಸ್ ಇಲಾಖೆ ಪಾತ್ರ ಅವಿಸ್ಮರಣೀಯವಾದದ್ದು ಪೋಲಿಸರು ಕಾನೂನು
ರಕ್ಷಕರಾಗಿ ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದರು.
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿವಾಳ ಸಮಾಜ
ಮುಖಂಡರಾದ ಶಿವಾನಂದ ಮಡಿವಾಳರ ವಹಿಸಿಕೊಂಡು ಮಾತನಾಡಿ ಕಾನೂನು ನಮ್ಮ ರಕ್ಷಣೆಗೆ ಇರುತ್ತದೆ ಅದಕ್ಕೆ ನಾವಲ್ಲರೂ ಗೌರವಕೊಡುವ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಶಿವಾನಂದ ಬಿಳ್ಳೂರ, ಮಡೆಪ್ಪ ಒಡೆಯರ, ಮುತ್ತು ಒಡೆಯರ, ಪಂಚು ಬೆಣ್ಣಿ, ಪ್ರಕಾಶ ಚೌಡಕಿ, ರಾಜು ಪತ್ತಾರ, ಸಂಜೀವ ಮಂಟೂರ ಇತರರು ಹಾಜರಿದ್ದರು.
ಶಿಬಿರಾರ್ಥಿ ಚಂದ್ರಿಕಾ ದರ್ಮಟ್ಟಿ ನಿರೂಪಿಸಿದರು ಶಿಬಿರಾರ್ಥಿ ಸುಕನ್ಯಾ ಬೋಳಿ
ಸ್ವಾಗತಿಸಿದರು ಶಿಬಿರಾರ್ಥಿ ಪ್ರಜ್ವಲ್ ಗುದಗನ್ನವರ ವಂದಿಸಿದರು.
- Advertisement -
- Advertisement -

Latest News

ಶಿವಾಪೂರ(ಹ) ಪ್ರೌಢ ಶಾಲೆಯ ಬಾಲಕಿಯರ ಖೋ ಖೋ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಶಿವಾಪೂರ(ಹ): ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ ಮೂಡಲಗಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ಖೋ ಖೋ ತಂಡ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ, ಬಾಲಕರ...
- Advertisement -

More Articles Like This

- Advertisement -
close
error: Content is protected !!
Join WhatsApp Group