ಬೀದರ – ಕಾರಂಜಾ ಪರಿಹಾರಕ್ಕಾಗಿ ಬೀದರ ಉಸ್ತುವಾರಿ ಸಚಿವರ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ರೈತರು ಒಂದು ಹಂತದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಗೆ ಪ್ರಯತ್ನಿಸಿದ ಘಟನೆ ನಡೆದಿದ್ದು ವಿಷ ಸೇವಿಸಿದ ಮೂವರು ರೈತರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಇದರಿಂದ ಕಾರಂಜಾ ಸಂತ್ರಸ್ತರ ಹೋರಾಟ ತೀವ್ರ ಹೋರಾಟ ಪಡೆದಂತಾಗಿದೆ. ಈ ಮೊದಲು ಕಾರಂಜಾ ಹೋರಾಟ ಆರಂಭಿಸಿದ್ದ ರೈತರು ಪರಿಹಾರಕ್ಕಾಗಿ ೧೫ ದಿನಗಳ ಗಡುವು ನೀಡಿದ್ದರು ಆದರೂ ಸರ್ಕಾರ ಇತ್ತ ಗಮನ ಕೊಡದೇ ಇರುವ ಕಾರಣಕ್ಕೆ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರ ಕಚೇರಿ ಎದುರು ಧರಣಿ ನಡೆಸುತ್ತಿದ್ದ ರೈತರು ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದರು.
ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿದ ಮೂವರು ರೈತರು ಏಕಾಏಕಿ ಅಸ್ವಸ್ಥರಾಗಿದ್ದರಿಂದ ತಕ್ಷಣವೇ ಬೀದರ ಪೊಲೀಸರು ಅವರನ್ನು ಬ್ರಿಮ್ಸ್ ಆಸ್ಪತ್ರೆಗೆ ಸೇರಿಸಿದರು
ಕಾರಂಜಾ ಸಂತ್ರಸ್ತರು ಕಳೆದ ೮೯೦ ದಿನಗಳಿಂದ ಅನಿರ್ಧಿಷ್ಟ ಕಾಲ ಧರಣಿ ನಡೆಸುತ್ತಿದ್ದಾರೆ. ಇನ್ನಾದರೂ ಸರ್ಕಾರ ಕಣ್ಣು ಕಿವಿ ತೆರೆದು ಕಾರಂಜಾ ಸಂತ್ರಸ್ತರ ನೆರವಿಗೆ ಬರುವುದೋ ಕಾದು ನೋಡಬೇಕು.
ವರದಿ : ನಂದಕುಮಾರ ಕರಂಜೆ, ಬೀದರ