ತಲ್ಲೂರು ರಾಯನಗೌಡರ ಸಮಾಜ ಮುಖಿ ಕಾರ್ಯಗಳು ಬಹಳ ಮಹತ್ವ ಪಡೆದಿವೆ – ಡಾ.ವೈ ಬಿ ಕಡಕೋಳ

Must Read

ಮುನವಳ್ಳಿ: “ತಲ್ಲೂರು ರಾಯನಗೌಡರ ಬದುಕು ಸಮಾಜದ ಹಿತ ಚಿಂತನೆ ಜೊತೆಗೆ ಕಿತ್ತೂರು ಚನ್ನಮ್ಮಳ ಜೀವನ ತಿಳಿಸುವಲ್ಲಿ ಬಹಳ ಮಹತ್ವ ಪಡೆದಿದೆ”.ಎಂದು ಡಾ. ವೈ. ಬಿ. ಕಡಕೋಳ ತಿಳಿಸಿದರು.

ಅವರು ಎಂ. ಎಲ್. ಇ. ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಮಕ್ಕಳಿಗೆ ಹಮ್ಮಿಕೊಂಡಿದ್ದ ಓರಿಯಂಟೇಶನ್‌ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯಿನಿ ಪ್ರಭಾವತಿ ತುರಮರಿ ಮಾತನಾಡಿ “ಪೋಷಕರಿಗೆ ಮಕ್ಕಳನ್ನು ಹೆತ್ತರೆ ತಮ್ಮ ಜವಾಬ್ದಾರಿ ಮುಗಿದುಹೋಯಿತು ಅಂತಲ್ಲ. ಅವರನ್ನು ಸಮಾಜಕ್ಕೆ ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ತುಂಬಾ ದೊಡ್ಡದಿರುತ್ತದೆ. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ನಂತರ ನಿಜವಾದ ಶಾಲೆ. ಅದರಂತೆ ಯಾವುದೇ ಮಗುವಿಗೆ ತಂದೆ – ತಾಯಿಯೇ ಮೊದಲ ಗುರು, ನಂತರ ಶಾಲೆಯಲ್ಲಿನ ನಿಜವಾದ ಗುರು. ಇದು ಮನುಷ್ಯರ ವಿಷಯದಲ್ಲಿ ಇಡೀ ವಿಶ್ವದ ತುಂಬಾ ಬೆಳೆದು ಬಂದಿರುವ ಪದ್ಧತಿ. ನಿಮ್ಮ ಮಕ್ಕಳಿಗೆ ನಿಮ್ಮ ಪ್ರೋತ್ಸಾಹ ಮುಖ್ಯ” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಪ್ರತಿ ಶತ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಡಾಕ್ಟರೇಟ್ ಪಡೆದ ವೈ ಬಿ ಕಡಕೋಳ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯಿನಿ ಪ್ರಭಾವತಿ ತುರಮರಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ರಾದ ಉಮೇಶ ಬಾಳಿ ಮಾತನಾಡಿ “ಪ್ರಸಕ್ತ ಸಾಲಿನಲ್ಲಿ ಶಾಲೆಯಲ್ಲಿ ಹಮ್ಮಿಕೊಳ್ಳುವ ಚಟುವಟಿಕೆಗಳನ್ನು ತಿಳಿಸುವ ಮೂಲಕ ಪಾಲಕರು ತಮ್ಮ ಮಕ್ಕಳ ಶಿಕ್ಷಣ ಸಲುವಾಗಿ ಪಾಲಕರ ಸಭೆಯಲ್ಲಿ ಪಾಲ್ಗೊಂಡು ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ಕರೆ ನೀಡಿದರು. ಹುಸೇನ್ ಸಾಬ್ ನದಾಫ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯ ಎ. ವಿ. ರೋಣದ ಮಾತನಾಡಿ ಶಾಲೆಯಲ್ಲಿ ಮಕ್ಕಳಿಗೆ ಹಮ್ಮಿಕೊಂಡಿರುವ ಚಟುವಟಿಕೆಗಳನ್ನು ತಿಳಿಸುವ ಜೊತೆಗೆ ಕಳೆದ ವರ್ಷ ಶಾಲೆಯಲ್ಲಿ ಜರುಗಿದ ಮಹತ್ವದ ಕಾರ್ಯ ಗಳನ್ನು ತಿಳಿಸಿದರು.ಇದೇ ಸಂದರ್ಭದಲ್ಲಿ ಕಳೆದ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಪ್ರತಿ ಶತ 90% ಕ್ಕಿಂತ ಹೆಚ್ಚು ಅಂಕ ಗಳಿಸಿದ ಹೀನಾ ರಾಠೋಡ,ಖುಷಿ ಓಂಕಾರಿ,ಸ್ನೇಹಾ ಕಡಕೋಳ, ಶ್ರಾವಣಿ ಮಲಾಮರಡಿ, ಹರಿಪ್ರಿಯಾ ಸನಕಲ್,ಸಿದ್ದು ಶಾರಬಿರದೆ, ಅರ್ಚನಾ ಬೆಡಸೂರ ಇವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಅಂಜುಮ್ ತೋಟಗಟ್ಟಿ ಕಾರ್ಯಕ್ರಮ ನಿರೂಪಿಸಿದರು. 9ನೇ ತರಗತಿ ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆ ಹೇಳಿದರು. ಸ್ವಾಗತ ಮತ್ತು ಪುಷ್ಪಾರ್ಪಣೆಯನ್ನು ಮುಖ್ಯೋಪಾಧ್ಯಾಯ ಎ. ವ್ಹಿ.ರೋಣದ ನೆರವೇರಿಸಿದರು. ಮಹೇಶ ಗಿಡಮಲ್ಲಪ್ಪಗೋಳ ವಂದಿಸಿದರು

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group