Homeಸುದ್ದಿಗಳುಕುರುಹಿನಶೆಟ್ಟಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಕುರುಹಿನಶೆಟ್ಟಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಭಾಗ್ಯನಗರ ( ಕೊಪ್ಪಳ )- ಕುರುಹಿನಶೆಟ್ಟಿ ಪಂಚ ಕಮಿಟಿ, ಟ್ರಸ್ಟ್, ಮಹಿಳಾ ಮಂಡಳಿ ಮತ್ತು ಯುವಕ ಮಂಡಳಿಯ ವತಿಯಿಂದ 2024-25 ನೇ ಸಾಲಿನ ಹತ್ತನೆಯ ತರಗತಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಉತ್ತಮ ಅಂಕಗಳನ್ನು ಪಡೆದ ಕೊಪ್ಪಳ ಭಾಗ್ಯನಗರದ ಕುರುಹಿನಶೆಟ್ಟಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು.

ಕುರುಹಿನಶೆಟ್ಟಿ ಸಮಾಜದ ಕುಲಗುರುಗಳಾದ ಶ್ರೀಶೈಲ ಮೂಲಪೀಠ ಸೂರ್ಯ ಸಿಂಹಾಸನಾಧೀಶ್ವರ ಆಧಿಭಿಕ್ಷಾವೃತ್ತಿ ಮಠ ಶ್ರೀಶ್ರೀ ಶ್ರೀಮದ್ ಜಗದ್ಗುರು 1008 ನಾಲ್ಮಡಿ ಶ್ರೀ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಿತು.

ಭಾಗ್ಯನಗರ ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷರಾದ ನೀಲಕಂಠಪ್ಪ ಮೈಲಿ ಸೇರಿದಂತೆ ದೇವಸ್ಥಾನದ ಎಲ್ಲಾ ಮಂಡಳಿಗಳ ಅಧ್ಯಕ್ಷರು ಪದಾಧಿಕಾರಿಗಳು ಸಮಾಜ ಬಾಂಧವರು ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು…

ಮಲ್ಲಿಕಾರ್ಜುನ ಪೋಲಕಲ್
ಗಂಗಾವತಿ

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group