ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯಕ್ಕೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ದಿ.19 ರಂದು ಶೈಕ್ಷಣಿಕ ಭೇಟಿ ನೀಡಿ, ಇಲ್ಲಿನ ಕಾರ್ಯ ನಿರ್ವಹಣೆ ಕುರಿತು ಮಾಹಿತಿ ಪಡೆದುಕೊಂಡರು.
ಉಪನಿರ್ದೇಶಕರಾದ ರಾಮಯ್ಯ ಅವರ ಮಾರ್ಗದರ್ಶನದಲ್ಲಿ,ಗ್ರಂಥಪಾಲಕರಾದ ಎಸ್ ಎಸ್ ಸೀಮಿಮಠ ಮತ್ತು ಪ್ರಕಾಶ ಇಚಲಕರಂಜಿ ಅವರು ಗ್ರಂಥಾಲಯದ ವಿವಿಧ ವಿಭಾಗಗಳಾದ, ತಾಂತ್ರಿಕ ವಿಭಾಗದಲ್ಲಿನ ಕಾರ್ಯಗಳು,ಪರಿಚಲನಾ ವಿಭಾಗ, ಸ್ಪರ್ಧಾತ್ಮಕ ಪರೀಕ್ಷೆ ವಿಭಾಗ ಮತ್ತು ಅಂತರ್ಜಾಲ ವಿಭಾಗದಲ್ಲಿನ ಕೆಲಸ ಮತ್ತು ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಂಥಾಲಯದಲ್ಲಿನ ನೊಂದಣಿ ಪ್ರಕ್ರಿಯೆ,ಮಕ್ಕಳ ಗ್ರಂಥಾಲಯದಲ್ಲಿನ ಪುಸ್ತಕಗಳು ಮತ್ತು ಸೌಲಭ್ಯಗಳ ಬಗ್ಗೆ ಮತ್ತು ಆಡಳಿತಾತ್ಮಕ ವಿಷಯಗಳು,ಗ್ರಂಥಾಲಯ ತಂತ್ರಾಂಶದ ಬಗ್ಗೆ ವಿಧ್ಯಾರ್ಥಿಗಳು ತಿಳಿದುಕೊಂಡರು. ಜೊತೆಗೆ ಜಿಲ್ಲಾ ಕೇಂದ್ರ ಗ್ರಂಥಾಲಯದ ಕಚೇರಿಗೂ ಬೇಟಿ ನೀಡಿ ಅಲ್ಲಿನ ಕಾರ್ಯ ನಿರ್ವಹಣೆ ಕುರಿತು ಮಾಹಿತಿ ಪಡೆದುಕೊಂಡರು. ಇದಕ್ಕೂ ಮೊದಲು ಎಲ್ಲಾ ವಿಧ್ಯಾರ್ಥಿಗಳು ಶಹಾಪುರ ಡಿಜಿಟಲ್ ಗ್ರಂಥಾಲಯಕ್ಕೂ ಭೇಟಿ ನೀಡಿದರು.
ಈ ಸಂಧರ್ಭದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಕಿರಣ ಸವಣೂರ, ಸಹಾಯಕ ಪ್ರಾಧ್ಯಾಪಕರಾದ ಡಾ.ರಮೇಶ ಕುರಿ ಮತ್ತು ನಗರ ಕೇಂದ್ರ ಗ್ರಂಥಾಲಯದ ಸಿಬ್ಬಂದಿಗಳಾದ ಸುಮಿತ್ ಕಾವಳೆ, ಆನಂದ ಮುತ್ತಗಿ, ಸುನಿಲ್ ಡಿ, ಏಕನಾಥ ಅಂಬೇಕರ, ಸಂಗೀತಾ ನಾವಿ, ರಾಜು ಕಟ್ಟಿಮನಿ, ಸರಸ್ವತಿ ಪಿ, ಪೂರ್ಣಿಮಾ ಕೆ, ಲಕ್ಷ್ಮಿ ಪೀ, ವಿಜಯಲಕ್ಷ್ಮೀ ಪಾಟೀಲ್, ರಾಜಶ್ರೀ ಮತ್ತಿತರು ಹಾಜರಿದ್ದರು.

