ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ರಾಜ್ಯ ಮಟ್ಟದ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ

Must Read

ಕರ್ನಾಟಕ ರಾಜ್ಯ ಬರಹಗಾರರ ಸಂಘವು ೨೦೨೦ ರಲ್ಲಿ ಸ್ಥಾಪನೆಯಾಗಿದ್ದು ವೈವಿಧ್ಯಮಯವಾದ ಕಾರ್ಯಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ರಾಜ್ಯದ ತುಂಬಾ ಸಂಚಲನ ಸೃಷ್ಠಿಸುತ್ತಿದೆ.

ಇಲ್ಲಿಯವರೆಗೆ ೧೩೦೦ ದಿನಗಳ ಕಾಲ ನಿರಂತರವಾಗಿ ಕಾವ್ಯ ರಚನೆ ಮಾಡುವ ಅನೇಕ ಯುವ ಬರಹಗಾರರಿಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಪರಿಚಯ ಮಾಡುತ್ತಾ ಕವಿಗಳಿಗೆ ವೇದಿಕೆ ಒದಗಿಸುತ್ತಾ ಬಂದಿದೆ. ರಾಜ್ಯದ ೩೦ ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿ ರಚನೆಯಾಗಿದ್ದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾಮಟ್ಟದ ಕವಿಗೋಷ್ಠಿ ವಿಚಾರ ಗೋಷ್ಠಿಗಳನ್ನು ನಡೆಸುವ ಮೂಲಕ ವೈಶಿಷ್ಟತೆ ಮರೆದಿದೆ. ಪ್ರತಿ ವರ್ಷ ಪ್ರತಿಯೊಂದು ಜಿಲ್ಲೆಗಳಲ್ಲಿ ರಾಜ್ಯಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮ ಆಯೋಜಿಸುವ ಮೂಲಕ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವಿಸುವ ವಿಶೇಷ ಕಾರ್ಯಕ್ರಮ ನಿರಂತರವಾಗಿ ನಡೆಸುತ್ತಾ ಬಂದಿದೆ.

ಅಷ್ಟೇ ಅಲ್ಲದೇ ರಾಜ್ಯಮಟ್ಟದ ಜಾನಪದ ಗಾಯನ ರಾಜ್ಯಮಟ್ಟದ ರಂಗಗೀತೆ ಗಾಯನ ಕಾರ್ಯಕ್ರಮ. ರಾಜ್ಯಮಟ್ಟದಲ್ಲಿ ರೈತರಿಗೆ ಮಾರ್ಗದರ್ಶನ ಆರೋಗ್ಯ ಸಲಹೆ ಹೀಗೆ ಹತ್ತು ಹಲವಾರು ಕಾರ್ಯಕ್ರಮ ರೂಪಿಸಿ ನಿರ್ವಹಣೆ ಮಾಡಿದೆ. ಜೊತೆಗೆ ಆರೋಗ್ಯ ತಪಾಸಣೆಯನ್ನು ನಡೆಸಿ ಹತ್ತನೇ ತರಗತಿ ಮಕ್ಕಳಿಗೆ ಪರೀಕ್ಷಾ ಪೂವ೯ ತರಬೇತಿಯನ್ನು ಕೂಡ ನಡೆಸಿದೆ. ಕೊರೋನಾದ ಸಂಕಷ್ಟದ ಸಮಯದಲ್ಲಿ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಿದೆ.

ಈ ಜೊತೆಗೆ ಪ್ರತೀವಾರ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯನ್ನು ಕೂಡ ನಡೆಸುತ್ತಾ ನೃತ್ಯ ಕಲಾವಿದರಿಗೆ ಪ್ರೊತ್ಸಾಹ ನೀಡುತ್ತಾ ಬರುತ್ತಿದೆ. ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿ ಕುಂಚ ಕಲಾವಿದರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿ ಸ್ಪರ್ಧೆಯನ್ನು ನಡೆಸುತ್ತಿದೆ. ಬುಡಕಟ್ಟು ಜನಾಂಗ ಬಂಜಾರ ಕಲಾವಿದರ ಗಾಯನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬಂಜಾರ ಕೋವಲ್ ಎಂಬ ಗೀತಗಾಯನ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗುತ್ತಿದೆ.

ರಾಜ್ಯದ ವಿವಿಧ ಜಿಲ್ಲೆಯ ಗಾಯಕ ಗಾಯಕಿಯರಿಗೆ ಕರ್ನಾಟಕ ಧ್ವನಿ ಎಂಬ ವೇದಿಕೆಯನ್ನು ರಚಿಸಿ ಆ ಮೂಲಕ ನಿರಂತರವಾಗಿ ಗಾಯನ ಸ್ಪರ್ಧೆಯನ್ನು ನಡೆಸುತ್ತಿದೆ.ಇದಕ್ಕೆಲ್ಲ ಕಾರಣ ಸಂಘದ ಕ್ರಿಯಾಶೀಲ ಸಂಸ್ಥಾಪಕ ಅಧ್ಯಕ್ಷರಾದ ಮಧುನಾಯ್ಕ.ಲಂಬಾಣಿ ರವರ ಕಾರ್ಯ ಕ್ಷಮತೆ ಅವರ ಚಟುವಟಿಕೆ ಯುಕ್ತವಾದ ಯೋಜನೆ ಮತ್ತು ಯೋಚನೆ ಸಂಘದ ಈ ಸಂಕಲನಕ್ಕೆ ಕಾರಣವಾಗಿ.ಸರಕಾರದಿಂದ ಯಾವುದೇ ಹಣಕಾಸಿನ ಸಹಕಾರವಿಲ್ಲದೇ ಸಮುದಾಯದ ನೆರವಿನಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ೨೦೨೬ ರಲ್ಲಿ ಬೆಳಗಾವಿಯಲ್ಲಿ ನಡೆಸಲು ಆಯೋಜಿಸಿರುವ ರಾಜ್ಯಮಟ್ಟದ ಕನ್ನಡ ನುಡಿವೈಭವವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕಾವ್ಯಶ್ರೀ ಪ್ರಶಸ್ತಿ, ರಾಜ್ಯಮಟ್ಟದ ಶಿಕ್ಷಕ ರತ್ನ ರಾಜ್ಯಮಟ್ಟದ ಕಲಾ ರತ್ನ ರಾಜ್ಯಮಟ್ಟದ ಗಾಯನ ರತ್ನ ರಾಜ್ಯಮಟ್ಟದ ನಾಟ್ಯರತ್ನ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗುತ್ತಿದೆ.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group