ಜನಪದ ಸಾಧನೆಯ ಹಾದಿಯಲ್ಲಿಹಣಮಂತ ಮಾದರ

Must Read

ಜನಪದ ಸಾಧನೆಯ ಹಾದಿಯಲ್ಲಿಹಣಮಂತ ಮಾದ

ಮೂಡಲಗಿ:-ತಾಲೂಕಿನ ಯಾದವಾಡ ಗ್ರಾಮದಲ್ಲಿ ಶಿಕ್ಷಕರಾದ ಹಣಮಂತ ಮಾದರ ಸಾಧನೆ ಮಾದರಿಯಾಗಿದೆ. ವಿಯಟ್ನಾಮ್ ನಾಡಿನಲ್ಲಿ ಜನಪದ ಗಾನ ಮುದ್ರೆ ಒತ್ತಲು ಆಯ್ಕೆಯಾದ ಹನಮಂತ ಶಿವಪ್ಪ ಮಾದರ ಅವರು ವಿಯಟ್ನಾಮ್ ದೇಶದಲ್ಲಿ ಭಾವ ಸಂಗಮ ಜನಪದ ಝೇಂಕಾರ ಕಾರ್ಯಕ್ರಮಕ್ಕೆ ಅವಕಾಶ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ.

ಹನಮಂತ ಅವರು ಮೂಲತಃ ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದವರಾಗಿದ್ದು ಜಿ.ಎನ್.ಎಸ್ ಪ್ರೌಢಶಾಲೆ ಯಾದವಾಡದಲ್ಲಿ 1998 ರಿಂದ ಚಿತ್ರಕಲಾ ಶಿಕ್ಷಕರಾಗಿ 27 ವಸಂತ ಗಳನ್ನು (ವರ್ಷ) ಪೂರೈಸಿ 28ನೇ ವಸಂತದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರು ಬಾಲ್ಯದಿಂದಲೂ ಶಿವ ಭಜನೆ, ಜನಪದ ಭಾವಗೀತೆ ಮತ್ತು ವಚನ ಗಾಯನ ಶಾಲೆಯಲ್ಲಿ ಹಾಡುತ್ತಾ ತಾಲೂಕ,ಜಿಲ್ಲೆ, ಹಾಗೂ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾ, ಮುಂದೆ ಮಲೆ ಮಾದೇಶ್ವರ ಬೆಟ್ಟದಲ್ಲಿ, ಮಳವಳ್ಳಿಯಲ್ಲಿ, ಬೆಂಗಳೂರಿನಲ್ಲಿ, ಚೆನ್ನೈನಲ್ಲಿ,ಪಾಂಡಿಚೆರಿಯಲ್ಲಿ ಹೀಗೆ ಜನಪದ ಗೀತೆಗಳನ್ನು ಹಾಡುತ್ತಾ 2016ರಲ್ಲಿ ಚಂದನ ಟಿವಿಯಲ್ಲಿ “ಬೆಳಕು” ಕಾರ್ಯಕ್ರಮದ ಅತಿಥಿಯಾಗಿ 45 ನಿಮಿಷದ ಸುದೀರ್ಘ ಕಾರ್ಯಕ್ರಮ ನಡೆಸಿಕೊಟ್ಟದ್ದು ಇವರ ಸಾಧನೆಗೆ ಹಿಡಿದ ಕನ್ನಡಿ.

ಇವರೊಂದು ಸಾಧನೆಯ ಸಿರಿಗೊಂಚಲು, ಸ್ಪೂರ್ತಿಯ ಮಹಾಮೇರು ಶಿಖರ. ಮುಂದುವರೆದು “ಸುವರ್ಣ ಟಿವಿ” ಮತ್ತು “ಆಯುಷ್ಯ ಟಿವಿ”ಯಲ್ಲಿ ಸಂಕ್ರಾಂತಿ ಹಬ್ಬದ ವಿಶೇಷ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟದ್ದು ಇವರ ಸಾಧನೆಗೆ ಮತ್ತೊಂದು ಗರಿ.

ಇಲ್ಲಿಗೆ ಮುಗಿಲಿಲ್ಲ ಇವರ ಸಾಧನೆಯ ಹಾದಿ 2017ರಲ್ಲಿ ದಕ್ಷಿಣ ಭಾರತದ “ಸಾಂಸ್ಕೃತಿಕ ಅಕಾಡೆಮಿ ಚೆನ್ನೈನಲ್ಲಿ 3 ವರ್ಷ ನಿರ್ದೇಶಕರಾಗಿ”, 2024ರಲ್ಲಿ ದುಬೈನಲ್ಲಿ “ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನದ ಕಾರ್ಯಕ್ರಮದಲ್ಲಿ ಆಯ್ಕೆಯಾಗಿದ್ದು ಎಲ್ಲ ಕನ್ನಡ ಮನಸುಗಳು ಹೆಮ್ಮೆ ಪಡುವ ಒಂದು ಸುವರ್ಣ ಕ್ಷಣವಾಗಿತ್ತೆಂದರೆ ತಪ್ಪಾಗಲಾರದು.

ಇವರಿಗೆ ಸಂದ ಪ್ರಶಸ್ತಿಗಳ ವಿವರ ಇಂತಿದೆ ;
“ಜಾನಪದ ಗಾರುಡಿಗ”, “ಸಂಗೀತ ಸೇವಾ ರತ್ನ”, “ಜಾನಪದ ಸಿರಿ”, “ಅಭಿಜಾತ ತತ್ವಪದ ಗಾಯಕ”, “ಜಾನಪದ ಕೋಗಿಲೆ” ಹೀಗೆ ಹತ್ತು ಹಲವು ಪ್ರಶಸ್ತಿಗಳ ಒಡೆಯರಾಗಿದ್ದಾರೆ.

ಪ್ರಸ್ತುತ ವಿಯಟ್ನಾಮ್ ದೇಶದಲ್ಲಿ “ಭಾವ ಸಂಗಮ ಜನಪದ ಝೇಂಕಾರ” ಕಾರ್ಯಕ್ರಮಕ್ಕೆ ಕರ್ನಾಟಕ ಜನಪದ ಪರಿಷತ್ತಿನ ವತಿಯಿಂದ 22 ಜನರು ಆಯ್ಕೆಯಾಗಿದ್ದು ಅವರಲ್ಲಿ ಹನುಮಂತ ಶಿವಪ್ಪ. ಮಾದರ ಕೂಡ ಒಬ್ಬರಾಗಿರುವರು. ತಾಲೂಕಿನ ಶಿಕ್ಷಕರು, ಗೆಳೆಯರ ಬಳಗ, ಹಿತೈಷಿಗಳು ಮತ್ತು ಕುಟುಂಬ ವರ್ಗದವರು ಸಂತಸ ವ್ಯಕ್ತಪಡಿಸಿದ್ದಾರೆ.

Latest News

ಬಿಹಾರದಲ್ಲಿ ಇಂಡಿ ಮೈತ್ರಿ ಕೂಟಕ್ಕೆ ಅಧಿಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ ಜೆಡಿ‌ ಮೈತ್ರಿಕೂಟ ಇಂಡಿ ಅಧಿಕಾರಕ್ಕೆ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ‌ಸಚಿವರಾದ...

More Articles Like This

error: Content is protected !!
Join WhatsApp Group