ಗೋಕಾಕ – ಸರಸ್ವತಿ ಸಮ್ಮಾನ್ ಪ್ರಶಸ್ತಿ ವಿಜೇತ ಎಸ್ ಎಲ್ ಭೈರಪ್ಪ ಅವರ ನಿಧನಕ್ಕೆ ಅರಭಾವಿ ಶಾಸಕ, ಬೆಮ್ಯೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಂತಾಪ ವ್ಯಕ್ತಪಡಿಸಿದ್ದಾರೆ
ಕನ್ನಡ ಸಾರಸ್ವತ ಲೋಕದ ಮೇರುಪರ್ವತ, ಪದ್ಮಭೂಷಣ ಪ್ರೊ.ಎಸ್.ಎಲ್.ಭೈರಪ್ಪ ಅವರ ನಿಧನದ ಸುದ್ದಿ ತೀವ್ರ ಆಘಾತ ತಂದಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ನಾಯಿನೆರಳು, ಗೃಹಭಂಗ, ಪರ್ವ, ದಾಟು, ಸಾಕ್ಷಿಯಂತಹ ಮಹಾನ್ ಕಾದಂಬರಿಗಳನ್ನು ನೀಡಿದ್ದ ಭೈರಪ್ಪನವರು ತಮ್ಮದೇ ಆದ ದೊಡ್ಡ ಓದುಗ ಬಳಗವನ್ನು ಸೃಷ್ಟಿಸಿಕೊಂಡಿದ್ದರು. ಅವರ ಕಾದಂಬರಿಗಳು ಇಂಗ್ಲಿಷ್‌ಗೂ ತರ್ಜುಮೆಗೊಂಡಿದ್ದು, ಅವರ ಸಾಹಿತ್ಯದ ಪರಿಯನ್ನು ಪಸರಿಸಿದ್ದವು. ಇಂತಹ ಹಿರಿಯ ಬರಹಗಾರರ ನಿಧನವಾರ್ತೆ ತೀವ್ರ ನೋವು ತಂದಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

