ಎಸ್. ಎಲ್. ಬೈರಪ್ಪನವರಿಗೆ ನುಡಿ ನಮನ ಕಾರ್ಯಕ್ರಮ.

Must Read

ಒಂದು ಪ್ರಕಟಣೆ

ಹಾಸನ –  ಆತ್ಮೀಯ ಬರಹಗಾರ ಬಂಧುಗಳೇ, ಸಾಹಿತ್ಯ ಪ್ರೇಮಿಗಳೇ… ಕಲಾ ಉಪಾಸಕರೆ, ಸಮಸ್ತ ಕನ್ನಡದ ಮನಸ್ಸುಗಳೆ, ನಾಡಿನ ಹೆಸರಾಂತ ಕಾದಂಬರಿಕಾರರಾದ ಎಸ್. ಎಲ್. ಭೈರಪ್ಪನವರು ನಮ್ಮೆಲ್ಲರನ್ನು ಅಗಲಿರುವುದು ಬಹಳ ದುಃಖವನ್ನುಂಟು ಮಾಡಿದೆ.

ತನ್ನ ಪ್ರಬುದ್ಧ ಬರವಣಿಗೆಯ ಮೂಲಕ ಕಾದಂಬರಿ ಕ್ಷೇತ್ರದಲ್ಲಿ ಸಂಚಲನವನ್ನುಂಟು ಮಾಡಿ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಪಡೆದುಕೊಂಡ ಶ್ರೇಷ್ಠ ಸಾಹಿತಿ ಎಸ್.ಎಲ್. ಭೈರಪ್ಪನವರು. ಅವರ ಕಾದಂಬರಿಗಳು ವಿವಿಧ ಭಾಷೆಗಳಲ್ಲಿ ಜಗತ್ತಿನಾದ್ಯಂತ ಜನಪ್ರಿಯತೆಯನ್ನು ಪಡೆದಿವೆ. ಇಂತಹ ಮೇರು ವ್ಯಕ್ತಿತ್ವವನ್ನು ಸ್ಮರಿಸಿ ಗೌರವ ಸಲ್ಲಿಸುವ ಹಿತ ದೃಷ್ಟಿಯಿಂದ, ಜಿಲ್ಲಾ ಬರಹಗಾರರ ಸಂಘದ ವತಿಯಿಂದ ದಿನಾಂಕ 25.09.2025 ರ ಗುರುವಾರ 10:30ಕ್ಕೆ ಹಾಸನ ನಗರದ ಗ್ರಂಥಾಲಯದ ಹಿಂಭಾಗದಲ್ಲಿರುವ ಥಿಯೋಸಪಿಕಲ್ ಸೊಸೈಟಿ ಸಭಾಂಗಣದಲ್ಲಿ ಭಾವಪೂರ್ಣವಾದ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಭೈರಪ್ಪನವರ ಸಾಹಿತ್ಯ ಸೇವೆಯನ್ನು ಸ್ಮರಿಸಿ ನುಡಿ ನಮನವನ್ನು ಸಲ್ಲಿಸಲಾಗುವುದು. ಈ ಕಾರ್ಯಕ್ರಮಕ್ಕೆ ತಾವುಗಳೆಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿನಂತಿಸುತ್ತೇವೆ.

ವಂದನೆಗಳೊಂದಿಗೆ

ಸುಂದರೇಶ್. ಡಿ. ಉಡುವಾರೆ
ಜಿಲ್ಲಾ ಅಧ್ಯಕ್ಷರು, ದಿಬ್ಬೂರು ರಮೇಶ್ಜಿಲ್ಲಾ ಕಾರ್ಯದರ್ಶಿ,ಗೊರೂರು ಅನಂತರಾಜು ರಾಜ್ಯ ಗೌರವಾಧ್ಯಕ್ಷರು ಮತ್ತು ಪದಾಧಿಕಾರಿಗಳು

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group