ಶಹಾಪುರ ಹೈದ್ರಾಬಾದ್ ಹೋಗುವ ಮುಖ್ಯ ರಸ್ತೆ ನಿರ್ಮಾಣಕ್ಕಾಗಿ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರಿಂದ ರಸ್ತೆ ತಡೆ ಚಳವಳಿ
ಸಿಂದಗಿ; ಕೋಡಂಗಲ್ ರಾಜ್ಯ ಹೆದ್ದಾರಿ ಶಾಹಾಪುರ-ಹೈದ್ರಾಬಾದ್ ಹೋಗುವ ಮುಖ್ಯ ರಸ್ತೆ ನಿರ್ಮಾಣಕ್ಕಾಗಿ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರಿಂದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಬೃಹತ್ ರಸ್ತೆ ತಡೆ ಚಳವಳಿ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಕೋಡಂಗಲ್ ರಾಜ್ಯ ಹೆದ್ದಾರಿ, ಸಿಂದಗಿದಿಂದ ಶಹಾಪುರ ಸುಮಾರು ವರ್ಷದಿಂದ ಈ ರಸ್ತೆ ಹದಗೆಟ್ಟು ಎಲ್ಲಂದರಲ್ಲಿ ಗುಂಡಿಗಳು ಬಿದ್ದು ಪ್ರಾಣ ತೆಗೆದುಕೊಳ್ಳಲು ಕೈ ಮಾಡಿ ಕರೆಯುತ್ತಿವೆ, ಈಗಾಗಲೇ ಸಾಕಷ್ಟು ಅಪಘಾತ ಸಂಭವಿಸಿ ಪ್ರಾಣಗಳು ಕೂಡಾ ಹೋಗಿವೆ ಪ್ರತಿ ನಿತ್ಯ ವ್ಯಾಪಾರ, ವಹಿವಾಟು, ಉದ್ಯೋಗ, ಸೇರಿದಂತೆ ಅನೇಕ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ಸಂಚರಿಸುವುದು ಸರ್ವೇ ಸಾಮಾನ್ಯ ಮುಖ್ಯ ರಸ್ತೆ ಆಗಿರುವುದರಿಂದ ದ್ವಿಚಕ್ರ ವಾಹನ ಸೇರಿದಂತೆ ಇತರೆ ಸಾವಿರಾರು ವಾಹನಗಳು ಸಂಚರಿಸುತ್ತವೆ, ಚಾಲಕರು ಪ್ರಾಣ ಕೈಯಲ್ಲೇ ಹಿಡಿದು ವಾಹನ ಚಲಾಯಿಸುವ ಸನ್ನಿವೇಶ ಎದುರಾಗಿದೆ ಹೀಗಾಗಿ ಕೂಡಲೇ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರಕಾರ ಮುಂದಾಗಬೇಕಿದೆ, ಆ ನಿಟ್ಟಿನಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸಿಕೊಂಡು ನಾವೆಲ್ಲರೂ ಅಪಘಾತದಿಂದ ತಪ್ಪಿಕೊಂಡು ಪ್ರಾಣ ಅಪಾಯದಿಂದ ಪಾರಾಗಬೇಕಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ, ಸಿದ್ದನಗೌಡ ಪಾಟೀಲ, ಪೀರು ಕೆರೂರ, ಎಸ್.ಆರ್.ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಸಿದ್ದಣ್ಣ ತಳವಾರ, ಪ್ರಶಾಂತ ಕದ್ದರಕಿ ವಿಠಲ ನಾಯ್ಕೋಡಿ ಅಶೋಕ ನಾರಾಣಪೂರ ಸಂಗನಗೌಡ ಪಾಟೀಲ ಶ್ರೀಶೈಲ ಚಳ್ಳಗಿ ಗೌಡಣ್ಣ ಆಲಮೇಲ ಸೖಪೋನಸಾಬ ಕೋರವಾರ ಸಲೀಂ ಬಾಗವಾನ ಬಾಗು ಕೋಟೇಗೋಳ ಶಿವಣ್ಣ ಮಾರಲಬಾವಿ ನಾಡಗೌಡ ಅಲ್ಲಾಪುರ ಶಾಂತಗೌಡ ಚೌದ್ರಿ ಗೋಲ್ಲಾಳಪ್ಪ ನಾಗಣಸೂರ ಅಮ್ಮೋಗಿ ಜೈನಾಪೂರ ಮಲ್ಲು ಗುಡಿಮನಿ, ಲಚಮ ರಾಠೋಡ, ಮಲ್ಲು ರಾಠೋಡ, ಸಂಜು ರಾಠೋಡ ಅನೀಲ ರಾಠೋಡ, ಖತಲ್ ದೊಡಮನಿ, ರಮೇಶ ವಂದಾಲ, ರಾಜುಗೌಡ ಪಾಟೀಲ, ಕಾಮಣ್ಣ ನಾಯ್ಕೋಡಿ ಸೇರಿದಂತೆ ಸಿಂದಗಿ ಮಂಡಲದ ಎಲ್ಲ ಮುಖಂಡರು, ಪದಾಧಿಕಾರಿಗಳು ಚುನಾಯಿತ ಪ್ರತಿನಿಧಿಗಳು, ಸಮಸ್ತ ಡಂಬಳ ಗೋಲಗೇರಿ ಸಾಸಬಾಳ ಡವಳಾರ ಖಾನಾಪುರ ಕರವಿನಾಳ ಕರವಿನಾಳ ತಾಂಡಾ ಹೋನಳ್ಳಿ, ಬ್ರಹ್ಮದೇವನಮಡು, ಸಲಾದಳ್ಳಿ ಯಂಕಂಚಿ, ಸುಂಗಠಾಣ ಖೈನೂರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

