ಸಿಂದಗಿ: ಪ್ರತಿಯೊಬ್ಬರಲ್ಲಿಯೂ ಒಂದೊಂದು ರೀತಿಯ ಪ್ರತಿಭೆಗಳಿರುತ್ತವೆ. ಇಂತಹ ಪ್ರತಿಭಾ ಕಾರಂಜಿ ಕಲೋತ್ಸವ ಅದರೊಂದಿಗೆ ವಿಜ್ಞಾನ ವಸ್ತು ಪ್ರದರ್ಶನÀ ಸಾದರಪಡಿಸಲು ಒಂದು ಉತ್ತಮ ವೇದಿಕೆಯಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ತಾಲೂಕಿನ ಕನ್ನೋಳ್ಳಿ ಗ್ರಾಮದ ಯೋಗಾಯೋಗ ಇಂಟರ್‌ನ್ಯಾಶನಲ್ ಪಬ್ಲಿಕ ಸ್ಕೂಲದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ಯೋಗಾಯೋಗ ಇಂಟರ್‌ನ್ಯಾಶನಲ್ ಪಬ್ಲಿಕ ಸ್ಕೂಲ ಇವರ ಸಹಯೋಗದಲ್ಲಿ ಸಿಂದಗಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಚಾಲನೆ ನೀಡಿ, ಮಕ್ಕಳಲ್ಲಿ ಇರುವ ಕಲೆ,ಸಾಹಿತ್ಯ,ವಿಜ್ಞಾನ ತಂತ್ರಜ್ಞಾನದೊಂದಿಗೆ ಶಿಕ್ಷಕರು ಶಿಕ್ಷಣ ನೀಡುವ ಮೂಲಕ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಲು ಪಾಲಕರ ಪಾತ್ರ ಮಹತ್ವದ್ದಾಗಿದೆ. ಬಮ್ಮನಹಳ್ಳಿ ಗ್ರಾಮದಲ್ಲಿ ಆರ್.ಎಂ.ಎಸ್‌ಎ ಫ್ರೌಡ ಶಾಲೆಗೆ ಜಮೀನ ಖರೀದಿಗಾಗಿ ಗ್ರಾಮಸ್ಥರ ಸಹಕಾರದೊಂದಿಗೆ ಮಾಜಿ ಮಂತ್ರಿ ದಿ. ಎಂ.ಸಿ.ಮನಗೂಳಿ ಫೌಂಡೇಶನ ವತಿಯಿಂದ ರೂ. ೫ ಲಕ್ಷ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ತಲಾ ರೂ.೫ ಲಕ್ಷ ನೀಡಲಾಗಿದೆ. ಹೂವಿನಹಳ್ಳಿ ಹತ್ತಿರ ಕಾರ್ಮಿಕರ ಮಕ್ಕಳಿಗಾಗಿ ರೂ.೩೨ ಕೋಟಿ ವೆಚ್ಚದಲ್ಲಿ ಶಾಲೆ ತೆರೆಯುವ ಕಾರ್ಯ ಮಂಜೂರಾತಿ ಹಂತದಲ್ಲಿದೆ. ಪ್ರಸಕ್ತ ಸಾಲಿನಲ್ಲಿ ಸಿಂದಗಿ ತಾಲೂಕಿಗೆ ೮ ಪ್ರೌಢ ಶಾಲೆ ಮಂಜೂರಾತಿ ನೀಡಿ ಆರಂಭಿಸಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಬ ಯಡ್ರಾಮಿ ನಿವೃತ್ತ ಭಾರತೀಯ ಸೈನ್ಯ ಕಮಾಂಡರ್ ಉದಂಡಪ್ಪ ಬಗಲಿ ಕ.ರಾ.ಸ.ನೌ.ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ ಮಾತನಾಡಿದರು.
ಯೋಗಾಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಗು ಪಾಟೀಲ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿದರು.
ಜಿ.ಪಂ ಮಾಜಿ ಸದಸ್ಯ ಮಹಾಂತಗೌಡ ಪಾಟೀಲ ಕ.ರಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆನಂದ ಭೂಸನೂರ. ದೇವರ ಹಿಪ್ಪರಗಿ ಕ.ರಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ. ಕ.ರಾ.ಪ್ರ‍್ರೌ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಎಚ್.ಬಿರಾದಾರ. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎ.ಎಸ್.ಡೊಣುರ. ಶಿಕ್ಷಣ ಸಂಯೋಜಕ ನೋಡಲ್ ಅಧಿಕಾರಿ ಎಂ.ಪಿ.ಬಿಸೆ, ಯೋಗಾಯೋಗ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಮಲ್ಲನಗೌಡ ಪಾಟೀಲ, ಮುಖ್ಯ ಗುರುಮಾತೆ ಜಯಶ್ರೀ ಪಾಟೀಲ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.
ಶಿಕ್ಷಣ ಸಂಯೋಜಕರಾದ ಬಿ.ಬಿ.ಪಾಟೀಲ, ಎಸ್.ಎಂ.ಕಪನಿಂಬರಗಿ, ಆಯ್.ಎಫ್.ಭಾಲ್ಕಿ, ಬಿ.ಆರ್.ಪಿ ಗಳಾದ ವಾಯ್.ಎಂ.ಬಿರಾದಾರ, ಎಸ್.ಎ.ಬಿರಾದಾರ, ಸಿ.ಆರ್.ಪಿ ಸೋಮೇಶ ಪಾಟೀಲ ಸೇರಿದಂತೆ ಇತರೆ ಸಿ.ಆರ್.ಪಿಗಳು ಬಿ.ಆಯ್.ಇ.ಆರ್.ಟಿಗಳು ಭಾಗವಹಿಸಿದ್ದರು.
ಕುಮಾರಿ ಶಿವಾನಿ ಪತ್ತಾರ ನೃತ್ಯ ಮಾಡಿದರು. ಶಿಕ್ಷಕ ದೇವರಾಜ ಕೊಪ್ಪಳ ಸ್ವಾಗತಿಸಿದರು. ಶಿಕ್ಷಕಿ ಪ್ರೀತಿ ನಾಯ್ಕ ನಿರೂಪಿಸಿದರು. ಶಿಕ್ಷಕಿ ಸ್ಮೀತಾ ಕೊಡರಕರ ವಂದಿಸಿದರು.

