ಗೋಕಾಕ ಜಿಲ್ಲೆ ಚರ್ಚೆ ; ಮೂಡಲಗಿಯಲ್ಲಿ ಮುಖಂಡರ ಸಭೆ

Must Read

ಮೂಡಲಗಿ:-ಗೋಕಾಕ ಜಿಲ್ಲೆ ಆಗಬೇಕು, ಗೋಕಾಕ ಜಿಲ್ಲೆಯಾದರೆ ಆಫೀಸಗಳು ಸ್ಥಳೀಯವಾಗಿರುತ್ತವೆ ಮತ್ತು ಆಫೀಸಿನ ಕೆಲಸಗಳಿಗೆ ಸಹಾಯವಾಗುತ್ತದೆ ಎಂಬ ಅಭಿಪ್ರಾಯ ಮೂಡಲಗಿ ಮತ್ತು ಗೋಕಾಕ ಶಹರದ ನಾಗರಿಕರ ಸಭೆಯಲ್ಲಿ ವ್ಯಕ್ತವಾಯಿತು.

ಪಟ್ಟಣದ ಮಡ್ಡಿ ಈರಣ್ಣ ದೇವಸ್ಥಾನದಲ್ಲಿ ಗೋಕಾಕ ಜಿಲ್ಲೆ ಆಗುವ ಬಗ್ಗೆ ಮೂಡಲಗಿ ಹಾಗೂ ಗೋಕಾಕ ತಾಲೂಕಿನ ಕೆಲ ಮುಖಂಡರು ಮುಖಾಮುಖಿಯಾಗಿ ಚರ್ಚೆ ಮಾಡಿದರು.

ಬೆಳಗಾವಿ ಜಿಲ್ಲೆಯು ಸುಮಾರು ೫೦ ಲಕ್ಷ ಜನ ಸಂಖ್ಯೆ ಇರುವ ದೊಡ್ಡ ಜಿಲ್ಲೆಯಾಗಿದೆ. ಅದರಿಂದ ದೂರದ ಜನರಿಗೆ ಸಮಸ್ಯೆ ಕೂಡಾ ಹೆಚ್ಚಾಗಿದೆ‌. ಗೋಕಾಕ ಜಿಲ್ಲೆಯಾದರೆ ಸರ್ಕಾರದಿಂದ ಫಂಡ್ ಕೂಡಾ ಪ್ರತ್ಯೇಕವಾಗಿ ಬರುವುದರಿಂದ ಅಭಿವೃದ್ಧಿ ಆಗುವುದು ಮತ್ತು ಉತ್ತರ ಕರ್ನಾಟಕದಲ್ಲಿ ಬಹುತೇಕ ಜಿಲ್ಲೆಗಳು ದೊಡ್ಡದಾಗಿರುವುದರಿಂದ ಅಭಿವೃದ್ಧಿ ಆಗುತ್ತಿಲ್ಲ. ಗೋಕಾಕ ಜೊತೆಯಲ್ಲಿ ಚಿಕ್ಕೋಡಿ ಸಹ ಜಿಲ್ಲೆಯಾದರೂ ಸಂತೋಷ. ಮೂಡಲಗಿಯ ಮುಖಂಡರು ಗೋಕಾಕ ಜಿಲ್ಲೆಗೆ ಬೆಂಬಲ ನೀಡಬೇಕೆಂದು ಗೋಕಾಕ ಜಿಲ್ಲಾ ಹೋರಾಟಗಾರ ಅರ್ಜುನ ಪಂಗನ್ನವರ ಸಭೆಯಲ್ಲಿ ಕೇಳಿಕೊಂಡರು.

ಸಾಮಾನ್ಯ ಜನರಿಗೆ ಗೋಕಾಕ ಜಿಲ್ಲೆ ಬೇಕಾಗಿದೆ. ಜಿಲ್ಲಾ ಆದರೆ ಯುವಕರಿಗೆ ಉದ್ಯೋಗ ಸಿಗುತ್ತದೆ. ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕೂಡಾ ನಾವು ವಿಚಾರ ಮಾಡಬೇಕಾಗಿದೆ. ಗೋಕಾಕ ಜಿಲ್ಲೆಯಾಗಲು ಮೂಡಲಗಿ ಮುಖಂಡರು ಬೆಂಬಲ ನೀಡಬೇಕೆಂದು ದಸ್ತಗಿರಸಾಬ ಪೈಲ್ವಾನ ನೊಂದ ಮನಸ್ಸಿನಿಂದ ಹೇಳಿದರು.

ಗೋಕಾಕ ಜಿಲ್ಲಾ ಆಗಬೇಕಾದರೆ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಜನರ ಸಹಕಾರ ಬಹಳ. ಎಲ್ಲ ಯುವಕರಲ್ಲಿ ಇಚ್ಛಾಶಕ್ತಿ ಹೆಚ್ಚಿಸಿಕೊಳಬೇಕು. ಇನ್ನು ಎರಡು ದಿನಗಳಲ್ಲಿ ಮತ್ತೆ ಯುವಕರನ್ನು ಹಾಗೂ ಮುಖಂಡರನ್ನು ಸಭೆ ಕರೆದು ಗೋಕಾಕ ಜಿಲ್ಲಾ ಹೋರಾಟ ರೂಪುರೇಷಗಳ ಬಗ್ಗೆ ಚರ್ಚೆ ನಡೆಯಬೇಕು. ಇದು ಸಮಾಜಮುಖಿ ಕೆಲಸ. ಇದರಲ್ಲಿ ರಾಜಕೀಯ ಇಲ್ಲವೆಂದು ಸಭೆಯಲ್ಲಿ ತಮ್ಮ ಮನದಾಳದ ಮಾತು ಡಾ.ಮಹಾಂತೇಶ ಕಡಾಡಿ ಹಂಚಿಕೊಂಡರು.

ಹೋರಾಟಕ್ಕೆ ಶಕ್ತಿ ಕಡಿಮೆ ಆಗುವುದರಿಂದ ಸ್ವಲ್ಪ ಹಿನ್ನಡೆ ಆಗಬಹುದು. ಪ್ರಾರಂಭದಲ್ಲಿ ಮೂಡಲಗಿ ತಾಲೂಕಾ ಹೋರಾಟದ ಸಮಯದಲ್ಲಿ ಗೊಂದಲ ಉಂಟಾಗಿತ್ತು‌,ನಂತರ ದಿನಗಳಲ್ಲಿ ಸರಿಯಾಯಿತು. ಗೋಕಾಕ ಹಾಗೂ ಮೂಡಲಗಿ ಜನರ ಮನಸ್ಸು ಒಂದಾದರೆ ಹೋರಾಟಕ್ಕೆ ಬಲ ಬರುವುದು.ಗೋಕಾಕ ಜಿಲ್ಲೆ ಆಗಬೇಕು ಅಷ್ಟೇ, ನಮ್ಮಲ್ಲಿ ಯಾವುದೇ ಬೇರೆ ಉದ್ದೇಶ ಇಲ್ಲ, ಎಲ್ಲರೂ ಒಂದಾಗೋಣ ಗೋಕಾಕ ಜಿಲ್ಲೆ ಆಗುವವರೆಗೂ ಹೋರಾಡೋಣ. ಮೂಡಲಗಿ ಹೊರತು ಪಡಿಸಿ ಇನ್ನುಳಿದ ತಾಲೂಕಿನ ಸಾಮಾನ್ಯ ಖರೀದಿಗೆ ನೊಂದಣಿ ಕಛೇರಿಯಲ್ಲಿ ಖರ್ಚು ಕಡಿಮೆ ಇದೆ ಎಂದು ಸಹ ಸಭೆಯಲ್ಲಿ ಈರಣ್ಣ ಕೊಣ್ಣೂರ ಅವರು ಹೇಳಿದರು.

ಮೂಡಲಗಿ ಜನರು ಪ್ರಜ್ಞಾವಂತರು ಇದ್ದಾರೆ ಮತ್ತು ಸಮಾಜಮುಖಿ ಕೆಲಸಕ್ಕೂ ಧನ ಸಹಾಯ ಮಾಡುವರು.ಗೋಕಾಕ ಜಿಲ್ಲೆಗಾಗಿ ತಾತ್ಕಾಲಿಕವಾಗಿ ಹೋರಾಟ ಮಾಡಿದರೆ ಸಾಲದು, ಗುರಿ ಮುಟ್ಟುವರೆಗೂ ನಮ್ಮ ಹೋರಾಟ ನಡೆಯಬೇಕು.ಹಳ್ಳಿ ಹಳ್ಳಿಯ ಜನರ ಗಮನಕ್ಕೆ ತರುವ ಕೆಲಸ ನಡೆಯಬೇಕೆಂದು ಲಕ್ಕಣ್ಣ ಸವಸುದ್ದಿ ಅವರು ತಮ್ಮ ನಿಲುವನ್ನು ತಿಳಿಸಿದರು.

ಮೂಡಲಗಿ ತಾಲೂಕು ಹಾಗೂ ರೈತ ಹೋರಾಟ ಯಶಸ್ಸು ಮಾಡಿದ್ದೀರಿ. ಬೆಳಗಾವಿಯಿಂದ ಹೊಸ ಜಿಲ್ಲೆ ಆಗುವುದು ಅಂತ ಕೇಳುತ್ತಿದ್ದೇವೆ ಬಹಳ ವರ್ಷಗಳಿಂದ ಇಲ್ಲಿಯವರೆಗೂ ಅದು ಆಗಿಲ್ಲ. ಗೋಕಾಕ ಜಿಲ್ಲೆಯಾದರೆ ಜನರಿಗೆ ಯಾವ ಉಪಯೋಗ ಆಗುವುದ ಅಂತ ಪ್ರಚಾರ ಮಾಡಿದರೆ ಎಲ್ಲ ಜನರಿಗೂ ಅರ್ಥವಾಗುತ್ತದೆ ಎಂದು ಸಭೆಯಲ್ಲಿ ತಮ್ಮ ಅಭಿಪ್ರಾಯ ಗುರುನಾಥ ಗಂಗನ್ನವರ ಹಂಚಿಕೊಂಡರು.
ಚಿಕ್ಕೋಡಿ ಹಾಗೂ ಗೋಕಾಕ ಎರಡೂ ಜಿಲ್ಲೆಯಾಗಲಿ, ಬೆಳಗಾವಿ ದೊಡ್ಡ ಜಿಲ್ಲೆ ಇದೆ.ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆ. ಮುಂದಿನ ದಿನಗಳಲ್ಲಿ ಎಲ್ಲರನ್ನು ಒಗ್ಗೂಡಿಸುವ ಕೆಲಸ ನಡೆಯಲಿ ಎಂದು ಶಿವಬಸು ಹಂದಿಗುಂದ ಅವರು ಹೇಳಿದರು.

ಮುಖಂಡರಾದ ಭೀಮಪ್ಪ ಹಂದಿಗುಂದ, ಶಿವಾನಂದ ಮಡಿವಾಳ, ಸಾದತ್ ಅಲಿ ಮಕಾಂದರ, ಮಹಾಲಿಂಗ ನಂದಗಾವಮಠ ಮೂಡಲಗಿ ತಾಲೂಕಾ ಹೋರಾಟ ಸಮಿತಿ ಇನ್ನು ಅನೇಕ‌ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group