ಭೀಮಾ ಯುನಿವರ್ಸಲ್ ಶಾಲೆಯಲ್ಲಿ ಅಜ್ಜ ಅಜ್ಜಿಯರ ದಿನ ಆಚರಣೆ

Must Read

ಸಿಂದಗಿ; ಜೀವನದಲ್ಲಿ ಒಂದು ಅಪೂರ್ವ ಹಾಗೂ ಸ್ಮರಣೀಯ ಅಚ್ಚಳಿಯದ ನೆನಪುಗಳನ್ನು ಮೊಮ್ಮಕ್ಕಳೊಂದಿಗೆ ಕಳೆಯುವುದು ಜೀವನ ಒಂದು ಮಧುರ ಕ್ಷಣವಾಗಿರುತ್ತದೆ ಈ ಮಕ್ಕಳ ಜೊತೆಗೆ ಕಾಲ ಕಳೆಯುವುದರ ಜೊತೆ ಅವರಿಗೆ ಬದುಕಿನ ಉತ್ತಮ ಮಾರ್ಗದರ್ಶಕರಾಗಿ ಸಮಾಜದಲ್ಲಿ ಸನ್ಮಾರ್ಗ ನೀಡುವಲ್ಲಿ ಅಜ್ಜ-ಅಜ್ಜಿಯರ ಪಾತ್ರ ಬಹು ಅಮೂಲ್ಯವಾದದ್ದು ಎಂದು ಶಾಲೆಯ ಪ್ರಾಂಶುಪಾಲರು ಸಾಹಿನ್ ಶೇಖ್ ಹೇಳಿದರು.

ನಗರದ ಹೊರವಲಯದ ಭೀಮಾ ಯುನಿವರ್ಸಲ್ ಶಾಲೆಯಲ್ಲಿ ಅಜ್ಜ- ಅಜ್ಜಿಯರ ದಿನ ಆಚರಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಆಧುನಿಕ ಜಗತ್ತಿನಲ್ಲಿ ತಂದೆ- ತಾಯಿಯರು ಡಾಕ್ಟರ್ , ಇಂಜಿನಿಯರ್ ಇನ್ನಿತರ ದೊಡ್ಡ ಹುದ್ದೆಯಲ್ಲಿದ್ದು ಅವರು ತಮ್ಮ ಪೋಷಕರ ಮಕ್ಕಳನ್ನು ನೋಡಿಕೊಳ್ಳಲು ಆಗುತ್ತಿಲ್ಲ ಒತ್ತಡದ ಬದುಕಿನಲ್ಲಿ ಇರುವುದರಿಂದ ಹೆತ್ತ ತಂದೆ- ತಾಯಿಯರನ್ನು ವೃದ್ಧಾಶ್ರಮಕ್ಕೆ ಬಿಡುತ್ತಿರುವುದು ನಾವು ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ, ಎಂದರು.

ನ್ಯೂಜಿಲ್ಯಾಂಡನಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆ ಡಾ. ಲಿಂಗಣ್ಣಾ ಕಲುಬುರಗಿ ಮಾತನಾಡಿ, ಅವರು ಮೊಮ್ಮಗ ಸೃಜನ್ ಕಲುಬುರಗಿ ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದು ಅವನಿಗೋಸ್ಕರ ಬಂದು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಾಗಿಯಾಗಿದ್ದೇನೆ, ಈ ದಿನ ನನಗೆ ಮರೆಯಲಾಗದ ದಿನ ಏಕೆಂದರೆ ಅಜ್ಜ- ಅಜ್ಜಿಯರ ದಿನದಂದು ನನ್ನನ್ನು ಅತಿಥಿಯಾಗಿ ಕರೆಸಿದ್ದು , ಮಕ್ಕಳ ನೃತ್ಯ, ನಾಟಕ ಪ್ರದರ್ಶನ ನನಗೆ ನ್ಯೂಜಿಲೆಂಡಿನಲ್ಲಿಯೂ ಇಂತಹ ಕಾರ್ಯಕ್ರಮ ನಡೆದಿಲ್ಲ ಅಷ್ಟು ಸುಂದರ- ಸೊಗಸಾಗಿ ಕಾರ್ಯಕ್ರಮವನ್ನು ಕಣ್ತಂಬಿಕೊಂಡೆನು, ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಮಕ್ಕಳು, ಮೊಮ್ಮಕ್ಕಳನ್ನು ಆಡಿಸುವುದು, ಅವರ ಜೊತೆ ಕಾಲ ಕಳೆಯುವುದು ಅಪೂರ್ವ ಕ್ಷಣವೆಂದು ಹೇಳಿದರು.

ಇದೇ ಸಂದರ್ಭ ರೇಣುಕಾ ಹೆಗಡೆ, ಮೊಹ್ಮದ ಅಲಿ. ಲತಾ ಪಟಶೆಟ್ಟಿ ಅವರು ಮೊಮ್ಮಕ್ಕಳ ಜೊತೆ ಕಾಲ ಕಳೆಯುವುದು, ಅವರು ಸಂಗಡ ಆಟವಾಡುವುದು ಅವರ ತೊದಲು ನುಡಿ, ಕಾಲಕಳೆಯುವುದು ಒಂದು ವಿಶೇಷವಾದದು, ಎಂದು ಹೇಳಿದರು.

ಶಾಲೆಯ ಅಧ್ಯಕ್ಷ ವಿಠ್ಠಲ ಜಿ.ಕೊಳ್ಳುರ ಮಾತನಾಡಿ, ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಶಿಕ್ಷಣ ಪಡೆಯುವುದರ ಜೊತೆಗೆ ಉತ್ತಮ ಸಂಸ್ಕಾರ ಪಡೆಯುವುದರೊಂದಿಗೆ ತಂದೆ-ತಾಯಿ ಅಜ್ಜ- ಅಜ್ಜಿಯಂದಿರ ಜೊತೆಗೆ ಅವಿನಾಭಾವ ಸಂಬಂಧ ಬೆಸೆಯುವಲ್ಲಿ ಇಂತಹ ಒಂದು ಕಾರ್ಯಕ್ರವನ್ನು ಹಮ್ಮಿಕೊಂಡಾಗ ಮಾತ್ರ ಮಕ್ಕಳಲ್ಲಿ ಪ್ರೀತಿ, ಮಮತೆ, ವಾತ್ಸಲ್ಯವನ್ನು ಬೆಳೆಯಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಎಲ್. ಕೆ.ಜಿ ಯಿಂದ ಒಂದನೇಯ ತರಗತಿ ವಿದ್ಯಾರ್ಥಿಗಳು ನೃತ್ಯ, ನಾಟಕ ಪ್ರದರ್ಶಸಿದರು. ಮಕ್ಕಳು ಹುರುಪಿನಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ. ಒಂದನೇಯ ತರಗತಿಯ ವಿದ್ಯಾರ್ಥಿಗಳು ನಾಟಕ ಪ್ರದರ್ಶಸಿದರು, ಎಲ್.ಕೆ,ಜಿ. ಯುಕೆಜಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಸಿದರು ಅಜ್ಜ-ಅಜ್ಜಿಯಂದಿರಿಗೆ ಇದೇ ಸಂದರ್ಭದಲ್ಲಿ ಆಟವನ್ನು ಆಡಿಸಲಾಯಿತು.

ಕಾರ್ಯಕ್ರಮದಲ್ಲಿ ನಿರ್ದೇಶಕ ಡಾ. ಎಂ.ಎಂ.ಪಡಶೆಟ್ಟಿ. ಶರಣು ಮಾವೂರ, ಶಾಂತು ಕುಂಬಾರ ಶಾಲೆಯ ಪ್ರಾಂಶುಪಾಲೆ ಶಾಹಿನ್ ಶೇಖ್ ಶಿಕ್ಷಕ ವೃಂದದವರು ವಿದ್ಯಾರ್ಥಿಗಳ ಅಜ್ಜ-ಅಜ್ಜಿಯಂದಿರು ಪಾಲ್ಗೊಂಡಿದ್ದರು.

 

LEAVE A REPLY

Please enter your comment!
Please enter your name here

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group