ಮೂಡಲಗಿ -ದಸ್ತು ಬರಹಗಾರರಿಂದ (ಬಾಂಡ್ ರೈಟರ‍್ಸ ) ಅನಿರ್ಧಿಷ್ಟಾವಧಿ ಮುಷ್ಕರ

Must Read

ಮೂಡಲಗಿ – ಕರ್ನಾಟಕ ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ದಸ್ತು ಬರಹಗಾರರು (ಬಾಂಡ್ ರೈಟರ‍್ಸ ) ಒಕ್ಕೂಟದ ಆದೇಶ ಮೇರೆಗೆ ಪಟ್ಟಣದ ಉಪನೋಂದಣಿ ಕಛೇರಿ ಆವರಣದಲ್ಲಿ ಗುರುವಾರದಿಂದ ಲೇಖನಿ ಸ್ಥಗಿತಗೊಳಿಸಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ಹೊರ ರಾಜ್ಯದಲ್ಲಿರುವಂತೆ ನಮ್ಮ ರಾಜ್ಯದಲ್ಲೂ ಪತ್ರ (ದಸ್ತು) ಬರಹಗಾರರಿಗೆ ಪ್ರತ್ಯೆಕ ಲಾಗಿನ್ ನೀಡಬೇಕು. ನೋಂದಣಿ ಆಗುವ ಎಲ್ಲಾ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರು ಅಥವಾ ವಕೀಲರು ಬಿಕ್ಕಲಂ ಕಡ್ಡಾಯಗೊಳಿಸುವದು. ಅನಧಿಕೃತ ವ್ಯಕ್ತಿಗಳನ್ನು ತಡೆಗಟ್ಟುವುದು ಮತ್ತು ಕರ್ನಾಟಕದ ಎಲ್ಲಾ ಪತ್ರ (ದಸ್ತು) ಬರಹಗಾರರಿಗೆ ಮಾದರಿ ಗುರುತಿನ ಚೀಟಿಯನ್ನು ನೀಡಬೇಕು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೂ ಅನಿರ್ಧಿಷ್ಟ ಮುಷ್ಕರ ಮುಂದುವರೆಯಲಿದೆ ಎಂದು ಹಿರಿಯ ಪತ್ರ ಬರಹಗಾರ ಪಂಚಾಕ್ಷರಿ ಹಿರೇಮಠ ಹೇಳಿದರು.

ಪತ್ರ ಬರಹಗಾರಾದ (ಬಾಂಡ್ ರೈಟರ‍್ಸ ) ಪಿ.ಬಿ.ಹಿರೇಮಠ, ಆರ್.ಎಮ್.ಕುಲಕರ್ಣಿ, ಎಲ್.ಸಿ. ಗಾಡವಿ, ಕೆ.ಎಸ್.ಹುಬಳಿ, ಎಮ್.ಎನ್.ಶಿರಸಂಗಿ, ರಾಜು ಅಥಣಿ, ಎಸ್.ಬಿ.ಸಿದ್ದುಮಾಳಿ, ಎಸ್.ಎನ್.ಗೋಟಡಕಿ, ಎ.ಎಮ್.ಥರಥರಿ, ಆರ್.ಎಮ್.ಮಂಗಸೂಳಿ, ವಿ.ಎಸ್.ಶಿರಸಂಗಿ, ಜೆ.ಬಿ.ಗೋಕಾಕ, ಪರಶುರಾಮ ಮಡಿವಾಳರ, ಅಭಿನವ ಚಿಂಚಲಿ, ಶಿವಾನಂದ ಸಸಾಲಟ್ಟಿ, ಶಿವಾನಂದ ಸಣ್ಣಕ್ಕಿ, ಬಸವರಾಜ ಮುಧೋಳ, ಮಹಾದೇವ ನವಣಿ, ಬಸವರಾಜ ಅಳಗೋಡಿ, ಸಂಜು ಅಂಗಡಿ, ಗುರುಸಿದ್ದ ತುಪ್ಪದ, ಸಂಜಯ ಪಾರ್ಶಿ, ಕುಮಾರ ಜಂಗನವರ, ದರ್ಶನ ಹಟ್ಟಿ, ರಮೇಶ ಸನ್ನಮಾನಿ, ರವಿ ಶಾಬನ್ನವರ, ಈರಪ್ಪ ಪಾರ್ಶಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Latest News

ಗೌರವ -ಘನತೆಯೇ ಮಾನವ ಹಕ್ಕಿನ ಮೂಲ: ಕರೆಪ್ಪ ಬೆಳ್ಳಿ

ಸಿಂದಗಿ: ಮನುಷ್ಯನಿಗೆ ಮೊದಲು ಗೌರವ ಮತ್ತು ಘನತೆ ಇರಬೇಕು. ಜಾತಿ—ಧರ್ಮ ಯಾವ ಬೇಧ ಭಾವವೂ ಇಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿವೆ. ನಾವು ಎಲ್ಲರೂ ಮಾನವೀಯ ಮೌಲ್ಯಗಳನ್ನು...

More Articles Like This

error: Content is protected !!
Join WhatsApp Group