ಸಿಂದಗಿ; ಭಾರತವು ಲಿಖಿತ ಸಂವಿಧಾನ ಹೊಂದಿದ್ದು, ಎಲ್ಲಾ ವರ್ಗ, ಪಂಥದವರು ಇದರ ಅಡಿಯಲ್ಲೇ ಕಾನೂನು, ನಿಯಮ, ಕರ್ತವ್ಯ, ಜವಾಬ್ದಾರಿಯ, ಸಮಾನತೆ, ಭ್ರಾತೃತ್ವದಿಂದ ಪ್ರತಿ ಭಾರತೀಯರು ಇದರ ಅಡಿಯಲ್ಲಿ ಬದುಕು ಕಟ್ಟಿಕೊಂಡಿದ್ದೇವೆ ಎಂಬುವುದು ನಮಗೆ ಹೆಮ್ಮೆಯ ವಿಷಯ ಎಂದು ಶಾಲೆಯ ಅಧ್ಯಕ್ಷ ವಿಠ್ಠಲ ಜಿ. ಕುಳ್ಳೂರ ಹೇಳಿದರು.
ಪಟ್ಟಣದ ಹೊರವಲಯದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ ೭೭ ನೇಯ ಗಣರಾಜ್ಯೋತ್ಸವದ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿ, ಭಾರತ ದೇಶ ಸ್ವಾತಂತ್ರ‍್ಯ ಬಂದ ನಂತರ ಜನವರಿ ೨೬ ರಂದು ಸಂವಿಧಾನ ಜಾರಿಗೆ ಬಂದಿದ್ದು, ಕರಡು ಸಮಿತಿಯ ಅಧ್ಯಕ್ಷರಾದ ಡಾ|| ಬಿ.ಆರ್, ಅಂಬ್ಕೇಡರವರ ನೇತೃತ್ವದಲ್ಲಿ ಸಮಿತಿ ರಚಿಸಿ ಭಾರತ ಪರಿಸರ, ಹವಾಗುಣ, ಎಲ್ಲ ವರ್ಗದವರ ಸಮಾನತೆ ದೃಷ್ಟಿಕೋನ ಆಧಾರಿತ ಸಂವಿಧಾನ ರಚಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ ಕೀರ್ತಿ ಅಂಬೆಡ್ಕರ್ ಅವರಿಗೆ ಸಲ್ಲುತ್ತದೆ, ಸಂವಿಧಾನ ರಚನೆಯಾಗಿ ೭೭ ವರ್ಷ ಕಳೆದು ಪ್ರತಿ ವರ್ಷ ನಾವು ಗಣರಾಜ್ಯೋತ್ಸವ ಆಚರಣೆ ಮಾಡುವ ಉದ್ದೇಶ ನಮ್ಮ ಭಾವಿ ಪ್ರಜೆಗಳಾದ ನಮ್ಮ ಎಲ್ಲಾ ಮಕ್ಕಳು ಸಂವಿಧಾನ ಮಹತ್ವ, ರಚನೆಯ ಕರ್ತೃ, ಸಂವಿಧಾನದ ಅಡಿಯಲ್ಲಿಯೂ ಪ್ರತಿ ಭಾರತೀಯ ಸಮಾನತೆ, ಭ್ರಾತೃತ್ವ, ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಶಾಲೆ, ಕಾಲೇಜು, ಸಂಘ ಸಂಸ್ಥೆಗಳ ಸಹಿತ ಗಣರಾಜ್ಯೋತ್ಸವ ಆಚರಿಸುತ್ತಾರೆ, ಪ್ರತಿ ಮಗುವಿಗೂ ಶಿಕ್ಷಣವನ್ನು ನೀಡಬೇಕು, ಸರ್ವಾಂಗಿಣ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಶಾಲೆಯ ಪ್ರಾಂಶುಪಾಲೆ ಶಾಹಿನ್ ಶೇಖ್ ಮಾತನಾಡಿ, ಸಂವಿಧಾನದ ರೀತ್ಯ ಕಾನೂನು, ಕಲಂ, ಆರ್ಟಿಕಲ್ ವಿಶೇಷತೆಯ ಕುರಿತು ಮಾತನಾಡಿ ಸಂವಿಧಾನದ ಪಿಠೀಕೆ ಓದಿದರು.
ಕಾರ್ಯಕ್ರಮದಲ್ಲಿ ಶಾಲೆ ನಿರ್ದೆಶಕರಾದ ಜಿ.ಕೆ. ಪಡಗಾನೂರ, ಡಾ|| ಎಂ.ಎಂ. ಪಡಶೆಟ್ಟಿ ಭೀಮಾಶಂಕರ ಮಾವೂರ, ಶ್ರೀಮಂತ ಮಲ್ಲೇದ, ಭೀಮಾಶಂಕರ ತಾರಾಪೂರ, ಶರಣು ಮಾವೂರ, ಪ್ರಶಾಂತ ಕಮತಗಿ, ದತ್ತು ಮಾವೂರ, ಶಿಕ್ಷಕ ವೃಂದ ಪಾಲ್ಗೊಂಡಿದ್ದರು.

