ಬೀದರ – ಗಡಿ ಜಿಲ್ಲೆಯಾದ ಬೀದರನಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡ ಗುರುನಾಥ ಕೋಳೂರ ಸ್ಪೋಟಕ ವಸ್ತುಗಳ ಸ್ಮಗ್ಲಿಂಗ್ ದಂಧೆ ಮಾಡುತ್ತಾರೆ ಎಂಬ ಗಂಭೀರ ಆರೋಪವನ್ನು ಸುಲ್ತಾನ್ ಪೂರ ಗ್ರಾಮದ ಯುವಕನೊಬ್ಬ ಮಾಡಿದ್ದಾನೆ.
ಭಾರಿ ಪ್ರಮಾಣದ ಸ್ಪೋಟಕ ವಸ್ತುಗಳನ್ನು ಯಾವುದೆ ಸಂರಕ್ಷಣೆ ಇಲ್ಲದೆ ಸಾಗಾಣಿಕೆ ಮಾಡುತಿರುವುದನ್ನು ಇತ್ತೀಚೆಗೆ ಪೋಲಿಸರು ತಡೆದು ವಶಪಡಿಸಿಕೊಂಡ ಬೆನ್ನಲ್ಲೆ ಭಾರತೀಯ ಜನತಾ ಪಕ್ಷದ ಮುಖಂಡ ಗುರುನಾಥ ಕೊಳೂರ ಮೇಲೆ ಸ್ಮಗ್ಲಿಂಗ್ ನಂತಹ ಮತೊಂದು ಗಂಭೀರವಾದ ಆರೋಪ ಮಾಡಿದ ಸುಲ್ತಾನ ಪೂರ ಗ್ರಾಮದ ಯುವಕ.
ಬೀದರ ನಗರದ ಹೊರವಲಯದಲ್ಲಿ ಬರುವ ಸುಲ್ತಾನ ಪೂರ ಗ್ರಾಮದ ಸಮಿಪ ತಲೆ ಎತ್ತಿರುವ ಕ್ರಶರ್ ಮಶಿನ್ ಹಾವಳಿಗಳಿಂದ ಬೇಸತ್ತ ಜನರು ಭಾರೀ ಪ್ರಮಾಣದ ಸ್ಪೋಟಕ ವಸ್ತುಗಳ ವಾಹನ ಪತ್ತೆಯಾದ ನಂತರ ಇಲ್ಲಿಯ ಜನರು ಸಾವಿನ ಭಯದಿಂದ ಬದುಕುವಂತಾಗಿದೆ ಎಂದು ಮಾದ್ಯಮದವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡ ಗ್ರಾಮದ ಯುವಕ ನಮ್ಮ ಗ್ರಾಮ ಸುತ್ತಮುತ್ತ ಅನೇಕ ಕ್ರಶರ್ ಮಶಿನ ಗಳು ಇವೆ ..ಆದರೆ ಇಲ್ಲಿಯವರೆಗೆ ಸಣ್ಣ ಪುಟ್ಟ ಸಮಸ್ಯೆ ಗಳನ್ನು ಆಗುತಿದ್ದವು ಆದರೆ ಗುರುನಾಥ ಕೊಳೂರ ಅವರ ಕ್ರಶರ್ ಮಶಿನ ಬಂದ ಮೇಲೆ ಗ್ರಾಮದ ಜನತೆ ಅತಿ ಹೆಚ್ಚು ತೊಂದರೆ ಅನುಭವಿಸುವಂತಾಗಿದೆ ಇದರ ಬಗ್ಗೆ ಅಧಿಕಾರಿಗಳಿಗೆ ಎಷ್ಟೆ ದೂರುಗಳನ್ನು ನೀಡಿದರೂ ಇಲ್ಲಿಯವರೆಗೆ ಯಾವುದೆ ಕ್ರಮಕ್ಕೆ ಮುಂದಾಗಿಲ್ಲ ಅಲ್ಲದೆ ಇವರು ಸ್ಪೋಟಕ ವಸ್ತುಗಳನ್ನು ತಮಗೆ ಬೇಕಾಗುವಷ್ಟು ಮಾತ್ರ ತರದೆ ಅಧಿಕ ಪ್ರಮಾಣದ ಸ್ಪೋಟಕ ವಸ್ತುಗಳನ್ನು ಸಂಗ್ರಹಿಸಿ ಸ್ಮಗ್ಲಿಂಗ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾನೆ.
ಇವರ ಈ ಕೃತ್ಯದಿಂದ ಏನಾದರು ಹೆಚ್ಚು ಕಮ್ಮಿಯಾದರೆ ನಮ್ಮ ಇಡಿ ಗ್ರಾಮವೇ ಸುಟ್ಟು ಬೂದಿಯಾಗುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದ ಯುವಕ, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ವಾದ ಕ್ರಮಕ್ಕೆ ಮುಂದಾಗದಿದ್ದರೆ ಶಿವಮೊಗ್ಗದಲ್ಲಿ ನಡೆದ ಅವಘಡಕಿಂತಲು ದೊಡ್ಡದಾದ ಅನಾಹುತ ಬೀದರ ಜಿಲ್ಲೆಯಲ್ಲಿ ಜರುಗವ ದಿನಗಳು ಬಹಳ ದೂರ ಇಲ್ಲವೆಂದು ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
ಈಗಲಾದರು ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭಿರ ವಾಗಿ ಪರಿಗಣಿಸಿ ಜಿಲ್ಲೆಯಲ್ಲಿ ಮುಂದೆ ಆಗುವ ಅನಾಹುತಕೆ ನಾಂದಿ ಹಾಕುವರೋ ಅಥವಾ ಪಕ್ಷ ನಿಷ್ಠೆ ತೋರಿ ಪ್ರಕರಣವನ್ನು ನಾಮಕಾ ವಾಸ್ತೆ ತನಿಖೆ ನಡೆಸಿ ಜಿಲ್ಲೆಯ ಜನರನ್ನು ಬಲಿ ನೀಡುವರೋ ಎಂದು ಜನತೆ ಆತಂಕದಿಂದ ದಿನಗಳನ್ನು ದೂಡುವಂತಾಗಿದೆ.
ವರದಿ: ನಂದಕುಮಾರ ಕರಂಜೆ
Times of ಕರ್ನಾಟಕ, ಬೀದರ