ಯಾರ ಹತ್ತಿರ ಯಾವ ಪ್ರತಿಭೆ ಇರುತ್ತದೆ ಅಂತ ತಿಳಿಯೋದಿಲ್ಲ. ಪ್ರತಿಭೆ ಯಾರ ಒಬ್ಬರ ಸ್ವತ್ತಲ್ಲ ಎಂಬಂತೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಡಿಪ್ಲೋಮ ಶಿಕ್ಷಣ ಪಡೆದು ನಂತರದಲ್ಲಿ ಸಿನೆಮಾ ಕ್ಷೇತ್ರದಲ್ಲಿ ಸುಮಾರು ಏಳು ಚಿತ್ರಗಳಲ್ಲಿ ಅಭಿನಯಿಸಿ ರಾಜ್ಯದ ಜನತೆಗೆ ಚಿರಪರಿಚಿತ ಆಗುವುದರ ಮೂಲಕ ಇಲ್ಲೊಬ್ಬ ಮೂಡಲಗಿಯ ಯುವಕ ಸಮಾಜ ಸೇವೆಗೆ ಮುಂದಾಗಿರುವುದರ ಕಥೆ ಇದು.
ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಯುವಕ ಮಂಜುನಾಥ ರೇಳೆಕರ 2007 ರಲ್ಲಿ ಇದೇ ನಗರದ ಸುರೇಶ ಬೆಳಕೂಡ ಅವರ ಬಟ್ಟೆ ಅಂಗಡಿಯಲ್ಲಿ ಕೆಲಸ ಸೇರಿಕೊಂಡು ಪಿಯುಸಿ ಶಿಕ್ಷಣ ಪಡೆದು ಮುಂದೆ ಮಹಾಲಿಂಗಪೂರದ ಕೆ ಎಲ್ ಇ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೊಮಾ ಶಿಕ್ಷಣ ಪಡೆಯುತ್ತಾರೆ. ಈ ಮಧ್ಯೆ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಪ್ರಶಸ್ತಿ ಪಡೆದುಕೊಂಡರು ಮುಂದೆ ಸಿನೆಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಮುಂದಾಗ್ತಾರೆ. ಅಲ್ಲಿ ಸಿಕ್ಕಿದ್ದು ಮುತ್ತಿನಂಥ ಮಗಳು ಚಿತ್ರದಲ್ಲಿ ಮಹಾತ್ಮ ಗಾಂಧಿಯವರ ಪಾತ್ರ. ನಂತರ ಜಯಸೂರ್ಯ, ಕನ್ನಡ ದೇಶದೋಳ್, ಅಸುರ ಸಂಹಾರ , ಲೈಟಾಗಿ ಲವ್ವಾಗಿದೆ, ಕಲಿವೀರ, ಓ , ಮೊದಲ ಮಳೆ ಮತ್ತು ಶ್ರೀ ಅಲ್ಲಮ ಪ್ರಭು ಚಿತ್ರಗಳಲ್ಲಿ ನಟಿಸುತ್ತಾರೆ.
ನಟನೆಯ ಬಿಡುವಿನಲ್ಲಿ “ಜವಾರಿ ಸೇವಿಸಿ ಕೊರೊನ ಓಡಿಸಿ” ಎಂಬ ರಾಜ್ಯಾಂತದ ಅಭಿಯಾನ ಕೈಗೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನೊಂದು ವಿಶೇಷ ಏನೆಂದರೆ ಮಂಜುನಾಥ ಬೆಂಗಳೂರಿನಲ್ಲಿ ನೆಲೆಸಿದ್ದರೂ ಸ್ವಂತ ಊರಿಗೆ ಬಂದಾಗ ಬೆಳೆಸಿದ ಉದ್ಯೋಗ ಕೈ ಬಿಡಬಾರದೆಂದು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ.
ಮಂಜುನಾಥ ಲಾಕ್ ಡೌನ್ ನಲ್ಲಿಯೂ ತಮ್ಮ ಪ್ರತಿಭೆಗೆ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದಿದ್ದಾರೆ. ಏನೇ ಅಗಲಿ ಮಂಜುನಾಥ ದೊಡ್ಡ ಕಲಾವಿದರ ಜೊತೆಯಲ್ಲಿ ನಟಿಸಲು ಅವಕಾಶ ಪಡೆಯುತ್ತಿದ್ದಾರೆ ಎಂಬುದು ಎಲ್ಲರಿಗೂ ಸಂತೋಷದ ವಿಷಯ. ಆದಷ್ಟು ಬೇಗ ಅವರ ಕಂಡ ಕನಸು ನನಸಾಗಲೆಂದು ನಾವು ಹಾರೈಸೋಣ.
ಇದೆಲ್ಲದಕ್ಕೆ ಕಾರಣರಾಗಿರುವ ಬಟ್ಟೆ ಅಂಗಡಿಯ ಮಾಲಿಕರಾದ ಶ್ರೀ ಸುರೇಶ ಬೆಳಕೂಡ ಹಾಗೂ ಮಂಜುನಾಥ ಅವರ ಸ್ನೇಹಿತರಿಗೆ ನಮ್ಮ Times of ಕರ್ನಾಟಕ ಬಳಗದ ಹಾರೈಕೆಗಳು.
All the best