- Advertisement -
ಬೀದರ – ಶಾಟ್ ಸರ್ಕ್ಯೂಟ್ ನಿಂದಾಗಿ ಗೋಡೌನ್ ಗೆ ಬೆಂಕಿ ಬಿದ್ದು ಉಂಟಾದ ಅಗ್ನಿ ಅವಘಡದಲ್ಲಿ ಅಲ್ಲಿ ಸಂಗ್ರಹಿಸಲಾಗಿದ್ದ ಈರುಳ್ಳಿ ಬೀಜಗಳು ಸಂಪೂರ್ಣ ನಾಶಗೊಂಡ ಘಟನೆ ಜರುಗಿದೆ.
ಬೀದರ ತಾಲೂಕಿನ ಬಗದಲ್ ಗ್ರಾಮದ ಪಾಕಿಸೇಠ್ ಎಂಬ ಮಾಲೀಕರಿಗೆ ಸೇರಿದ ಈರುಳ್ಳಿ ಬೀಜದ ಗೋಡೌನ್ ನಲ್ಲಿ ಬೆಂಕಿ ಹೊತ್ತಿಕೊಂಡು ಸುಮಾರು 20 ರಿಂದ 30 ಲಕ್ಷಕ್ಕೂ ಅಧಿಕ ಮೌಲ್ಯದ ಈರುಳ್ಳಿ ಬೀಜಗಳು ಅಗ್ನಿ ಆಹುತಿಯಾಗಿವೆ.
- Advertisement -
ಜಿಲ್ಲೆ, ಅಂತರ ಜಿಲ್ಲೆ, ರಾಜ್ಯ ಹಾಗೂ ಅಂತರ್ ರಾಜ್ಯಕ್ಕೆ ಇಲ್ಲಿಂದಲ್ಲೇ ಈರುಳ್ಳಿ ಬೀಜ ರಪ್ತು ಮಾಡುತ್ತಿದ್ದ ಮಾಲೀಕ ಪಾಕಿಸೇಠ್.
ಲಕ್ಷಾಂತರ ಮೌಲ್ಯದ ಈರುಳ್ಳಿ ಬೀಜ ಕಳೆದುಕೊಂಡು ಕಂಗಾಲಾಗಿದ್ದಾರೆ.
ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ನಂದಿಸಿಲು ಅಗ್ನ ಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಟ್ಟರು.
- Advertisement -
ಬಗದಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ