ದಂಪತಿಗಳ ಒಗ್ಗೂಡಿಸಿದ ನ್ಯಾಯಾಧೀಶೆ

Must Read

ಮೂಡಲಗಿ: ಪಟ್ಟಣದಲ್ಲಿ ಶನಿವಾರ ನಡೆದ ಲೋಕ ಅದಾಲತ್‍ನಲ್ಲಿ ಕೌಟುಂಬಿಕ ಕಲಹದಿಂದ ದೂರವಾಗಿದ್ದ ಮೂರು ಹೆಣ್ಣು ಮಕ್ಕಳು ಇರುವ ದಂಪತಿಗಳು ಒಂದಾಗಿದ್ದಾರೆ.

ಮೂಡಲಗಿ ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ಸತ್ತೆಪ್ಪ ಕುಬಸದ ವಿರುದ್ದ ಮಲ್ಲವ್ವ ಕುಬಸದ ಪ್ರಕರಣ ದಾಖಲಿಸಿದ್ದರು. ನ್ಯಾಯಾಧೀಶರಾದ ಜ್ಯೋತಿ ಪಾಟೀಲ ದಂಪತಿಗಳಿಗೆ ತಿಳಿವಳಿಕೆ ನೀಡಿ ರಾಜೀ ಮಾಡಿ ಪ್ರಕರಣವನ್ನು ಮುಕ್ತಾಯಗೊಳಿಸಿದರು.

ಲೋಕ ಅದಾಲತ್‍ನಲ್ಲಿ ಒಂದೇ ದಿನ 875 ಪ್ರಕರಣಗಳು ನ್ಯಾಯಾಧೀಶರಾದ ಜ್ಯೋತಿ ಪಾಟೀಲ ಸಮ್ಮುಖದಲ್ಲಿ ಇತ್ಯರ್ಥವಾಗಿವೆ. ಸಿವಿಲ್ ಪ್ರಕರಣಗಳು 35. ಕ್ರಿಮಿನಲ್ ಪ್ರಕರಣಗಳು 4, ದಂಡಸಹಿತ ಕ್ರಿಮಿನಲ್ ಪ್ರಕರಣಗಳು 640, ಬ್ಯಾಂಕ್ ಚೆಕ್ ಪ್ರಕರಣಗಳು 16, ಜನನ ಪ್ರಮಾಣ ಪತ್ರಗಳ ಪ್ರಕರಣಗಳು 175, ಜೀವನಾಂಶ ಪ್ರಕರಣಗಳು 5 ಇತ್ಯರ್ಥವಾಗಿವೆ. ಇನ್ನು ಬ್ಯಾಂಕ್ ಹಾಗೂ ಹೆಸ್ಕಾಂ, ಟಿಎಮ್‍ಸಿ, ಗ್ರಾಪಂ ತೆರಿಗೆ 25584 ಪ್ರಕರಣಗಳಲ್ಲಿ ಒಟ್ಟು 2 ಕೋಟಿ ಅಧಿಕ ಹಣವನ್ನು ಪಾವತಿಸುವಂತೆ ಆದೇಶ ಮಾಡಲಾಗಿದೆ. ಮೂಡಲಗಿ ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ ಸರ್ಕಾರಕ್ಕೆ ಒಟ್ಟು 62 ಲಕ್ಷ ಅಧಿಕ ಹಣವನ್ನು ಪಾವತಿಸಲಾಗಿದೆ ಎಂದು ಕೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group