ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರು
ಮುಖ್ಯ ಮಂತ್ರಿಗಳು ಕೃಷ್ಣಾ ಗೃಹ ಕಛೇರಿ
ಕರ್ನಾಟಕ ಘನ ಸರಕಾರ
ಬೆಂಗಳೂರು, ಇವರಿಗೆ
ವಿಷಯ – 9 ನೇ ತರಗತಿಯ ಸಮಾಜ ವಿಜ್ಞಾನದಲ್ಲಿನ ಪಠ್ಯ ಬಸವಣ್ಣನವರ ಪಾಠದಲ್ಲಿ ಮಾಡಿದ ಬದಲಾವಣೆ ನ್ಯಾಯ ಸಮ್ಮತ
ಮಾನ್ಯರೆ
ಬೇರೆ ಬೇರೆ ಮಾಧ್ಯಮಗಳಲ್ಲಿ 9 ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯದಲ್ಲಿ ಬಸವಣ್ಣನವರ ಕುರಿತಾದ ಪಾಠದಲ್ಲಿ ಬಸವಣ್ಣ ಲಿಂಗಾಯತ ಎಂದು ಮಾಡಿದ ಬದಲಾವಣೆ ಅತ್ಯಂತ ಮೌಲಿಕ ಮತ್ತು ನ್ಯಾಯ ಸಮ್ಮತವಾಗಿದ್ದು
ಅದಕ್ಕೆ ಕೆಲ ವೀರಶೈವ ಮಠಾಧೀಶರು ಅನಗತ್ಯ ವಿರೋಧ ವ್ಯಕ್ತ ಪಡಿಸಿ ಸರಕಾರಕ್ಕೆ ಭಯ ಭೀತಿ ಹುಟ್ಟಿಸುವ ವಾತಾವರಣ ನಿರ್ಮಿಸುತ್ತಿದ್ದಾರೆ.
ವೀರಶೈವ ಪದ ಮೊದಲಿಗೆ ಕಂಡದ್ದು 1386 ಎಂದು ನಮೂದಿಸಿದ ದಾಖಲೆ. ಈ ಪದ ಹರಿಹರ ಫಾಲಗುರಿಕೆ ಸೋಮನಾಥ ರಾಘವಾಂಕ ಕೆರೆಯ ಪದ್ಮರಸ ಕೆರೆಯ ಪದ್ಮನಾ0ಕ ಮುಂತಾದವರ ಕೃತಿಗಳಲ್ಲಿ ಕಂಡು ಬಂದಿಲ್ಲ.ವಸ್ತು ಸ್ಥಿತಿ ಹೀಗಿರುವಾಗ ಲಿಂಗಾಯತ ಪದ ಬಳಕೆ ನ್ಯಾಯ ಸಮ್ಮತ ಮತ್ತು ಸೂಕ್ತ .
ಆದ್ದರಿಂದ ಒಂದು ವೇಳೆ ವೀರಶೈವ ಮಠಾಧೀಶರ ಒತ್ತಡಕ್ಕೆ ಸರಕಾರ ಮಣಿದು ಲಿಂಗಾಯತ ಪದ ಬಿಟ್ಟು ವೀರಶೈವ ಅಥವಾ ವೀರಶೈವ ಲಿಂಗಾಯತ ಪದಗಳ ಸೇರ್ಪಡೆ ಮಾಡಿದರೆ ಇನ್ನೊಂದು ಉಗ್ರ ಹೋರಾಟವನ್ನು ಸರಕಾರ ಎದುರಿಸಬೇಕಾದಿತು ಎಂದು ಈ ಮೂಲಕ ತಿಳಿಯಪಡಿಸುತ್ರೇವೆ.
ಬಸವ ತತ್ವ ತಿಳಿವಳಿಕೆ ಮತ್ತು ಸಂಶೊಧನ ಕೇಂದ್ರ ಪುಣೆ ಸಮಸ್ತ ಲಿಂಗಾಯತ ವೆಲ್ಫೇರ್ ಟ್ರಸ್ಟ್ ಪುಣೆ ವಿಶ್ವ ಲಿಂಗಾಯತ ಸಮಿತಿ ಧಾರವಾಡ