ಒಂದೂವರೆ ಲಕ್ಷಕ್ಕೆ ಮಾರಾಟವಾದ ಟಗರು

Must Read

ಮೂಡಲಗಿ : ತಾಲೂಕಿನ ಧರ್ಮಟ್ಟಿ ಗ್ರಾಮದ ಕುರಿಗಾಯಿ ಲಕ್ಷ್ಮಣ ಸಿದ್ಲಿಂಗಪ್ಪ ಕೊರಕಪೂಜೇರ ಇವರ ಮೂರು ವರ್ಷದ ಟಗರನ್ನು ಗದ್ದನಕೇರಿ ಗ್ರಾಮದ ಯಮನಪ್ಪ ಸಂಗೊoದಿಯವರು ಒಂದು ಲಕ್ಷ ಐವತ್ತೈದು ಸಾವಿರ ರೂ.ಗಳಿಗೆ ಖರೀದಿಸುವ ಮೂಲಕ ಸ್ಪರ್ಧಾ ಟಗರುಗಳ ಬೆಲೆಯ ಮಹತ್ವ ತಿಳಿಯುವಂತೆ ಮಾಡಿದ್ದಾರೆ.

ಮೂರು ವರ್ಷದ ಡೆಕ್ಕನಿ ತಳಿಯ ಈ ಟಗರವು, ಪ್ರತಿದಿನ ೨ ಲೀಟರ್ ಹಾಲು, ೫ ತತ್ತಿ, ಚಪಾತಿ, ಗೋಧಿ, ಕೆಂಪಹುಳ್ಳಿ, ಕಾರೀಕ, ಶೇಂಗಾ ಜೊತೆಗೆ ಒಣ ಹಾಗೂ ಹಸಿ ಮೇವು ನೀಡುತ್ತಿದ್ದರು. ಜಾತ್ರೆ ಹಬ್ಬಗಳಲ್ಲಿ ಜರುಗುವ ಟಗರಿನ ಸ್ಪರ್ಧೆಗಳಲ್ಲಿ ಭಾಗವಹಿಸುವ ಉದ್ದೇಶದಿಂದ ಟಗರುಗಳನ್ನು ಮೇಯಿಸುವದು ಧರ್ಮಟ್ಟಿ ಗ್ರಾಮದಲ್ಲಿ ಸಾಮಾನ್ಯವಾಗಿದೆ. ಸದರಿ ಟಗರವು ನಾಗನೂರ, ಚಿಗಡೊಳ್ಳಿ, ಕುರಬಗಟ್ಟಿ, ಬಿಸನಕೊಪ್ಪ, ಗೋಲಬಾಂವಿ, ಮುಸಗುಪ್ಪಿ ಗ್ರಾಮಗಳ ಕಾಳಗದಲ್ಲಿ ಜಯಶಾಲಿಯಾಗಿದೆ. ೯೦ ಕೆ.ಜಿ ತೂಕದ ಈ ಟಗರವು ಹೆಚ್ಚಿನ ಬೆಲೆಗೆ ಮಾರಾಟವಾಗುವ ಮೂಲಕ ಅಚ್ಚರಿ ಮೂಡಿಸಿದೆ.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group