ಮೂಡಲಗಿ – ಪಟ್ಟಣದ ಪತ್ರ ಬರಹಗಾರರು (ಬಾಂಡ್ ರೈಟರ‍್ಸ ) ತಮ್ಮ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಉಪನೋಂದಣಾಧಿಕಾರಿ ಡಿ.ಕೆ.ಕುಳ್ಳೂರ ಮೂಲಕ ಕಂದಾಯ ಸಚಿವರಿಗೆ ಬುಧವಾರ ಮನವಿ ಸಲ್ಲಿಸಿದರು.
ಡಿ.೩ ರಿಂದ ಕಾವೇರಿ-೨ ನೋಂದಣಿ ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆಗಳಿಗಾಗಿ ಎಲ್ಲಾ ಉಪ-ನೋಂದಣಿ ಕಛೇರಿಗಳಲ್ಲಿ ನೋಂದಣಿ ಕಾರ್ಯಗಳು ಕುಂಠಿತಗೊಂಡಿರುತ್ತವೆ. ಸ್ವತ್ತಿನ ವಿವರಣೆಯಲ್ಲಿ ಸ್ವತ್ತಿನ ವಿಳಾಸ, ಸ್ವತ್ತಿನ ನಂಬರ, ಸ್ವತ್ತಿನ ವಿಸ್ತೀರ್ಣ ಸರಿಯಾಗಿ ನಮೂದಾಗದೇ ನೋಂದಣಿ ಪ್ರಕ್ರಿಯೆ ೧೦೦ಕ್ಕೆ ೯೫% ರಷ್ಟು ಸ್ಥಗಿತಗೊಂಡಿರುತ್ತವೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಕಾವೇರಿ-೨ ತಂತ್ರಾಂಶದಲ್ಲಿ ಆಗುತ್ತಿರುವ ತೊಂದರೆಗಳನ್ನು ಆದಷ್ಟು ಬೇಗ ಸರಿಪಡಿಸಿ ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸುವದರ ಮೂಲಕ ಸಾರ್ವಜನಿಕರಿಗೆ ನೋಂದಣಿ ಮಾಡಿಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಪತ್ರ ಬರಹಗಾರರಾದ (ಬಾಂಡ್ ರೈಟರ‍್ಸ ) ಪಿ.ಬಿ.ಹಿರೇಮಠ, ಆರ್.ಎಮ್.ಕುಲಕರ್ಣಿ, ಎಲ್.ಸಿ.ಗಾಡವಿ, ಕೆ.ಎಸ್.ಹುಬಳಿ, ಎಮ್.ಎನ್.ಶಿರಸಂಗಿ, ರಾಜು ಅಥಣಿ, ಎಸ್.ಬಿ.ಸಿದ್ದುಮಾಳಿ, ಎಸ್.ಎನ್.ಗೋಟಡಕಿ, ಎ.ಎಮ್.ಥರಥರಿ ಉಪಸ್ಥಿತರಿದ್ದರು.

