spot_img
spot_img

ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ಕಾನೂನು ಸೇವೆಗಳ ಅರಿವು ಕಾರ್ಯಕ್ರಮ

Must Read

spot_img
- Advertisement -

ಮುನವಳ್ಳಿ: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಲ್ಲಿ ತಾಲೂಕಾ ಕಾನೂನು ಸಲಹಾ ಮಂಡಳಿ ಸವದತ್ತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸವದತ್ತಿ ಇವರ ಸಂಯುಕ್ತಾಶ್ರಯದಲ್ಲಿ’ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ಕಾನೂನು ಅರಿವು ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಪಿ. ಪಿ. ಶೀಲವಂತ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಕೀಲರಾದ ಶ್ರೀಮತಿ ತನುಜಾ ಮಲ್ಲಿಕಾರ್ಜುನ ಹನಸಿ ಉಪಸ್ಥಿತರಿದ್ದರು.ಜ್ಯೋತಿ ಬೆಳಗಿಸುವ ಮೂಲಕ ಕಾರ್ಯ ಕ್ರಮ ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತನುಜಾ ಮಲ್ಲಿಕಾರ್ಜುನ ಹನಸಿ ‘ಇಂದಿನ ಮಕ್ಕಳೇ ಭವಿಷ್ಯದ ನಾಗರಿಕರು ಆದ್ದರಿಂದ ಭಾರತದ ಮುಂದಿನ ಭವಿಷ್ಯ ಅಡಗಿರುವುದು ಇಂದಿನ ಮಕ್ಕಳ ಕೈಯಲ್ಲಿ. ಮಕ್ಕಳಿಗೆ ಕಾನೂನಿನ ಅರಿವು ಅತಿ ಅವಶ್ಯಕವಾಗಿದೆ. ಅಪರಾಧಗಳಿಗೆ ಶಿಕ್ಷೆಯನ್ನು ವಿಧಿಸುವುದು ಕಾನೂನು. ಆದರೆ ಅಪರಾಧಗಳು ಜರುಗದಂತೆ ನಮಗೆ ನೆರವು ಜ್ಞಾನವನ್ನು ನೀಡುವುದು ಕಾನೂನು. ಪ್ರತಿಯೊಂದು ಧರ್ಮವೂ ತನ್ನದೇ ಆದ ಧರ್ಮಗ್ರಂಥಗಳನ್ನು ಹೊಂದಿರುವ ಹಾಗೆ ನಮ್ಮ ಭಾರತ ದೇಶದ ಪವಿತ್ರ ಧರ್ಮಗ್ರಂಥ ಸಂವಿಧಾನ. ಈ ಸಂವಿಧಾನದಲ್ಲಿರುವ ಕಾನೂನುಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಹೇಳಿ, ಜೊತೆಗೆ ಮಕ್ಕಳ ಹಕ್ಕುಗಳು ಕರ್ತವ್ಯಗಳನ್ನು ಕುರಿತು’ ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾಗಿ ಹೇಳಿದರು.

- Advertisement -

ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಫ್. ಜಿ. ನವಲಗುಂದ “ಆರ್.ಟಿ.ಇ-2009 ಅಧ್ಯಾಯಗಳ ಮಹತ್ವವನ್ನು ಹಾಗೂ ಮಕ್ಕಳ ಹಕ್ಕುಗಳು ಮತ್ತು ಬಾಲಕಾರ್ಮಿಕ ಪದ್ಧತಿ,ಬಾಲ್ಯ ವಿವಾಹ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಧಾನ ಗುರುಗಳಾದ ಪಿ.ಪಿ.ಶೀಲವಂತ ಮಾತನಾಡಿ, ಶಿಕ್ಷಣದಿಂದ ಮನುಷ್ಯ ಜ್ಞಾನವನ್ನು ಸಂಪಾದಿಸಿದರೆ ಕಾನೂನುಗಳು ಮನುಷ್ಯನಿಗೆ ಬದುಕಿನ ದಾರಿಯನ್ನು ತೋರಿಸುತ್ತವೆ ಕಾನೂನುಗಳ ಅರಿವಿಲ್ಲದ ಮನುಷ್ಯನ ಬದುಕು ಎನ್ನುವುದು ಕತ್ತಲೆಯಲ್ಲಿ ದಾರಿಯನ್ನು ಹುಡುಕಿದಂತೆ ಎಂದು ಹೇಳಿದರು.

ಕಾರ್ಯಕ್ರಮ ದಲ್ಲಿ ಗುರುಮಾತೆಯರಾದ ಕೆ. ವ್ಹಿ. ತಟವಟಿ, ಪಿ. ಎಸ್. ಕಮತಗಿ, ಎನ್. ಆರ್. ಕಕಮರಿ ಮತ್ತು ಎನ್. ಎನ್. ಕುರಿ ಉಪಸ್ಥಿತರಿದ್ದರು.

- Advertisement -

ಕಾರ್ಯಕ್ರಮವನ್ನು ವೈ. ಟಿ. ತಂಗೋಜಿ ನಿರೂಪಿಸಿದರು. ಶ್ರೀಮತಿ ಯು. ಎಸ್. ಏನಗಿಮಠ ಪ್ರಾರ್ಥನೆ ಗೀತೆ ಹೇಳಿದರು. ಬಿ. ಎಚ್. ಖೊOದುನಾಯ್ಕ ಸ್ವಾಗತಿಸಿದರು. ಡಾ. ಎನ್. ಆರ್. ಚಲವಾದಿ ವಂದಿಸಿದರು

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group