Homeಸುದ್ದಿಗಳುಬೀದರ: ಭಾರೀ ಮಳೆಗೆ ಅಪಾರ ಹಾನಿ

ಬೀದರ: ಭಾರೀ ಮಳೆಗೆ ಅಪಾರ ಹಾನಿ

ಬೀದರ – ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಧರೆಗುರುಳಿದ ಮರಗಳು, ಮುರಿದುಹೋದ ವಿದ್ಯುತ್ ಕಂಬಗಳು, ಭಾಲ್ಕಿ ಪಟ್ಟಣದ ಹೊರವಲಯದ ಬಸ್ ಘಟಕದಲ್ಲಿನ ಶೆಡ್ಡಿನ ಮೇಲಿನ ಶೀಟ್ ಗಳು ಹಾರಿ ಹೋಗಿದ್ದು ಕಬ್ಬಿಣದ ತುಂಡುಗಳು ಬಸ್ಸಿನೊಳಗಡೆ ನುಗ್ಗಿವೆ.

ಚರ್ಚ್ ಕಾಲೋನಿಯಲ್ಲಿ ಬೈಕ್ ಮೇಲೆ ಮರ ಉರುಳಿ ಬಿದ್ದಿದ್ದು ಹೊರತೆಗೆಯಲು ಸ್ಥಳೀಯರು ಹರಸಾಹಸ ಪಟ್ಟರು.

ನಿನ್ನೆಯ ದಿನ ಹಾಗೂ ರಾತ್ರಿ ಬೀದರ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾದ ಅವಾಂತರವಿದು.

ಭಾಲ್ಕಿ: ಭಾತಂಬ್ರಾ ಮುಖ್ಯ ರಸ್ತೆ ಮೇಲೆ  ನಾಲ್ಕೈದು ಮರಗಳ ಬಿದ್ದ ಕಾರಣ ಕೆಲ ಹೊತ್ತಿನವರೆಗೆ ಸಂಚಾರ ಸ್ಥಗಿತಗೊಂಡಿತ್ತು. ಇನ್ನೊಂದು ಕಡೆ ಬೀದರ್ ನಲ್ಲಿ ಉಸ್ತುವಾರಿ ಸಚಿವರು ತಮ್ಮ ಸರ್ಕಾರದ ಶಕ್ತಿ ಯೋಜನೆಯ ಚಾಲನೆ ಯಲ್ಲಿ ಬಿಜಿಯಾಗಿದ್ದರು

ಸಚಿವರ ತವರೂರು ಭಾಲ್ಕಿ ಯಲ್ಲಿ ಕೂಡ  ಭಾರಿ ಮಳೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು ರಸ್ತೆಯ ತುಂಬೆಲ್ಲ ನೀರು ತುಂಬಿಕೊಂಡು ಸಂಚಾರ ಅಸ್ತವ್ಯಸ್ತಗೊಂಡಿತು.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group