ಬೀದರ – ರಾಜ್ಯ ಬಿಜೆಪಿ ನಾಯಕರು ಭ್ರಷ್ಟಾಚಾರದ ಹಣವನ್ನು ತಂದು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣ ಮತದಾರರಿಗೆ ಹಣ ಹಂಚುತ್ತಾರೆ ಇದರಿಂದ ಕರ್ಮಭೂಮಿಯ ಪಾವಿತ್ರ್ಯ ಉಳಿಯದು. ರಾಜ್ಯ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು ಎಂದು ಕಾಂಗ್ರೆಸ್ ಮುಖಂಡ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದರು.
ಬಸವಕಲ್ಯಾಣ ನಲ್ಲಿ ಒಂದು ಒಟ್ಟಿಗೆ ಎರಡು ಸಾವಿರ ಕೊಡುತ್ತಾ ಇರದು ಎಂದು ಬಿಜೆಪಿ ನಾಯಕರ ಮೇಲೆ ಗಂಭೀರ ಆರೋಪ ಮಾಡಿದ ಖಂಡ್ರೆ
ಭ್ರಷ್ಟಾಚಾರ ಹಣ ತಂದು ಪವಿತ್ರ ಇರುವ ಬಸವಣ್ಣನವರ ಕರ್ಮಭೊಮಿ ಬಸವಕಲ್ಯಾಣ ಜನರಿಗೆ ಹಣದ ಆಮಿಷ ತೋರಿಸಿ ಒಟ್ಟು ಪಡೆಯಲು ಪ್ರಯತ್ನ ನಡೆಯುತ್ತಿದೆ ಎಂದು ಈಶ್ವರ ಖಂಡ್ರೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ಅವರು, ಬಿಜೆಪಿಯವರು ಕೋಟ್ಯಂತರ ರೂಪಾಯಿ ತಂದು ಒಂದು ಓಟಿಗೆ ೨ ಸಾವಿರ ಕೊಟ್ಟು ಓಟು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಬಸವಕಲ್ಯಾಣದ. ಮತದಾರರು ಬಿಜೆಪಿಯ ನೋಟು ಕಾಂಗ್ರೆಸ್ ಗೆ ಓಟು ಎಂಬ ತತ್ವ ಪಾಲಿಸಬೇಕು ಎಂದರು.
ಬಸವಕಲ್ಯಾಣ ಮತದಾರರ ಮೇಲೆ ನನಗೆ ನಂಬಿಕೆ ಇರುವುದು ಹಣದ ಆಮಿಷಕ್ಕೆ ಒಳಗಾಗದೆ ಮತ್ತು ಭ್ರಷ್ಟಾಚಾರದ ಹಣವನ್ನು ತಿರಸ್ಕರಿಸುತ್ತಾರೆ ಎಂದು ನನಗೆ ವಿಶ್ವಾಸ ಇದೆ ಎಂದು ಬಸವಕಲ್ಯಾಣ ಜನರು ಒಳ್ಳೆಯ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಕೆಪಿಸಿಸಿ ರಾಜ್ಯ ಕಾರ್ಯದ್ಯಾಕ್ಷ ಈಶ್ವರ ಖಂಡ್ರೆ, ಬಸವಕಲ್ಯಾಣ ಜನರು ಭ್ರಷ್ಟಾಚಾರ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ ಅಥವಾ ಬಸವಕಲ್ಯಾಣ ಅಭಿವೃದ್ಧಿ ಮಾಡುವ ಅಭ್ಯರ್ಥಿಗೆ ಆಯ್ಕೆ ಮಾಡುತ್ತಾರೆ ಎಂಬುದು ಕಾದು ನೋಡಬೇಕು ಎಂದರು.