ಬೀದರ – ಮತದಾರರಿಗೆ ಹಣ ಹಂಚುತ್ತಿದ್ದ ಆರೋಪ ಮಾಡಿ ಸಾರ್ವಜನಿಕರು ಬಿಜೆಪಿಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಘಟನೆ ಬಸವಕಲ್ಯಾಣದ ತಿಪ್ಪರಾಂತ ಬಡಾವಣೆ ಹಾಗೂ ಭೋಸಗಾ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಇದೇ ದಿ.೧೭ ರಂದು ಬಸವಕಲ್ಯಾಣದಲ್ಲಿ ಮತದಾನ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತದಾರರಿಗೆ ಹಣ ಹಂಚುತ್ತಿರುವಾಗ ತಡೆದ ಸಾರ್ವಜನಿಕರು ಅವರ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ.
ಈ ಮೊದಲು ಕಾಂಗ್ರೆಸ್ ಮುಖಂಡ ಈಶ್ವರ ಖಂಡ್ರೆ ಬಿಜೆಪಿಯು ಮತದಾರರಿಗೆ ತಲಾ ಸಾವಿರ ರೂ. ಹಂಚುತ್ತಿರುವ ಬಗ್ಗೆ ಆರೋಪ ಮಾಡಿದ್ದರು.ಇಂದು ತಿಪ್ಪರಾಂತ ನಗರದಲ್ಲು ಮನೆ ಮನೆಗೆ ಹಣ ಹಂಚುತ್ತಿದ್ದ ಕಾರ್ಯಕರ್ತರನ್ನು ಹಿಡಿದು ಹಣವನ್ನು ಹರಿದು ಹಾಕಿ ಹಲ್ಲೆ ಮಾಡಿದ್ದಾರೆನ್ನಲಾಗಿದೆ.
ಈ ವೇಳೆ ಕಾರ್ಯಕರ್ತರು ತಾವು ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರ ಪರವಾಗಿ ಹಣ ಹಂಚುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆನ್ನಲಾಗಿದೆ. ಇತ್ತ ಬಿಜೆಪಿಯ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಕೂಡ ಮತದಾರರಿಗೆ ಹಂಚಲು ಕೋಟಿ ಕೋಟಿ ಹಣ ತಂದಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ