Bidar: ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲವಿಲ್ಲ – ಖಂಡ್ರೆ

0
238

ಬೀದರ – ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲರು ಒಗ್ಗಟ್ಟಾಗಿದ್ದಾರೆ. ಕಾಂಗ್ರೆಸ್ ನ ಎಲ್ಲಾ ನಾಯಕರು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಬಿ ಕೆ ಹರಿಪ್ರಸಾದ ಯಾವ ಉದ್ದೇಶದಿಂದ ಹಾಗೆ ಮಾತನಾಡಿದ್ದಾರೋ ಗೊತ್ತಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಇತ್ತೀಚೆಗೆ ನನಗೆ ಸಿಎಂ ಮಾಡುವುದು ಗೊತ್ತು ಸಿಎಂ ಇಳಿಸುವುದೂ ಗೊತ್ತು ಎಂದು ಅಸಮಾಧಾನದಿಂದ ಮಾತನಾಡಿದ ಬಿಕೆ ಹರಿಪ್ರಸಾದ ಹೇಳಿಕೆ ವಿಚಾರ ಕುರಿತಂತೆ ಮಾತನಾಡಿದ ಖಂಡ್ರೆಯವರು, ಕಾಂಗ್ರೆಸ್ ಪಕ್ಷಕ್ಕೆ ೧೩೮ ವರ್ಷಗಳ ಇತಿಹಾಸವಿದೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಟ್ಟಂಥ ಪಕ್ಷ ನಮ್ಮದು. ಬಿ ಕೆ ಹರಿಪ್ರಸಾದ ಆ ಥರ ಯಾಕೆ ಮಾತನಾಡಿದರೋ ನನಗೆ ಗೊತ್ತಿಲ್ಲ ಎಂದರು.


ವರದಿ: ನಂದಕುಮಾರ ಕರಂಜೆ, ಬೀದರ