Homeಸುದ್ದಿಗಳುಯಡಿಯೂರಪ್ಪನವರ ಹುಟ್ಟು ಹಬ್ಬ ಸಸಿ ನೆಟ್ಟು, ಹಣ್ಣು ವಿತರಿಸಿದ ಬಿಜೆಪಿ ಘಟಕ

ಯಡಿಯೂರಪ್ಪನವರ ಹುಟ್ಟು ಹಬ್ಬ ಸಸಿ ನೆಟ್ಟು, ಹಣ್ಣು ವಿತರಿಸಿದ ಬಿಜೆಪಿ ಘಟಕ

ಬೈಲಹೊಂಗಲ: ಭಾರತೀಯ ಜನತಾ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸದಸ್ಯರು, ಮಾಜಿ ಮುಖ್ಯಮತ್ರಿಗಳು, ದಣಿವರಿಯದ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನದ ನಿಮಿತ್ತವಾಗಿ ಭಾರತೀಯ ಜನತಾ ಪಾರ್ಟಿ ಬೈಲಹೊಂಗಲ ಮಂಡಲ ವತಿಯಿಂದ ಹಾಗೂ ಜನಸೇವಕ ಜಗದೀಶ ಮೆಟಗುಡ್ಡ ಅವರ ನೇತೃತ್ವದಲ್ಲಿ ಸಸಿ ನೆಡುವ ಹಾಗೂ ಬೈಲಹೊಂಗಲ ತಾಲೂಕು ಆಸ್ಪತ್ರೆಯಲ್ಲಿ ಹಣ್ಣು ಹಂಪಲವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಸುಭಾಸ ತುರಮರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ, ಸಹಕಾರ ಪ್ರಕೋಷ್ಠ ಜಿಲ್ಲಾ ಸಂಚಾಲಕ ಸುನೀಲ ಮರಕುಂಬಿ, ಹಿರಿಯ ಮುಖಂಡ ಗುರುಪಾದ ಕಳ್ಳಿ, ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ, ಜಿಲ್ಲಾ ಮಾಧ್ಯಮ ಸಂಚಾಲಕ ಸಚೀನ ಕಡಿ, ಮಂಡಲ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರಗಿ,ಮುಖಂಡರಾದ ಅಜ್ಜಪ್ಪ ಹೊಸೂರ, ರವಿ ಹೊಸೂರ, ನಾಗಪ್ಪ ಸಂಗೊಳ್ಳಿ, ಬಸವರಾಜ ಬೈಲವಾಡ,ಶಿವಯೋಗಿ ಹುಲ್ಯನವರ, ಮೋಹನ ಒಕ್ಕುಂದ, ಸಿ ಜಿ ವಿಭೂತಿಮಠ, ವಿನಾಯಕ ಕಬ್ಬಲಗಿ, ರಾಮಣ್ಣ ಬಳಿಗಾರ, ಅಮರನಾಥ ನೀಲನ್ನವರ, ಬಸವರಾಜ ಶಿಲಯ್ಯನವರಮಠ, ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಅಭಿಮಾನಿ ಬಳಗದವರೆಲ್ಲರೂ ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group