ಬಿಜೆಪಿ ಅಂದರೆ ಬರೀ ಜೂಟಾ ಪಾರ್ಟಿ- ಖಂಡ್ರೆ

0
571

ಬೀದರ – ದೇಶದಲ್ಲಿ ಪಂಚರಾಜ್ಯಗಳ ಚುನಾವಣೆ ಇರುವ ಹಿನ್ನೆಲೆಯಲ್ಲಿ ಮತ ಕೇಳಲು ಹೇಗೆ ಹೋಗೋದು ಎಂಬ ಚಿಂತೆಯಿಂದ ಮೂರು ಕೃಷಿ ಕಾಯ್ದೆಗಳನ್ನು ಮೋದಿ ಹಿಂತೆಗೆದುಕೊಂಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಜನತಾ ಪಾರ್ಟಿಯ ವಿರುದ್ಧ ಹರಿಹಾಯ್ದ ಅವರು, ಗಾಂಧೀಜಿಯವರ ಸ್ವರಾಜ್ ಕಲ್ಪನೆಯಲ್ಲಿ ತಾವು ಹೋಗುವುದಾಗಿ ಹೇಳುತ್ತೀರಿ, ಗಾಂಧಿಯನ್ನು ಕೊಂದ ಘೋಡ್ಸೆಯ ಮಂದಿರ ಕಟ್ಟುತ್ತೀರಿ ಏನಿದು ಎಂದು ಪ್ರಶ್ನೆ ಮಾಡಿದರು.

ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ ಬಿಜೆಪಿ ಎಂದರೆ ಬರೀ ಜೂಟಾ ಪಾರ್ಟಿ. ಪ್ರವಾಹ ಪರಿಹಾರ ಕೊಟ್ಟಿಲ್ಲ, ರಸಗೊಬ್ಬರ ಸಿಗುತ್ತಿಲ್ಲ, ಹೀಗೆ ಅನೇಕ ಸುಳ್ಳುಗಳನ್ನು ಅವರು ಹೇಳಿಕೊಂಡು ಬಂದಿದ್ದಾರೆ ಎಂದರು.

ತಾವು ಕೂಡಾ ಬಿಜೆಪಿ ಗೆ ಸೇರ್ಪಡೆಯಾಗುತ್ತೀರಿ ಎಂಬ ಕಟೀಲ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿ, ಅಂಥದೇನೂ ಇಲ್ಲ. ನಳಿನ್ ಕುಮಾರ ಕಟೀಲ್ ಬೇಕಾದರೆ ಕಾಂಗ್ರೆಸ್ ಗೆ ಅರ್ಜಿ ಹಾಕಿದರೆ ನಾನು ಪರಿಶೀಲಿಸುತ್ತೇನೆ ಎಂದು ಖಂಡ್ರೆ ಹೇಳಿದರು