ಮೂಡಲಗಿ -ಇಪ್ಪತ್ತೊಂದನೇ ಶತಮಾನದ ಕಾಲಘಟ್ಟದಲ್ಲಿ ಬದುಕುತ್ತಿರುವ ಇಂದಿನ ಯುವತಿಯರು ಬದಲಾದ ಜೀವನಶೈಲಿಯಿಂದ ಅನೇಕ ಮಾನಸಿಕ ರೋಗದಿಂದ ಬಳಲುತ್ತಿದ್ದು ಅವರ ಆರೋಗ್ಯದಲ್ಲಿ ತುಂಬಾ ಏರುಪೇರಾಗಿದ್ದು ಕಳವಳಕಾರಿ ಸಂಗತಿಯಾಗಿದೆ. ೨೦೨೫ ರ ಒಂದು ವರದಿ ಪ್ರಕಾರ ಜಾಗತಿಕವಾಗಿ ೪೫೦ ಮಿಲಿಯನ್ ಜನರು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದು ಅವರ ಆರೋಗ್ಯ ಸಮಸ್ಯೆ ಸುಧಾರಿಸುವ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಕಂಡುಬರುತ್ತಿದೆ ಅವರ ಮಾನಸಿಕ ಆರೋಗ್ಯದಲ್ಲಿ ತುಂಬಾ ಏರುಪೇರಾಗಿದೆ ಎಂದು ಪ್ರೊ. ರಾಧಾ.ಎಂ.ಎನ್ ಹೇಳಿದರು .
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪಿ.ಎಂ. ಉಷಾ ಯೋಜನೆಯಡಿಯಲ್ಲಿ ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಆಯ್.ಕ್ಯೂ.ಎ.ಸಿ. ಮಹಿಳಾ ಸಬಲೀಕರಣ ಘಟಕ ಹಾಗೂ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಂಡ ಯುವತಿಯರಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಗಳು ಹಾಗೂ ಪರಿಹಾರಗಳು ಕಾರ್ಯಕ್ರಮದಲ್ಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಆರ್ಥಿಕವಾಗಿ ೧.೦೩ ಟ್ರಿಲಿಯನ್‌ನಷ್ಟು ಹಣ ಸಂಪಾದನೆ ನಷ್ಟವಾಗುತ್ತಿದೆ.ಯುವತಿಯರು ಮಾನಸಿಕ ಅನಾರೋಗ್ಯದಿಂದ ಹೊರಬರಲು ಹಾರ್ಮೋನ್‌ಗಳನ್ನು ಕ್ರಿಯಾತ್ಮಕವಾಗಿ ಬಳಸಿಕೊಂಡರೆ ಸುಸ್ಥಿರ ಬದುಕನ್ನು ನಿರ್ಮಿಸಿಕೊಳ್ಳಬಹುದು ಎಂದು ತಿಳಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಉಪನ್ಯಾಸಕಿಯರಾದ ರಾಜೇಶ್ವರಿ ಅವರಾದಿ ಅವರು ಮಾತನಾಡುತ್ತಾ ಇಂದಿನ ದಿನಗಳಲ್ಲಿ ಡಿಜಿಟಲ್ ಸಾಕ್ಷರತೆಯ ಮಹತ್ವ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸವಿಸ್ತಾರವಾಗಿ ತಿಳಿಸಿದರು.
ಈ ಒಂದು ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪಿ.ಎಂ. ಉಷಾ ಯೋಜನೆಯ ಸಾಪ್ಟ್ ಕಾಂಪೋನೆಂಟ್ ಸಂಯೋಜಕರಾದ ಪ್ರೊ. ಕಮಲಾಕ್ಷಿ ತಡಸದ ರವರು ಕಾರ್ಯಕ್ರಮ ಉದ್ಘಾಟಿಸಿ ವಿಶ್ವವಿದ್ಯಾಲಯವು ಮಹಿಳಾ ಸಬಲೀಕರಣದ ದಿಸೆಯಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟು ಈ ರೀತಿಯ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುತ್ತಿದೆ. ಈ ಯೋಜನೆಯ ಕಾರ್ಯಕ್ಕೆ ಕೈ ಜೋಡಿಸಿದ ಮಹಾವಿದ್ಯಾಲಯದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಪ್ರಾಂಶುಪಾಲರಾದ ಮಹೇಶ ಕಂಬಾರ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ವಿಭಿನ್ನವಾದ ಆಲೋಚನೆ ಮೂಲಕ ಯುವತಿಯರು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ ವಿದ್ಯಾರ್ಥಿನಿಯರ ಸಂರಕ್ಷಣೆಗಾಗಿ ಮಹಾವಿದ್ಯಾಲಯವು ಸರ್ವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಚೇತನ್ ರಾಜ್ ಬಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸಂಜೀವಕುಮಾರ ಗಾಣಿಗೇರ, ಮಹಿಳಾ ಸಬಲೀಕರಣ ಘಟಕದ ಸಂಯೋಜಕರಾದ ಜಿ.ಎಸ್. ಸಾಳೋಖೆ, ಯೋಗಿನಿ ಕೆ.ವಿ. ಸರಸ್ವತಿ ರಬಕವಿ, ಶಿವಾನಂದ ಚಂಡಕೆ, ಬಿ.ಸಿ. ಹೆಬ್ಬಾಳ ಮಲ್ಲಿಕಾರ್ಜುನ ಸಜ್ಜನವರ ಭಾಗವಹಿಸಿದ್ದರು. ದಾನಮ್ಮ ಭದ್ರಶೆಟ್ಟಿ ಸ್ವಾಗತಿಸಿದರು. ರಾಧಿಕಾ ಹಾಗೂ ಕೀರ್ತನಾ ಪಲ್ಲೇದ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾಶ್ರೀ ಸಾಯನ್ನವರ, ವಿದ್ಯಾಶ್ರೀ ಬಸ್ತವಾಡ ನಿರೂಪಿಸಿದರು. ಸುಮಿತ್ರಾ ಶಿವಾಪೂರ ವಂದಿಸಿದರು.

