- Advertisement -
ಸಿಂದಗಿ ; ತಾಲೂಕಿನ ಚಾಂದಕವಠೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕ ಸಾಹಿತಿ ಚುಟುಕ ಕವಿ ಮಿತ್ರ ಶರಣ ಕೆ.ಜಿ.ಹತ್ತಳ್ಳಿ ಗುರುಗಳಿಗೆ “ಶಿಶುಗೀತೆ ರಚನೆ”ಯಲ್ಲಿ ಮೊದಲ ಬಾರಿಗೆ ಅರಳುಮಲ್ಲಿಗೆ ಸಾಹಿತ್ಯ ವೇದಿಕೆ, ಹೂವಿನಹಡಗಲಿ(ಜಿಲ್ಲೆ-ವಿಜಯನಗರ)ಯವರು ಏರ್ಪಡಿಸಿದ್ದ “ರಾಜ್ಯ ಮಟ್ಟದ ಶಿಶುಗೀತೆಯ ಪ್ರಮಾಣಪತ್ರ” ಲಬಿಸಿದೆ.
ಅವರಿಗೆ ಶಾಲಾ ಮುಖ್ಯಗುರು ಪಿ.ಕೆ ಕಂಟಿಗೊಂಡ. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಅರ್ಜುನ ಕಂಟಿಗೊಂಡ .ಆಲಮೇಲ ವಲಯದ ಶಿಕ್ಷಣ ಸಂಯೋಜಕ ಎಸ್.ಬಿಕಮತಗಿ. ಬಳಗಾನೂರ ಸಿ ಆರ್ ಪಿ ಮಾಹಾಂತೇಶ ಗುಂದಗಿ.ಸಿಂದಗಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಬಿ.ಎಸ್.ಹಿರೇಮಠ.ಸಿಂದಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಬಸವರಾಜ ರಾ ಅಗಸರ ಹಾಗೂ ಚಾಂದಕವಠೆ ಗ್ರಾಮಸ್ಥರು ಸರ್ವ ಎಸ್ ಡಿ ಎಂ ಸಿ ಸದಸ್ಯರು ಮತ್ತು ಶಾಲಾ ಸರ್ವ ಶಿಕ್ಷಕರು ಅಭಿನಂದನೆ ತಿಳಿಸಿದ್ದಾರೆ.