ದಳವಾಯಿಯವರಿಗೆ ಗೆಲ್ಲುವ ಮನಸಿಲ್ಲ: ಲಕ್ಕಣ್ಣ ಸವಸುದ್ದಿ

0
826

ಅವರನ್ನು ಕಾಂಗ್ರೆಸ್ ಗೆ ತಂದಿದ್ದೇ ನಾನು”

ಮೂಡಲಗಿ: ಅರಭಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅರವಿಂದ ದಳವಾಯಿಯವರಿಗೆ ಗೆಲ್ಲುವ ಮನಸಿಲ್ಲ. ಅದಕ್ಕಾಗಿಯೇ ಅವರು ಕಾರ್ಯಕರ್ತರನ್ನು ಒಟ್ಟುಗೂಡಿಸಿಕೊಂಡು ಹೋಗುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರವಿಂದ ದಳವಾಯಿಯವರಿಗೆ ಕ್ಷೇತ್ರದಲ್ಲಿ ಬೇರೆ ಯಾರೂ ಬೆಳೆಯುವುದು ಇಷ್ಟವಿಲ್ಲ ಹೀಗಾಗಿ ಅವರು ನಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ. ನಾವೆಲ್ಲ ಒಂದಾಗಿ ಚುನಾವಣೆಗೆ ಹೋರಾಡೋಣ ಎಂದು ಹೇಳಿದ್ದರೂ ಅವರು ನಮ್ಮನ್ನು ಕಡೆಗಣಿಸಿ ತಿರುಗಾಡುತ್ತಿದ್ದಾರೆ.

ಆದ್ದರಿಂದಲೇ ಇಂದು ಭೀಮಪ್ಪ ಗಡಾದ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು ನಮ್ಮನ್ನು ಸಂಪರ್ಕಿಸಿ ಬೆಂಬಲ ಕೇಳಿದ್ದಾರೆ ನಾವು ಕೂಡ ಗಡಾದ ಅವರ ಪರವಾಗಿ ಕೆಲಸ ಮಾಡಲಿದ್ದೇವೆ ಎಂದರು.

ಹಾಗೆ ನೋಡಿದರೆ ಅರವಿಂದ ದಳವಾಯಿಯವರನ್ನು ರಾಜಕೀಯಕ್ಕೆ ತಂದಿದ್ದೇ ನಾನು. ಗೋಕಾಕದಲ್ಲಿ ರಮೇಶ ಉಟಗಿಯವರ ಜೊತೆ ಇದ್ದಾರೆ ನಡು ರಸ್ತೆಯಲ್ಲಿ ಕಾರು ನಿಲ್ಲಿಸಿ ದಳವಾಯಿಯವರ ಜೊತೆ ಮಾತನಾಡಿ ಕಾಂಗ್ರೆಸ್ ಸೇರಲು ಪ್ರೇರೇಪಿಸಿದ್ದೇನೆ. ಆದರೆ ಅವರು ನನ್ನನ್ನೇ ಕಡೆಗಣಿಸಿದರು ಎಂದು ಹಳೆಯ ನೆನಪು ಕೆದಕಿದ ಲಕ್ಕಣ್ಣ ಸವಸುದ್ದಿ, ಪಕ್ಷದ ಕಾರ್ಯಕರ್ತ ಗುರು ಗಂಗಣ್ಣವರ ಅವರ ಮೇಲೆ ಅಟ್ರಾಸಿಟಿ ಕೇಸ್ ದಾಖಲಾದಾಗ ದಳವಾಯಿಯವರು ಸಹಾನುಭೂತಿಗೂ ಒಂದು ಕಾಲ್ ಮಾಡಿ ಮಾತನಾಡಿಲ್ಲ.

ಹೀಗಾದರೆ ನಾವು ಅವರ ಪರವಾಗಿ ಹೇಗೆ ಕೆಲಸ ಮಾಡಬೇಕು ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಸಿದ್ಧರಾಮಯ್ಯ ಅವರಲ್ಲಿ ಹೇಳಿಕೊಂಡಿದ್ದೇನೆ. ಇನ್ನೂ ಎಲ್ಲರೂ ಸೇರಿಕೊಂಡು ಮುಂದಿನ ಹೆಜ್ಜೆಗಳ ಬಗ್ಗೆ ಚರ್ಚೆ ನಡೆಸಿ ಮುನ್ನಡೆಯುತ್ತೇವೆ ಎಂದು ಲಕ್ಕಣ್ಣ ಸವಸುದ್ದಿ ಹೇಳಿದರು.