ಸಿಂದಗಿ; ಸೆಪ್ಟೆಂಬರ್ ೧೯ರಂದು ಕಲಬುರಗಿ ನಗರದ ಸರ್ಕಾರಿ ಕೃಷಿ ಮಾರುಕಟ್ಟೆ ಮೇಲಿರುವ ಕನ್ನಡ ನಾಮಫಲಕ ಕಿತ್ತು ಹಾಕಿರುವ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಮೇಲೆ ಕರವೇ ಕಾರ್ಯಕರ್ತರು ಮಸಿ ಬಳಿದಿರುವದಕ್ಕೆ ಸಂಬಂಧಿಸಿದಂತೆ ೧೧ ಜನ ಕಾರ್ಯಕರ್ತರ ಮೇಲಿನ ಪ್ರಕರಣ ಈ ಕೂಡಲೆ ಹಿಂಪಡೆಯಬೇಕೆಂದು ತಾಲೂಕಾಧ್ಯಕ್ಷ ಮುತ್ತು ಹಿಪ್ಪರಗಿ ಆಗ್ರಹಿದರು.
ಕರ್ನಾಟಕ ರಾಜ್ಯದಲಿ ಕನ್ನಡ ಭಾಷೆೆಗೆ ಪ್ರಥಮ ಆದ್ಯತೆ ಇದ್ದರೂ ಸಹ ಕೆಲವೊಂದು ಕನ್ನಡ ವಿರೋಧಿಗಳು ಕನ್ನಡ ನಾಮಫಲಕ ಹಾಕುವಲ್ಲಿ ಅಸಡ್ಡೆ ಧೋರಣೆ ಅನುಸರಿಸುತ್ತಿದ್ದಾರೆ ಈ ಕೂಡಲೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಕರ್ನಾಟಕರಕ್ಷಣಾ ವೇದಿಕೆ ಬೀದಿಗಿಳಿದು ಪ್ರತಿಭಟನೆ ಮಾಡಬೇಕಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಬಿ.ಆರ್.ಯಂಟಮಾನ ಚೇತನ ರಾಂಪೂರ, ನಗರಘಟಕಅಧ್ಯಕ್ಷ ರವಿ ನಾಗಠಾಣ, ಪ್ರಧಾನ ಕಾರ್ಯದರ್ಶಿ ಸುನೀಲ ತಳವಾರ, ಸಹ ಕಾರ್ಯದರ್ಶಿಗಳಾದ ಬಸವರಾಜ ಪಾಟೀಲ, ಯುವರಾಜ ಕಿರಣರಾಜ, ಪ್ರತಾಪ ತಳವಾರ, ಶ್ರೀಶೈಲ ಜೇರಟಗಿ, ಪ್ರಜ್ವಲ ಬಸಗೊಂಡ, ವಾಸೀಮ ಮುಗಳಿ, ಶಿವರಾಜ ಬಂದಾಳ, ಸಂತೋಷ ಆಲಮೇಲ, ಪ್ರದೀಪ ಬ್ಯಾಕೊಡ, ರವಿ ಮೋಟಾರ, ಅನೀಲ ಇಂಡಿ, ಕುಮಾರ ಆಲಮೇಲ, ಸುನೀಲ ವಾಲಿಕಾರ, ನಿಖಿಲ ಈಳಗೇರ, ರಾಕೇಶ ಬಾಗೇವಾಡಿ ಸೇರಿದಂತೆ ಅನೇಕರಿದ್ದರು.

