ಮೀಸಲಾತಿ ವಿಳಂಬ ಖಂಡಿಸಿ ಧರಣಿ ಸತ್ಯಾಗ್ರಹ

Must Read

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ತಾಲೂಕಾ ಘಟಕ ಮೂಡಲಗಿ ನೇತೃತ್ವದಲ್ಲಿ ಮೇ 7 ರಂದು ಶನಿವಾರ ಮುಂಜಾನೆ 9 ಘಂಟೆಗೆ ಸಮೀಪದ ಗುರ್ಲಾಪುರ ನಿರೀಕ್ಷಣಾ ಮಂದಿರ (IB) ಹತ್ತಿರ ಸರ್ಕಾರ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ವಿಚಾರದಲ್ಲಿ ಅಸಡ್ಡೆ ಹಾಗೂ ವಿಳಂಬವನ್ನು ಖಂಡಿಸಿ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ ಬಂದ್ ಮಾಡುವ ಮೂಲಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಮೂಡಲಗಿ ತಾಲೂಕಾ ಪಂಚಮಸಾಲಿ ಸಮಾಜದ ಗುರು ಹಿರಿಯರು ಯುವಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ಧೋರಣೆಯನ್ನು ಖಂಡಿಸಿ ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟೋಣ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂಬುದಾಗಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ (ರಿ) ತಾಲ್ಲೂಕು ಘಟಕ ಮೂಡಲಗಿಯ ಅಧ್ಯಕ್ಷ ಬಸವರಾಜ ಪಾಟೀಲ ಕೋರಿದ್ದಾರೆ.

Latest News

ಶತಮಾನದ ಶಾಲೆಗೆ ದುಸ್ಥಿತಿ : ಬಯಲಲ್ಲೇ ಬಿಸಿಯೂಟ ತಯಾರಿಸುವ ಕಪ್ಪಲಗುದ್ದಿ ಶಾಲೆ

ಮೂಡಲಗಿ - ಶತಮಾನ ಕಂಡು ಸಂಭ್ರಮಿಸಲು ಇನ್ನು ಕೆಲವೇ ದಿನಗಳು ಇರಬೇಕಾದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಮತ್ತು ಅಸಡ್ಡೆಯಿಂದ ರಾಯಬಾಗ ತಾಲೂಕಿನ ಕಪ್ಪಲಗುದ್ದಿಯ...

More Articles Like This

error: Content is protected !!
Join WhatsApp Group