Homeಸುದ್ದಿಗಳುಲಯನ್ಸ್ ಕ್ಲಬ್‍ದಿಂದ ಉಚಿತ ಛತ್ರಿ ವಿತರಣೆ

ಲಯನ್ಸ್ ಕ್ಲಬ್‍ದಿಂದ ಉಚಿತ ಛತ್ರಿ ವಿತರಣೆ

ಮೂಡಲಗಿ: ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾರದಿಂದ ರಸ್ತೆ ಬದಿಯ ವ್ಯಾಪಾರಿಗಳಿಗೆ ಉಚಿತವಾಗಿ ಛತ್ರಿಗಳನ್ನು ವಿತರಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ ‘ಮೂಡಲಗಿ ಪಟ್ಟಣದಲ್ಲಿ ಅವಶ್ಯವಿರುವ 10 ಜನ ಬೀದಿ ಬದಿಯ ವ್ಯಾಪಾರಿಗಳಿಗೆ ಉಚಿತವಾಗಿ ಛತ್ರಿಗಳನ್ನು ನೀಡಲಾಗಿದೆ. ಲಯನ್ಸ್ ಕ್ಲಬ್‍ವು ಕಳೆದ ಆರು ವರ್ಷಗಳಿಂದ ಸಮಾಜದಲ್ಲಿ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಲಿದೆ’ ಎಂದರು.

ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ ಪ್ರಾಸ್ತಾವಿಕ ಮಾತನಾಡಿ, ಬೀದಿ ಬದಿಯ ವ್ಯಾಪಾರಿಗಳ ಛತ್ರಿಗಳನ್ನು ದೇಣಿಗೆ ನೀಡಿದವರನ್ನು ಅಭಿನಂದಿಸಿದರು.

ವೆಂಕಟೇಶ ಸೋನವಾಲಕರ, ಡಾ. ಎಸ್.ಎಸ್. ಪಾಟೀಲ, ಮಹಾಂತೇಶ ಹೊಸೂರ, ಡಾ. ತಿಮ್ಮಣ್ಣ ಗಿರಡ್ಡಿ, ಡಾ. ಪ್ರಶಾಂತ ಬಾಬಣ್ಣವರ, ಶ್ರೀಶೈಲ್ ಲೋಕನ್ನವರ, ಸಂಜಯ ಮೋಕಾಶಿ, ಸುರೇಶ ನಾವಿ ಇದ್ದರು.

ಖಜಾಂಚಿ ಸುಪ್ರೀತ ಸೋನವಾಲಕರ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group