ಮನುಷ್ಯರು ಹಾಗೂ ಸಮಾಜದ ಸ್ವಾಸ್ಥ್ಯಕ್ಕಾಗಿ ವೈದ್ಯರು ಹಾಗೂ ಪತ್ರಕರ್ತರ ಪಾತ್ರ ಮಹತ್ವದ್ದು

0
181

ಮೂಡಲಗಿ: ವೈದ್ಯರು ಮನುಷ್ಯರ ಆರೋಗ್ಯವನ್ನು ಕಾಪಾಡಿದರೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಮಹತ್ವದಾಗಿದೆ ಎಂದು ಕಾರ್ಯನಿತರ ಪತ್ರಕರ್ತರ ಸಂಘದ ತಾಲ್ಲೂಕಾ ಗೌರವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ಇಲ್ಲಿಯ ಶಿವಬೋಧರಂಗ ಕೋ.ಆಪ್. ಕ್ರೆಡಿಟ್ ಸೊಸೈಟಿಯ ಸಭಾಭವನದಲ್ಲಿ ಸೋಮವಾದಂದು ಕರ್ನಾಟಕ ಕಾರ್ಯನಿತರ ಪತ್ರಕರ್ತರ ಸಂಘದ ಮೂಡಲಗಿ ತಾಲೂಕಾ ಘಟಕದ ಆಶ್ರಯದಲ್ಲಿ ಆಚರಿಸಿದ ಪತ್ರಿಕಾ ದಿನಾಚರಣೆ ಮತ್ತು ವೈದ್ಯರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ್ತು ದೇಶದ ಪ್ರಗತಿಯಲ್ಲಿ ಪತ್ರಿಕಾ ರಂಗವು ಅಪಾರ ಕೊಡುಗೆಯನ್ನು ನೀಡಿದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕು ಘಟಕಗಳು ಉತ್ತಮ ಸಂಘಟನೆಯೊಂದಿಗೆ ಕಾರ್ಯನಿರ್ವಹಿಸುತ್ತಲಿವೆ. ವಿಶೇಷವಾಗಿ ಮೂಡಲಗಿಯ ಘಟಕವು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಮೂಲಕ ಶ್ಲಾಘನೀಯವಾಗಿದೆ ಎಂದರು.

ಮುಖ್ಯ ಅತಿಥಿ ಕಾರ್ಯನಿತರ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡಿ ಮಾತನಾಡಿ ಪತ್ರಕರ್ತರು ಯಾವುದೇ ಸುದ್ದಿ ಬರೆಯುವ ಮುಂಚೆ ತಲಸ್ಪರ್ಶಿಯಾಗಿ ಯೋಚಿಸಬೇಕು, ಸುದ್ದಿಗಳನ್ನು ಸ್ಪ ಮಾಹಿತಿಪೂರ್ಣವಾಗಿ ನೀಡುವುದರಿಂದ ಪರಿಣಾಮಕಾರಿಯಾಗುವುದು. ಅದಕ್ಕಾಗಿ ಪತ್ರಕರ್ತರು ಸಂವಹನಶೀಲರಾಗಿ ಕಾರ್ಯಮಾಡಬೇಕು ಎಂದರು.

ಅತಿಥಿ ಉಪನ್ಯಾಸಕ ಪ್ರೊ. ಸಂಗಮೇಶ ಗುಜಗೊಂಡ ಅವರು ಉಪನ್ಯಾಸ ನೀಡಿದರು. ವೈದ್ಯರ ಪರವಾಗಿ ಡಾ. ಅನೀಲ ಪಾಟೀಲ ಮಾತನಾಡಿದರು.

ಮೂಡಲಗಿ ಘಟಕದ ಅಧ್ಯಕ್ಷ ಕೃಷ್ಣಾ ಗಿರೆಣ್ಣವರ ಪ್ರಾಸ್ತಾವಿಕ ಮಾತನಾಡಿ ಮೂಡಲಗಿಗೆ ಪತ್ರಿಕಾ ಭವನ ನಿರ್ಮಾಣ ಬಗ್ಗೆ ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿಕೊಂಡರು.
ಮೂಡಲಗಿ ಪಟ್ಟಣದ ವೈದ್ಯರಿಗೆ ಮತ್ತು ತಾಲ್ಲೂಕಿನ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಿದರು. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡಿರುವ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

ಮುಖ್ಯ ಅತಿಥಿಯಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗೋಕಾಕ ಅಧ್ಯಕ್ಷ ಗುರುರಾಜ ಪೂಜೇರಿ, ಹಿರಿಯ ವೈದ್ಯ ಡಾ. ಕೆ.ವಿ.ದಂತಿ, ಶಿವಬೋಧರಂಗ ಅರ್ಬನ್ ಕೋ.ಆಪ್ ಸೊಸಾಯಿಟಿ ಅಧ್ಯಕ್ಷ ಬಿ.ವಿ. ಗುಲಗಾಜಂಬಗಿ, ನಿರ್ದೇಶಕ ಆರ್.ಪಿ. ಸೋನವಾಲಕರ, ತಹಶೀಲ್ದಾರ ಶಿವಾನಂದ ಬಬಲಿ, ಬಿಇಒ ಅಜೀತ ಮನ್ನಿಕೇರಿ, ಸಿಪಿಐ ಶ್ರೀಶೈಲ್ ಬ್ಯಾಕೂಡ, ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಪಶು ಇಲಾಖೆಯ ಸಹ ನಿರ್ದೇಶಕ ಡಾ. ಮೋಹನ ಕಮತ, ತಾಲ್ಲೂಕಾ ಪಂಚಾಯ್ತಿಯ ಸಹಾರ್ಯಕ ನಿರ್ದೇಶಕ ಚಂದ್ರಶೇಖರ ಬಾರ್ಕಿ, ಹೆಸ್ಕಾಂ ಇಲಾಖೆಯ ಎಸ್.ಎಸ್. ಮಠ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ.ಬಿ. ಪಾಟೀಲ, ಪಿಎಸ್‍ಐ ಹಣಮಂತ ಧರ್ಮಟ್ಟಿ, ತಾಲ್ಲೂಕಾ ವೈದ್ಯರ ಸಂಘದ ಅಧ್ಯಕ್ಷ ಡಾ. ಪ್ರಕಾಶ ಬುದ್ನಿ, ಕಾರ್ಯದರ್ಶಿ ಮಹೇಶ ಮುಳವಾಡ, ಡಾ. ಎಸ್.ಎಸ್. ಮುರಗೋಡ, ಡಾ. ಬಿ.ಎಸ್. ಬಾಬಣ್ಣವರ, ಡಾ. ಎಸ್.ಎಸ್. ಪಾಟೀಲ ಹಾಗೂ ಪತ್ರಕರ್ತರ ಸಂಘದ ಪದಾಧಿಕಾರಿಗಳು, ವೈದ್ಯರ ಸಂಘದ ಪಾದಾಧಿಕರಿಗಳು ಭಾಗವಹಿಸಿದ್ದರು.

ಶಂಕರ ಹಾದಿಮನಿ ಸ್ವಾಗತಿಸಿದರು, ಬಾಲಶೇಖರ ಬಂದಿ ನಿರೂಪಿಸಿದರು, ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲು ಬೋಳನವರ ವಂದಿಸಿದರು.