ಯುವ ಜನತೆಗೆ ಮಾದರಿ ಡಾ.ಪುನಿತ್ ರಾಜಕುಮಾರ

Must Read

ಸಿಂದಗಿ: ಡಾ. ಪುನಿತ್ ರಾಜಕುಮಾರ ಕೇವಲ ಚಿತ್ರ ನಟನಾಗಿ ಮಾತ್ರ ಹೆಸರು ಮಾಡಲಿಲ್ಲ ಅವರು ಅಂಧರ ಬಾಳಿಗೆ ಬೆಳಕಾಗಿ, ವೃದ್ಧರ ಜೀವನದಲ್ಲಿ ಕಷ್ಟಗಳನ್ನು ಕಾಣದ ಹಾಗೆ ನೋಡಿಕೊಂಡ ಮಹಾನ್ ಚೇತನ ಅವರು ನಾಡಿನ ಜನರಿಗೆ ಮಾದರಿಯಾಗಿದ್ದರು ಎಂದು ಗರೂರ(ಬಿ) ಗ್ರಾಮದ ಪುರಾಣ ಪ್ರವಚನಗಾರರು ಖ್ಯಾತ ವಾಗ್ಮಿ ಶಿವಲಿಂಗಯ್ಯ ಶಾಸ್ರ್ತಿ ಪುರಾಣಿಕಮಠ ಅವರು ಹೇಳಿದರು.

ತಾಲೂಕಿನ ಬಂದಾಳ ಗ್ರಾಮದ ಶ್ರೀ ಹುಡೇದ ಲಕ್ಷ್ಮೀ ಜಾತ್ರಾ ಮಹೋತ್ಸವ ನಿಮಿತ್ತವಾಗಿ 11 ದಿನಗಳವರೆಗೆ ನವಲಗುಂದ ಅಜಾತ ನಾಗಲಿಂಗ ಸ್ವಾಮಿಗಳ ಪುರಾಣ ಪ್ರವಚನದಲ್ಲಿ ಗ್ರಾಮದ ಡಾ,ಪುನಿತ್ ರಾಜಕುಮಾರ ಯುವ ಅಭಿಮಾನಿಗಳು ಡಾ ಪುನಿತ್ ರಾಜಕುಮಾರ ಅವರ ಹುಟ್ಟು ಹಬ್ಬದ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿ, ಡಾ ಪುನಿತ್ (ಅಪ್ಪು) ಕನ್ನಡ ನಾಡು ನುಡಿ ಸಂಸ್ಕೃತಿಗೆ ಹೆಚ್ಚು ಒಲವು ತೋರುವ ಮೂಲಕ ದಾನ ಧರ್ಮ ಪರೋಪಕಾರದ ತಳಹದಿಯ ಮೇಲೆ ಸುಂದರ ಕುಟುಂಬಸ್ಥರೊಂದಿಗೆ ಹೊಂದಾಣಿಕೆ ಜೀವನ ನಡೆಸುವ ಮೂಲಕ ಸಮಾಜಕ್ಕಾಗಿ ಪ್ರೀತಿಯಿಂದ ಬದುಕಿದವರು ಅವರ ಸಾಮಾಜಿಕ ಕಾಳಜಿ ಅಪಾರವಾಗಿದೆ ಅವರು ಚಿತ್ರನಟರಾಗಿ ಗಳಿಸಿದ ಹಣವನ್ನು ಸಾಮಾಜಿಕವಾಗಿ ಖರ್ಚು ಮಾಡಿದರು.

ಶಾಲಾ ಮಕ್ಕಳನ್ನು ದತ್ತು ಪಡೆದು ಕೊಂಡು ಕಲಿಸಿದರು. ಹಲವು ವೃದ್ದಾಶ್ರಮ, ಗೋ ಶಾಲೆ ಸ್ಥಾಪನೆ ಮಾಡಿರುವ ನಮ್ಮ ಹೆಮ್ಮಯ ನಟ ಡಾ ||ಪುನಿತ್ ರಾಜಕುಮಾರ ಅವರ ಹುಟ್ಟು ಹಬ್ಬ ಸುಂದರವಾಗಿ ಆಚರಿಸಿ ಕಾರ್ಯಕ್ರಮಕ್ಕೆ ಬಂದ ಭಕ್ತರಿಗೆ ಪ್ರಸಾದ ಮಾಡಿ ವಿತರಿಸುವ ಕಾರ್ಯ ಉತ್ತಮವಾಗಿದೆ ಎಂದು ಗ್ರಾಮದ ಯುವ ಜನತೆಗೆ ಅಭಿನಂದನೆ ತಿಳಿಸಿದರು.

ಗ್ರಾಮದ ಯುವ ಜನತೆ ಹಮ್ಮಿಕೊಂಡಿರುವ ಡಾ || ಪುನಿತ್ ರಾಜಕುಮಾರ ಭಾವ ಚಿತ್ರಕ್ಕೆ ಹೂ ಕಾಯಿ ಕರ್ಪೂರ ಮಾಡಿ ಭಕ್ತಿಯಿಂದ ಬಂದ ಸರ್ವ ಭಕ್ತರಿಗೆ ಮಾಹಾ ಪ್ರಸಾದ ನೆರವೇರಿಸಿದರು.

ಖ್ಯಾತ ಸಂಗೀತಗಾರರು ಜಾನಪದ ಗಾರುಡಿಗ ಪ್ರಭು ಕುಮಾರ ಗವಾಯಿಗಳು ಮದರಿ ಮನೋಹರ ಟೆಂಗಳ್ಳಿ ಸಂಗೀತ ಸೇವೆ ನೆರವೇರಿಸಿದರು.

ನಿಂಗನಗೌಡ ಬಿರಾದಾರ ನಿರೂಪಿಸಿ ವಂದಿಸಿದರು.

Latest News

ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ

ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...

More Articles Like This

error: Content is protected !!
Join WhatsApp Group