ಗ್ರಾಮದ ಕ್ರೀಡಾಳುಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು: ಬಿ ಆರ್ ಸಾಯನ್ನವರ

Must Read

ಮೂಡಲಗಿ:-ತಾಲೂಕಿನ ಶಿವಾಪೂರ(ಹ) ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಹಾಗೂ ಐದೇಶಿ ಕಾರ್ಯಕ್ರಮದ ಅಂಗವಾಗಿ ಬೆಳಗಾವಿ ಜಿಲ್ಲಾ ಕಬಡ್ಡಿ ಅಮೆಚೂರ ಅಸೋಸಿಯೇಷನ್ ಅನುಮತಿಯೊಂದಿಗೆ ಜರುಗಿದ ಪುರುಷರ 52 ರಿಂದ 55 ಕೆ ಜಿ ಒಳಗಿನ ಮ್ಯಾಟ ಕಬಡ್ಡಿ ಪಂದ್ಯಾವಳಿ ನಡೆಯಿತು.

ಪಂದ್ಯಾವಳಿಯಲ್ಲಿ  ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು ಬಿ ಆರ್ ಸಾಯನ್ನವರ ಅವರು, ಗ್ರಾಮದ ಕ್ರೀಡಾಳುಗಳಿಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡಿ ಅವರಿಗೆ ಬೆನ್ನೆಲುಬು ಆಗಿ ಇರುತ್ತೇವೆ ಎಂದು ಹೇಳಿದರು.

ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಜನಪ್ರಿಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಪ್ರಥಮ ಬಹುಮಾನವಾಗಿ ಹತ್ತು ಸಾವಿರದ ಒಂದು ರೂ.ಗಳ ಜೊತೆಗೆ 5 ಪೂಟ ಡಾಲ ಬಹುಮಾನವಾಗಿ ನೀಡಿದ್ದರು ,

ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವನ್ನು ರಾಯಬಾಗ ತಾಲ್ಲೂಕಿನ ಹಂದಿಗುಂದ ಗ್ರಾಮದ ಜೈ ಹನುಮಾನ ತಂಡದವರು,ದ್ವಿತೀಯ ಮಹಾಲಿಂಗಪೂರ ತಂಡ, ತೃತೀಯ ಶಿವಾಪೂರ ತಂಡದವರು ಪಡೆದರು.

ಕಾರ್ಯಕ್ರಮದಲ್ಲಿ ಎಸ್. ಎಸ್ ಪಾಟೀಲ, ಎಸ್.ವಾಯ ಜುಂಜರವಾಡ , ಕೆ.ಬಿ ಮುಧೋಳ,ಐ.ಬಿ ಬೆಳಗಲಿ, ಪ್ರವೀಣ್ ಪಾಟೀಲ ಸೇರಿದಂತೆ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಮಹಾಲಕ್ಷ್ಮಿ ಸ್ಪೋರ್ಟ್ಸ್ ಕ್ಲಬ್ ಸಂಘಟಕರು ,ಗ್ರಾಮದ ಎಲ್ಲ ಸಂಘ ಸಂಸ್ಥೆಯ ಪದಾಧಿಕಾರಿಗಳು, ನಿರ್ಣಾಯಕರಾಗಿ ಹಣಮಂತ ಮದನ್ನವರ, ಪೂಜಾ ಹಳ್ಳುರ ,ಮಲ್ಲಪ್ಪ ಗುರ್ಲಾಪೂರ ಉಪಸ್ಥಿತರಿದ್ದರು.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group