ಹಿರಿಯರನ್ನು ಗೌರವದಿಂದ ಕಾಣಿ-ಶಿವಶಂಕರ ಮುತ್ತಗಿ

Must Read

ಹುನಗುಂದ: ಮಾನವೀಯ ಮೌಲ್ಯಗಳ ಕಣಜದಂತಿರುವ ಹಿರಿಯ ಜೀವಗಳು ಇತ್ತೀಚಿನ ವರ್ಷಗಳಲ್ಲಿ ನಿರ್ಲಕ್ಷ್ಯಕ್ಕೊಳಗಾಗುತ್ತಿರುವುದು ಸಾಂಸ್ಕೃತಿಕ ಕಂದಕಕ್ಕೆ ಕಾರಣವಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿ, ಉಪನ್ಯಾಸಕ ಶಿವಶಂಕರ ಮುತ್ತಗಿ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬಾಗಲಕೋಟೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತರ್ ಪೀಳಿಗೆ ಜಾಗೃತಿ ಮೂಡಿಸುವ ಸಲುವಾಗಿ
‘ನಮ್ಮ ಹಿರಿಯರು ನಮ್ಮ ಆದರ್ಶ’ಎಂಬ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು ಶಿಕ್ಷಣ, ನಗರೀಕರಣ, ಉದ್ಯೋಗದ ಅವಕಾಶಗಳು, ಸ್ವಾವಲಂಬನೆಯ ಹಂಬಲದಂತಹ ಕಾರಣಗಳಿಂದ ಅವಿಭಕ್ತ ಕುಟುಂಬಗಳು ಮಾಯವಾಗಿ ಅಣು ಕುಟುಂಬಗಳು ಹೆಚ್ಚಾಗುತ್ತಿದ್ದು ಅಪಾರ ಜೀವನಾನುಭವವುಳ್ಳ ಹಿರಿಯರು ಸದ್ದಿಲ್ಲದೇ ನೇಪಥ್ಯಕ್ಕೆ ಸರಿಯುತ್ತಿದ್ದು ಇದು ಸಾಮಾಜಿಕ ವ್ಯವಸ್ಥೆಯಲ್ಲಿ ಅನೇಕ ಸ್ಥಿತ್ಯಂತರಗಳಿಗೆ ಕಾರಣವಾಗುತ್ತಿದೆ. ಇಂದಿನ ಯುವಜನತೆಗೆ ಸಾಂಸ್ಕೃತಿಕ ಕೊಂಡಿಯಂತಿರುವ ಹಿರಿಯರ ಮಹತ್ವವನ್ನು ತಿಳಿಸಿಕೊಡುವುದರ ತುರ್ತು ಅಗತ್ಯ ಇದೆ ಎಂದರು.

ಇನ್ನೋರ್ವ ಉಪನ್ಯಾಸಕರಾದ ನೀರಲಕೇರಿ ವೃದ್ಧಾಶ್ರಮದ ಗೋಪಾಲ ಶಿವಾಪೂರ ಮಾತನಾಡಿ ನಮ್ಮ ಬದುಕಿಗೆ ಬುನಾದಿ ಕಲ್ಪಿಸಿದ ಹೆತ್ತವರನ್ನು ಇಳಿ ವಯಸ್ಸಿನ ದೂರಮಾಡುವ ಬದಲು ಪ್ರೀತಿ ತೋರಿಸುವ, ಗೌರವಿಸುವ ಅಗತ್ಯತೆ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಶರಣಪ್ಪ ಹೂಲಗೇರಿಯವರು ಸದ್ಯದ ಪೀಳಿಗೆಗೆ ಹಿರಿಯರ ಮಾರ್ಗದರ್ಶನದ ಅಗತ್ಯತೆ ಇದ್ದು ನಮ್ಮ ನಮ್ಮ ಮನೆಯಿಂದಲೇ ಹಿರಿಯರನ್ನು ಗೌರವಿಸುವ ಕಾರ್ಯ ಆಗಬೇಕೆಂದರು.

ಸಿಡಿಸಿ ಸದಸ್ಯ ಮುತ್ತಣ್ಣ ಗಂಜಿಹಾಳ, ಎಂ.ಆರ್.ಡಬ್ಲೂ ಸಂಗಣ್ಣ ಬೀರಗುಂಡರ, ಯು.ಆರ್.ಡಬ್ಲೂ ತಿಪ್ಪಣ್ಣ ಕುರಿ, ನಿವೃತ್ತ ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ ಉಪಸ್ಥಿತರಿದ್ದರು.
ಸೇವಂತಿ ಬೆಣಗಿ ಪ್ರಾರ್ಥಿಸಿದರು. ಡಾ.ಎನ್.ವಾಯ್.ನದಾಫ್ ಸ್ವಾಗತಿಸಿ ನಿರೂಪಿಸಿದರು ಉಪನ್ಯಾಸಕಿ ಛಾಯಾ ಪುರಂದರೆ ವಂದಿಸಿದರು.

LEAVE A REPLY

Please enter your comment!
Please enter your name here

Latest News

ಸ್ವಾತಂತ್ರ ಹೋರಾಟಗಾರ, ಹೈ. ಕ. ವಿಮೋಚನಾ ರೂವಾರಿ ಚಂದ್ರಶೇಖರ ಪಾಟೀಲ ಮಹಾಗಾಂವ

ಚಂದ್ರಶೇಖರ ಸಂಗಶೆಟ್ಟಿ ಪಾಟೀಲ , ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದ ಶಾಸಕಾಂಗ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ ಹೋರಾಟಗಾರ ಮತ್ತು ರಾಜಕಾರಣಿ. ಸ್ವಾತಂತ್ರ ಹೋರಾಟಗಾರ ಹೈದ್ರಾಬಾದ...

More Articles Like This

error: Content is protected !!
Join WhatsApp Group