ಹಳ್ಳೂರ – ದೇವರು ಮಹಾತ್ಮರು ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ ಮಾನವನಿಗೆ ಹುಟ್ಟು ಸಾವು ಇದೆ ಗುರು ದೇವರಿಗೆ ಹುಟ್ಟು ಸಾವಿಲ್ಲ ಪ್ರಾಣಿ ಪಕ್ಷಿಗಳಿಗಿಂತ ಮಾನವ ಜನ್ಮ ದೊಡ್ಡದು ಹಾನಿ ಮಾಡಿಕೊಳ್ಳಬಾರದು ಕಟ್ಟೆಯ ಮೇಲೆ ಕುಳಿತು ಮತ್ತೊಬ್ಬರ ಬಗ್ಗೆ ಕೆಟ್ಟದ್ದು ಮಾತಾಡೋದು ಹೊಟ್ಟೆ ಕಿಚ್ಚು ನಿಂದಾ ಆಡುವುದು ಮಹಾಪಾಪ ಅದನ್ನು ಬಿಟ್ಟು ಪುಣ್ಯದ ಕೆಲಸ ಕಾರ್ಯ ಮಾಡಿ ಪುಣ್ಯ ಪಡೆದುಕೊಳ್ಳಿರೆಂದು ಸೊಲ್ಲಾಪುರ ಮಾತೋಶ್ರೀ ಅರುಣಾ ದೇವಿಯವರು ಹೇಳಿದರು.
ಅವರು ವಡೇರಹಟ್ಟಿ ಗ್ರಾಮದ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ನಡೆದ ನವರಾತ್ರಿ ಉತ್ಸವದ 3 ನೇ ದಿನದ ಶ್ರೀ ದೇವಿ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿ,
ಹೋದ ಸಮಯ ವಯಸ್ಸು ಮರಳಿ ಬರುವುದಿಲ್ಲ ದೇವಿ ಚರಿತ್ರೆ ಪುರಾಣ ಮಹಿಮೆ ಅಪಾರ ಮಹಿಷ್ಯಾಸುರ ದುಷ್ಟ ಧಣುವಿನ ಮಗ ಹುಟ್ಟಿ ದೇವತೆಗಳಿಗೆ ತೊಂದರೆ ಕೊಡುತ್ತಿದ್ದನು 5 ಸಾವಿರ ವರ್ಷ ಅವನ ಯುದ್ಧ ಮಾಡುತ್ತಾನೆ ದೇವಿಯು ಶಕ್ತಿಯಿಂದ ದುಷ್ಟ ರಾಕ್ಷಸರನ್ನು ಸಂಹಾರ ಮಾಡಿದರು. ಹಣ, ಶಕ್ತಿ ಜನ ಬಲ ಎಲ್ಲಕ್ಕಿಂತಲೂ ದೇವರ ಬಲ ಶ್ರೇಷ್ಠ ಬಹುಸಾಗರವನ್ನು ದಾಟಿ ಮುಕ್ತಿ ಹೊಂದಬಹುದು. ಮೀರಾಬಾಯಿ ಚಿಕ್ಕ ವಯಸ್ಸಿನಲ್ಲಿಯೇ ಮುಕ್ತಿ ಪಡೆದುಕೊಂಡಿದ್ದಾರೆ ದೇವಿಯು ಆರಾಧನೆ ನಾಮಸ್ಮರಣೆ ಮಾಡುವರನ್ನು ದೇವಿ ಸದಾಕಾಲ ರಕ್ಷಣೆ ಮಾಡುತ್ತಾರೆ.ಪರಮಾತ್ಮನ ಒಲುಮೆಯಾದರೆ ಅಸಾಧ್ಯ ಸಾಧ್ಯವಾಗುತ್ತದೆ ಕಷ್ಟ ಕಾಲದಲ್ಲಿ ಆಸ್ತಿ ಅಂತಸ್ತು ಅಧಿಕಾರ ರಕ್ಷಣೆ ಮಾಡುವುವದಿಲ್ಲ ವಿನಯ ದಾನ ಧರ್ಮವಿದ್ದರೆ ಭಗವಂತ ಕಾಯುತ್ತಾನೆ.ಗುರು ದೇವರ ಮೇಲೆ ಅಪಾರವಾದ ನಂಬಿಕೆ ವಿಶ್ವಾಸ ಇಟ್ಟು ಹೃದಯದಲ್ಲಿ ಪೂಜಿಸಬೇಕು ಎಲ್ಲ ದೇವರಿಗೆ ಕೈ ಮುಗಿಯುದಕ್ಕಿಂತ ಒಂದೇ ದೇವರನ್ನು ನಂಬಬೇಕು.ಮೀರಾಬಾಯಿ ಅಂಥ ಭಕ್ತಿ ಮಾಡಬೇಕು ಹೇಳಿದರು.
ಪೀಠಾಧಿಪತಿಗಳಾದ ನಾರಾಯಣ ಶರಣರು ಮಾತನಾಡಿ ದೇವರ ಮೇಲೆ ಅಪಾರವಾದ ನಂಬಿಕೆಯಿಟ್ಟು ಭಕ್ತಿಯಿಂದ ಪೂಜಿಸಿ ದ್ಯಾನಿಸಿದರೆ ಸಕಲ ಸೌಭಾಗ್ಯ ದೊರೆಯುತ್ತವೆ. ಅಧಿಕಾರವಿದ್ದಾಗ ಕಷ್ಟಕ್ಕೆ ಸ್ಪಂದಿಸುವ ಗುಣವಿರಬೇಕು.ಇನ್ನೊಬ್ಬರಿಗೆ ಹೊರೆಯಾಗದಂತೆ ಬದುಕಬೆಕು. ಶ್ರೀಮಂತಿಕೆ ಬಂದಾಗ ದಾನ ಧರ್ಮ ಮಾಡದೇ ಇದ್ದರೆ ಇದ್ದರು ವ್ಯರ್ಥವೆಂದು ಹೇಳಿದರು.
ವಿಶೇಷ ಸತ್ಕಾರ ಮೂರ್ತಿಗಳಾಗಿ ಆಗಮಿಸಿದ ಮುರಿಗೆಪ್ಪ ಮಾಲಗಾರ ಮಾತನಾಡಿ ಇತ್ತೀಚೆಗೆ ಯುವಕರು ಮೋಬೈಲ್ ಟಿವಿ ಮಾಧ್ಯಮಕ್ಕೆ ದಾಸರಾಗಿ ವ್ಯಸನಕ್ಕೆ ಬಲಿಯಾಗಿ ಆಧ್ಯಾತ್ಮದ ಕಡೆ ಗಮನ ಹರಿಸದೆ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಬದುಕಲು ಅನ್ನ ಎಷ್ಟು ಮುಖ್ಯ ಅಷ್ಟೇ ಅಧ್ಯಾತ್ಮ ದಾನ ಧರ್ಮ ಮುಖ್ಯವೆಂದು ಹೇಳಿದರು.
ಅತಿಥಿಗಳಾದ ಮಹಾಂತೇಶ ವಾಲಿ ನ್ಯಾಯವಾದಿಗಳು ಗೋಕಾಕ.. ಸಮಾಜ ಸೇವಕ ಮುರುಘೇಂದ್ರ ಮಾಲಗಾರ, ವಿವೇಕಾನಂದ ಯಮಕನಮರಡಿ, ಧರ್ಮಾಧಿಕಾರಿಗಳು ಹಾಗೂ ನ್ಯಾಯವಾದಿಗಳು ಗೋಕಾಕ..ಮಲ್ಲಪ್ಪ ಕುರಿ ರೈತ ಮುಖಂಡರು, ಪಾಂಡುರಂಗ ಬೀರಣಗಡ್ಡಿ, ಜಿಲ್ಲಾ ಸಂಚಾಲಕರು ರೈತ ಸಂಘ, ನಾಗಪ್ಪ ಜೊಕ್ಕಾನಟ್ಟಿ ಸೇರಿದಂತೆ ಅನೇಕರಿದ್ದರು. ಸರ್ವರಿಗೂ ಮಹಾ ಪ್ರಸಾದ ವ್ಯವಸ್ಥೆ ನಡೆಯಿತು. ಕಾರ್ಯಕ್ರಮವನ್ನು ಪಾಂಡುರಂಗ ಕುರಿ ನಿರೂಪಿಸಿದರು.

