ಉತ್ತಮ ತರಬೇತಿಯು ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನ ಕಲಿಸುತ್ತದೆ – ಉಮಾದೇವಿ ಹಿರೇಮಠ

Must Read

ಬೆಳಗಾವಿ –  ಉತ್ತಮ ತರಬೇತಿಯು ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನು ಧನಾತ್ಮಕ ಮತ್ತು ಬೆಂಬಲದ ರೀತಿಯಲ್ಲಿ ಕಲಿಸುತ್ತದೆ.ಈ ದಿನ ತಾವೆಲ್ಲರೂ ತರಬೇತಿ ಬಗ್ಗೆ ಅನಿಸಿಕೆ ಹೇಳುವಾಗ ಈ ತರಬೇತಿ ಉತ್ತಮವಾಗಿ ಜರುಗಿದ್ದು ಕಂಡು ಬಂದಿತು. ನಾವೆಲ್ಲರೂ ನಮ್ಮ ವೃತ್ತಿ ಬದ್ಧತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ತರಬೇತಿ ಯಶಸ್ವಿಯಾಗಿದೆ.ಮುಂದಿನ ದಿನಗಳಲ್ಲಿ ತರಗತಿ ಕೋಣೆಯಲ್ಲಿ ಇದರ ಅನುಷ್ಠಾನ ಜರುಗಲಿ ಎಂದು ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿಗಳಾದ ಉಮಾದೇವಿ ಹಿರೇಮಠ ಹೇಳಿದರು.

ಅವರು ಬೆಳಗಾವಿ ಯಲ್ಲಿ ಎನ್ ಇ ಪಿ ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ದಿ ಅಸೋಷಿಯೇಷನ್ ಆಫ್ ಪೀಪಲ್ ವಿತ್ ಡೆಸೆಬಿಲಿಟಿ (ಎಪಿಡಿ) ಸಂಸ್ಥೆ ಹಾಗೂ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಬೆಳಗಾವಿ ಜಿಲ್ಲೆಯ ಸಮನ್ವಯ ಶಿಕ್ಷಣ ತರಬೇತಿ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ  ಮಾತನಾಡಿದರು

     ಬೆಂಗಳೂರಿನ ಎಪಿಡಿ ಸಂಸ್ಥೆಯ ಭಾಸ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣವಾಗಿಸುವಂತೆ ಅವರ ಅಗತ್ಯಗಳಿಗನುಸಾರವಾಗಿ ಶಾಲೆಗಳು ಮಾರ್ಪಾಡು ಮಾಡಿಕೊಳ್ಳುತ್ತಾ, ಶಾಲಾ ಸೌಲಭ್ಯಗಳ ಸುಲಭ ಲಭ್ಯತೆಯನ್ನು ಖಾತ್ರಿಪಡಿಸುವುದು ಮುಖ್ಯವಾಗಿದೆ. ನಿಮ್ಮೆಲ್ಲರ ಸಹಕಾರ ದಿಂದ ತರಬೇತಿ ಯಶಸ್ವಿಯಾಗಿ ಜರುಗಿದೆ. ಮುಂದೆ ಕೂಡ ತಮ್ಮ ಸಂದೇಹಗಳನ್ನು ವ್ಯಾಟ್ಸಪ್ ಮೂಲಕ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು. ನಮ್ಮ ನಿಮ್ಮ ನಡುವೆ ನಿರಂತರವಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು. ಎಲ್ಲರೂ ಇದರ ಪ್ರಯೋಜನ ಪಡೆಯಿರಿ ಎಂದು ಹೇಳಿದರು.  

    ಡಿಡಿಪಿಐ ಕಛೇರಿಯ ತಾಂತ್ರಿಕ ಸಹಾಯಕರಾದ ರೋಹಿಣಿ ನಾಯಕ್  ಉಪಸ್ಥಿತರಿದ್ದರು. 

    ಈ ತರಬೇತಿ ಗೆ ಸವದತ್ತಿ ತಾಲೂಕಿನ ವೈ ಬಿ ಕಡಕೋಳ, ಡಿ ಎಲ್ ಭಜಂತ್ರಿ, ಬೆಳಗಾವಿ ನಗರದ ಎಸ್. ಬಿ. ಪಾಟೀಲ, ಎಂ. ಎಸ್ ಯಂಕಂಚಿ.ಭಾರತಿ ತಳವಾರ,  ಬೆಳಗಾವಿ ಗ್ರಾಮೀಣ ಅರುಣಾ ಕೋಳಿ, ರಾಮಕೃಷ್ಣ ಹಲಗಿ, ಕಿತ್ತೂರು ತಾಲೂಕಿನ ಬಿ ಡಿ ಕಲಬಾವಿ, ಆರತಿ ಕಲಘಟಕರ, ಆದರ್ಶ ಘೋಡಗೇರಿ. ರಾಮದುರ್ಗ ತಾಲೂಕಿನ ಆರ್ ಎಸ್ ಸಂಕನ್ನವರ, ಖಾನಾಪುರ ತಾಲೂಕಿನ ಎಸ್ ಎನ್ ಕಮ್ಮಾರ, ಬೈಲಹೊಂಗಲ ತಾಲೂಕಿನ ಎಂ. ಐ. ಕಾಜಗಾರ.ಆರ್ ಎನ್ ಇಂಗಳಗಿ, ಶ್ರೀಮತಿ ಎಸ್ ಎಸ್ ಕಮ್ಮಾರ, ಅಂಜಲಿ ಕವಿಲ್ಕರ ಸೇರಿದಂತೆ ವಿವಿಧ ತಾಲೂಕಿನ ಲ್ಲಿ ಸೇವೆ ಸಲ್ಲಿಸುತ್ತಿರುವ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರು ತರಬೇತಿ ಯಲ್ಲಿ ಪಾಲ್ಗೊಂಡಿದ್ದರು. 

ಮೂರು ದಿನಗಳ ಕಾಲ ಜರುಗಿದ ತರಬೇತಿ ಯನ್ನು ಭಾಸ್ಕರ್. ಸುರೇಶ್.ಕದಂಪುರ, ಡಾ. ಅಕ್ಷತಾ ಕುಮಾರಿ, ಡಾ. ಈ. ರಂ.ನಾಜ್ ಮಂಜುನಾಥ ಮೊದಲಾದ ಸಂಪನ್ಮೂಲ ವ್ಯಕ್ತಿ ಗಳು ನೀಡಿದರು.

 ತರಬೇತಿ ಕುರಿತು ರಾಮದುರ್ಗ ತಾಲೂಕಿನ   ಆರ್ ಎಸ್ ಸಂಕನ್ನವರ ಬೈಲಹೊಂಗಲ 

ತಾಲೂಕಿನ ಆರ್ ಎನ್ ಇಂಗಳಗಿ ಮಾತನಾಡಿದರು. 

    ಕಾರ್ಯಕ್ರಮದ ಪ್ರಾರಂಭದಲ್ಲಿ ವೈ. ಬಿ. ಕಡಕೋಳ ಸ್ವಾಗತಿಸಿದರು. ಎಂ.ಐ.ಕಾಜಗಾರ. ನಿರೂಪಿಸಿದರು. ಶ್ರೀಮತಿ ಎಸ್ ಎಸ್ ಕಮ್ಮಾರ ವಂದಿಸಿದರು..

Latest News

ಪ್ರಪಂಚಕ್ಕೆ ಯೋಗ ಪರಿಚಯಿಸಿದ್ದು ಭಾರತ- ತಹಶೀಲ್ದಾರ ಗುಡುಮೆ

ಮೂಡಲಗಿ:-ಯೋಗವು ವಿದ್ಯಾರ್ಥಿಗಳಲ್ಲಿ ದೈಹಿಕ ಹಾಗೂ ಮಾನಸಿಕ ಸದೃಢತೆ ತರುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ ಎಂದು ಮೂಡಲಗಿ ತಹಶೀಲ್ದಾರ ಶ್ರೀಶೈಲ ಗುಡುಮೆ ಹೇಳಿದರು.ಮೂಡಲಗಿ ಶಿಕ್ಷಣ ಸಂಸ್ಥೆಯ...

More Articles Like This

error: Content is protected !!
Join WhatsApp Group