ಗ್ರಾಮ ಪಂಚಾಯತ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ 

Must Read
  ಮೂಡಲಗಿ: ಗ್ರಾಮ ಪಂಚಾಯತ  ನೌಕರರಿಗೆ ಸೇವಾ ಹಿರಿತನ ಆಧಾರದಲ್ಲಿ ವೇತನ ನಿಗದಿಗೊಳಿಸಬೇಕು, ಕನಿಷ್ಠ ವೇತನ 31,000 ಸಾವಿರ ರೂಪಾಯಿ ನಿಗದಿಯಾಗಬೇಕು, ಪ್ರತಿ ಗ್ರಾಮ ಪಂಚಾಯತಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ನೇಮಕ, ಪಿಂಚಣಿ ಸೌಲಭ್ಯ ಜಾರಿಯಾಗಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮಂಗಳವಾರ ಗ್ರಾಮ ಪಂಚಾಯತ ನೌಕರರ ಸಂಘ ಮೂಡಲಗಿ ಘಟಕದ ಪದಾಧಿಕಾರಿಗಳು ಮೂಡಲಗಿ ತಾಲ್ಲೂಕು ಪಂಚಾಯತ ಕಚೇರಿ ಮುಂದೆ ಮಂಗಳವಾರ ಪ್ರತಿಭಟಿಸಿ ಮನವಿ ಸಲ್ಲಿಸಿದರು ಮಾಡಿದರು.
   ಪ್ರತಿಭಟನಾಕಾರರನ್ನು ಉದ್ದೇಶಿಸಿ ಗ್ರಾಮ ಪಂಚಾಯತ ನೌಕರರ ಸಂಘದ ಮೂಡಲಗಿ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಹೊಳಿ ಮತ್ತು ಉಪಾಧ್ಯಕ್ಷ ರಾಜು
ದೊಡಮನಿ ಮಾತನಾಡಿ, ‘ಕೆಲವು ಪಂಚಾಯತಿಗಳಲ್ಲಿ ಕಡಿಮೆ ಸಂಬಳದಲ್ಲಿ ನೌಕರರನ್ನು ದುಡಿಸಿಕೊಳ್ಳುತ್ತಿದ್ದಾರೆ. ಅನುಕಂಪ ಆಧಾರ ಮೇಲೆ ನೇಮಕಾತಿಗಳಾಗಿಲ್ಲ, ಬಾಕಿ
ಉಳಿದಿರುವ ಶಿಕ್ಷಣ ಅರ್ಹತೆ ಇಲ್ಲದ ಅನುಮೋದನೆ ಪ್ರಕರಣಗಳನ್ನು ಜಿಲ್ಲಾ ಪಂಚಾಯತಿಗೆ ಕಳಿಸುವಂತಾಗಬೇಕು, ಕಚೇರಿ ಮುಂದೆ ನಿತ್ಯ ಧ್ವಜಾರೋಹಣ ಮಾಡುವ ಸಿಬ್ಬಂದಿಗೆ 60 ರೂ ಸಂಬಳ ನೀಡುವ ಆದೇಶವು ಜಾರಿಯಾಗಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
   ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಎಸ್. ಚಿನ್ನನವರ ಅವರು ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳಿಗೆ ಕಳಿಸುವುದಾಗಿ
ತಿಳಿಸಿದರು..
ಸಮಿತಿಯ ಉಪಾಧ್ಯಕ್ಷ ಬಸವರಾಜ ಮಿರ್ಜಿ, ಗೂಳಪ್ಪ ಹೊಸೂರ, ಗುಲಾಬ ಪಿರಜಾದೆ, ಶಿದ್ದರಾಯ ಬಟಕೋರಿ, ಶಿವಯ್ಯ ಅಂಬಲಿಮಠ, ಮಹಾಂತೇಶ ಕುಂದರಗಿ, ಸಿದ್ದಪ್ಪ ಹುಲಕುಂದ, ಆರ್.ಬಿ. ಕೆಂಚಪ್ಪಗೋಳ, ಸತೀಶ ಶಿರಗನ್ನವರ, ಮಹಾಂತೇಶ ಕುಂದರಗಿ ಇದ್ದರು.
Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group