ಬೀದರ ಜಿಲ್ಲೆ ಔರಾದ ಹಾಗೂ ಭಾಲ್ಕಿ ತಾಲೂಕಿನಲ್ಲಿ ಭಾರಿ ಮಳೆ; ಜನಜೀವನ ಅಸ್ತವ್ಯಸ್ತ

0
293

ಬೀದರ – ಜಿಲ್ಲೆಯ ಔರಾದ ಪಟ್ಟಿಯಲ್ಲಿ ಸುಮಾರು‌ ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಕುಂಭದ್ರೋಣ ಮಳೆಯಿಂದಾಗಿ ಪಟ್ಟಣದಲ್ಲಿ ಇದ್ದ ಚಿಕ್ಕ ಸೇತುವೆಗಳು ಸಂಪೂರ್ಣ ಜಲಾವೃತವಾಗಿವೆ.

ಔರಾದ ಪಟ್ಟಣದ ಸುತ್ತಲೂ ಸುರಿದ ಭಾರಿ ಮಳೆಗೆ ಪಟ್ಟಣದ ರಸ್ತೆ ಹೊಳೆಯಂತಾಗಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಇತ್ತ ಮಹಾರಾಷ್ಟ್ರ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಭಾಲ್ಕಿ ತಾಲ್ಲೂಕಿನ ಹಲವು ಗ್ರಾಮದಲ್ಲಿ ಮಳೆ ಆರ್ಭಟ ಜೋರಾಗಿದ್ದು ತಾಲ್ಲೂಕಿನ ಸಾಯಗಾoವ ಹೋಬಳಿ ವಲಯದ ಗಡಿ ಭಾಗದ ಗ್ರಾಮಗಳಾದ ಅಟ್ಟರಗಾ, ಮೇಹಕರ, ಅಳವಾಯಿ, ಕೊಂಗಳಿ, ಹೀಗೆ ಹಲವು ಗ್ರಾಮಗಳಲ್ಲಿ ಧಾರಾಕಾರವಾಗಿ ಸುರಿದ ಭಾರಿ ಮಳೆಯಿಂದಾಗಿ ಗ್ರಾಮದ ಸುತ್ತಮುತ್ತಲಿನ ಪ್ರದೇಶ ಕೆರೆ ಮತ್ತು ತಗ್ಗು ಪ್ರದೇಶ ತುಂಬಿವೆ. ನೀರು ಈಗ ಮನೆಮನೆಗಳಲ್ಲಿಯೂ ನುಗ್ಗಿದೆ.

ಹೊಲಗದ್ದೆಗಳಲ್ಲಿ ನೀರು ನುಗ್ಗಿ ಬೆಳೆ ಹಾನಿ ಕೂಡ ಸಂಭವಿಸಿದೆ.


ವರದಿ: ನಂದಕುಮಾರ ಕರಂಜೆ, ಬೀದರ