ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಪದಾಧಿಕಾರಿಗಳ ಸನ್ಮಾನ

0
351

ಸಿಂದಗಿ: ರಾಜ್ಯದ ಮುಸ್ಲಿಂ ಸಮುದಾಯದಲ್ಲಿ ಸುಮಾರು 6 ಲಕ್ಷ ಜನ ಮುಲ್ಲಾಗಳು ಅಂಕಿ ಸಂಖ್ಯೆಗಳಲ್ಲಿ ಲಭ್ಯವಾದರೆ 13 ರಾಷ್ಟ್ರಗಳಲ್ಲಿಯೂ ಮುಲ್ಲಾ ಜನರು ಇದ್ದಾರೆ ಎನ್ನುವ ಇತಿಹಾಸ ದೊರೆತಿದ್ದು ಈ ಜನರನ್ನು ಗುರುತಿಸುವಲ್ಲಿ ದೃಶ್ಯ ಹಾಗೂ ಮುದ್ರಣ ಮಾಧ್ಯಮ ಕಾರ್ಯ ಅಮೋಘವಾದದ್ದು ಎಂದು ಕರ್ನಾಟಕ ಮುಲ್ಲಾ ಅಸೋಶನ್‍ನ ತಾಲೂಕು ಅಧ್ಯಕ್ಷ ಡಾ ಅಬುಬಕರ ಮುಲ್ಲಾ ಹೇಳಿದರು.

ಪಟ್ಟಣದ ವಿಜನ್ ಆಸ್ಪತ್ರೆಯಲ್ಲಿ ಕರ್ನಾಟಕ ಮುಲ್ಲಾ ಅಸೋಶನ್ ವತಿಯಿಂದ ಹಮ್ಮಿಕೊಂಡ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ದೇಶದ ಅನೇಕ ರಾಜ ಮನೆತನಗಳಲ್ಲಿ ಮುಲ್ಲಾಗಳು ಇದ್ದರು ಎನ್ನುವ ಇತಿಹಾಸ ಹೇಳುತ್ತದೆ ಇನ್ನು ಹೆಚ್ಚಿನ ಕುರುಹುಗಳನ್ನು ಹೊರ ತೆಗೆಯಲು ಪತ್ರಿಕೆಗಳ ಸಹಕಾರ ಅತ್ಯಗತ್ಯವಾಗಿದ್ದು ಮಾಧ್ಯಮ ಸ್ನೇಹಿತರು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಕರ್ನಾಟಕ ಮುಲ್ಲಾ ಅಸೋಷನ್ ತಾಲೂಕಾ ಉಪಾಧ್ಯಕ್ಷ ಮುನಪ್ಪರ ಮುಲ್ಲಾ, ಅಬ್ದುಲ ಮುಲ್ಲಾ, ಮಹ್ಮದಹುಸೇನ ಮುಲ್ಲಾ, ಜಹೀರ ಮುಲ್ಲಾ, ತನವೀರ ಮುಲ್ಲಾ ಸೇರಿದಂತೆ ಅನೇಕರು ಕಾನಿಪ ಧ್ವನಿಯ ಜಿಲ್ಲಾ ಉಪಾಧ್ಯಕ್ಷ ಮಹ್ಮದಾಸ್ಪಾಕ ಕರ್ಜಗಿ,  ಅಧ್ಯಕ್ಷ ಪಂಡಿತ ಯಂಪೂರೆ, ಪ್ರ.ಕಾರ್ಯದರ್ಶಿ ಗಪೂರ ಮುಜಾವರ, ಕಾರ್ಯದರ್ಶಿ ಮಹಿಬೂಬ ಮುಲ್ಲಾ, ಸದಸ್ಯರಾದ ಆರೀಫ ಅಂತರಗಂಗಿ, ಅಬ್ದುಲ ಹಳಬರ, ವಸೀಂ ಗೋಗಿ, ಆರೀಫ್ ಮನಿಯಾರ, ಮಕಾನದಾರ ಸೇರಿದಂತೆ ಅನೇಕರಿಗೆ ಸನ್ಮಾನಿಸಿ ಗೌರವಿಸಿದರು.