ಸಿಂದಗಿ; ಪಟ್ಟಣದ ಕನ್ನಡಪರ ಹೋರಾಟಗಾರ ಸಂತೋಷ ಮಣಗೀರಿ ಅವರಿಗೆ ರಾಜ್ಯಮಟ್ಟದ ಸ್ಪೂರ್ತಿದಾಯಕ ಪ್ರಶಸ್ತಿ ಲಭಿಸಿದೆ.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ೧೩೪ನೇ ಜಯಂತಿ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕೋರವಾರ ಶಾಖೆ ವತಿಯಿಂದ ಏಪ್ರಿಲ್ ೨೬ರಂದು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಂತೋಷ ಮಣಗಿರಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕನ್ನಡ ನಾಡು ನುಡಿ ಮತ್ತು ಭಾಷೆಗಾಗಿ ಸುಮಾರು ವರ್ಷ ಗಳಿಂದ ಹೋರಾಟ ಮಾಡುತ್ತಿರುವ ಇವರು ಇನ್ನು ಹೆಚ್ಚು ಹೆಚ್ಚು ಪ್ರಶಸ್ತಿಗಳನ್ನು ಪಡೆಯಲಿ ಎಂದು ಹಿತೈಷಿಗಳು ಶುಭ ಕೋರಿದ್ದಾರೆ.