ಬೀದರ – ಬಸವಣ್ಣನವರ ಕರ್ಮ ಭೂಮಿ ಬೀದರ್ ನಲ್ಲಿ ಬಸವ ಭಕ್ತರು ರೋಡಿಗೆ ಇಳಿದು ಬ್ರಹತ್ ಪ್ರತಿಭಟನೆ ಮಾಡಿದರು. ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಯನ್ನು ರದ್ದು ಮಾಡಬೇಕು ಎಂದು ರಾಷ್ಟ್ರೀಯ ಬಸವದಳದ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ರಾಜ್ಯ ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಬಸವಣ್ಣನವರ ಭಕ್ತರು ರಾಜ್ಯ ಸರ್ಕಾರ ಮೊಟ್ಟೆ ನೀಡುವ ಆದೇಶ ಹಿಂದಕ್ಕೆ ಪಡೆಯಲು ಒತ್ತಾಯಿಸಿದರು.
ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಕೋಳಿ ಮೊಟ್ಟೆ ನೀಡಿದ ಆದೇಶ ವನ್ನು ಕೂಡಲೇ ಸರ್ಕಾರ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ರಾಷ್ಟ್ರೀಯ ಬಸವ ದಳ ಜಿಲ್ಲಾ ಘಟಕದಿಂದ ಬಸವ ಮಂಟಪದಿಂದ ಹೊರಟ ಬೃಹತ್ ಪ್ರತಿಭಟನಾ ಮೆರವಣೆಗೆಯು ಜಿಲ್ಲಾಧಿಕಾರಿ ಕಚೇರಿಗೆ ಅವರ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಗೆ ಮನವಿ ಪತ್ರ ಸಲ್ಲಿಸಿದರು.
ಇದೆ ವೇಳೆ ರಾಷ್ಟ್ರೀಯ ಬಸವ ದಳ ಆದ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಲಿಂಗಾಯತ ಧರ್ಮದಲ್ಲಿ ಮೊಟ್ಟೆಯನ್ನು ಮಾಂಸಾಹಾರಿ ಎಂದು ಪರಿಗಣಿಸಲಾಗುತ್ತಿದೆ. ದೇಶದ ಸಂಸ್ಕ್ರತಿ ಪರಂಪರೆಯಲ್ಲಿ ಆಹಾರ ಪದ್ಧತಿಯಲ್ಲಿ ಸಸ್ಯಾಹಾರಿಗೆ ಪ್ರಾತಿನಿಧ್ಯ ನೀಡಲಾಗಿದೆ.ಈ ಆದೇಶದಿಂದ ಮಕ್ಕಳು ತರಗತಿಗೆ ಹಾಜರಾಗುವ ಸಂಖ್ಯೆಯು ಕೂಡ ಕಡಿಮೆಯಾಗುತ್ತದೆ ಎಂದರು.
ಮಕ್ಕಳಿಗೆ ಪೌಷ್ಠಿಕಾಂಶ ಆಹಾರ ಕೊಡಲು ಸಾಕಷ್ಟು ಸಸ್ಯಹಾರಿಯಲಿ ತರಕಾರಿ, ಕಾಳು ಇವೆ ಎಂದ ಅವರು ಕೂಡಲೆ ಸರಕಾರ ಹೊರಡಿಸಿರುವ ಮೊಟ್ಟೆ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಷ್ಟ್ರಿಯ ಬಸವದಳ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಗಾದಗಿ,ಲಿಂಗಾಯತ ಮಹಸಭಾ ಜಿಲ್ಲಾಧ್ಯಕ್ಷ ಕುಶಾಲರಾವ ಪಾಟೀಲ್ ಖಾಜಾಪುರ,ಶಿವರಾಜ ಪಾಟೀಲ್ ಅತಿವಾಳ,ಶಂಕರಾವ ಪಾಟೀಲ್ ಜಹಿರಬಾದ ಸೇರದಂತೆ ಸಮಾಜದ ಮುಖಂಡರು ,ಪೂಜ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.