ಸಿಂದಗಿ ವಿಶ್ವ ಮಹಿಳಾ ದಿನಾಚರಣೆಯ ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್ ಹಾಗೂ ನಿವೇದಿತಾ ಯುವತಿ ಮಂಡಳಿ ಸಿಂದಗಿ ಸಹಯೋಗದೊಂದಿಗೆ ಮಾ. 25 ಮತ್ತು 26 ರಂದು ಎಲ್ಲಾ ಮಹಿಳೆಯರಿಗಾಗಿ ವಿವಿಧ ರೀತಿಯ ಸ್ಪರ್ಧೆ ಹಾಗೂ ರಕ್ತದಾನ ಶಿಬಿರವನ್ನು ಜ್ಯೋತಿ ನಗರದ ಶ್ರೀ ಲಕ್ಷ್ಮೀ ಕಲ್ಯಾಣ ಮಂಟಪ ಏರ್ಪಡಿಸಲಾಗಿದೆ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ನಿವೇದಿತಾ ಯುವತಿ ಮಂಡಳಿಯ ಅಧ್ಯಕ್ಷೆ ಶೈಲಜಾ ಸ್ಥಾವರಮಠ ಅವರು, ರಂಗೋಲಿ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಹನಿಗವನ ಸ್ಪರ್ಧೆ, ಗಾಯನ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಅಡುಗೆ ಸ್ಪರ್ಧೆ, ವೇಷಭೂಷಣ ಸ್ಪರ್ಧೆ, ಕೇಶವಿನ್ಯಾಸ, ಕಣ್ಣು ಕಟ್ಟಿಕೊಂಡು ಶೃಂಗಾರ, ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದಿದ್ದಾರೆ.
25 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲಾ ಮಹಿಳೆಯರಿಗೆ ಅವಕಾಶ. ನೃತ್ಯ ತಂಡಗಳಿಗೆ ಆಹ್ವಾನವಿದೆ. ಸ್ವಸಹಾಯ ಸಂಘಗಳು, ಸಂಘ ಸಂಸ್ಥೆಗಳು, ಉದ್ಯೋಗಸ್ಥ ಮಹಿಳೆಯರು 7 ದಿನ ಮುಂಚಿವಾಗಿಯೇ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ಶೈಲಜಾ ಸ್ಥಾವರ ಮಠ -9972435327, ರಾಜೇಶ್ವರಿ ಪಾಟೀಲ್ – 99015 37598. ಸುನೀತಾ ತೇಲಿ- 77605 78507. ಸುಧಾ ಸುಣಗಾರ -98809 18047, ಮೀನಾಕ್ಷಿ ಶಿಂಧೆ- 99026 56753 ಇವರನ್ನು ಸಂಪರ್ಕಿಸುವಂತೆ ಕೋರಿದ್ದಾರೆ.